ಮಡಿಕೇರಿ ಆ.12 NEWS DESK : ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯನ್ನು ಅನುಸರಿಸಿ ಮುನ್ನುಗ್ಗುತ್ತಿರುವ ರೋಟರಿ ಇದೇ ಕಾರಣದಿಂದಾಗಿಯೇ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ 119 ವಷ೯ಗಳಿಂದಲೂ ಮುನ್ನಡೆದಿದೆ ಎಂದು ಮುಂಬೈನ ರೋಟರಿ ಪ್ರಮುಖ, ಡಾ, ದೀಪಕ್ ಪುರೋಹಿತ್ ಹೇಳಿದ್ದಾರೆ. 7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚಚ್೯ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿಂದ ಆಯೋಜಿತ ರೋಟರಿ ಸದಸ್ಯತ್ನ ಮತ್ತು ಪಬ್ಲಿಕ್ ಇಮೇಜ್ ಸಮಾವೇಶವಾದ ವಿಸ್ತಾರ ಉದ್ಘಾಟಿಸಿ ಮಾತನಾಡಿದ ಡಾ, ದೀಪಕ್ ಪುರೋಹಿತ್, ರೋಟರಿಯಲ್ಲಿ ಪ್ರಸ್ತುತ 11,34 ಲಕ್ಷ ಸದಸ್ಯರು ವಿಶ್ವವ್ಯಾಪಿ ಇದ್ದಾರೆ, ಕಳೆದ ವಷ೯ದ ದುಲೈ ನಿಂದ ಈವರೆಗೂ 19,400 ಹೊಸ ಸದಸ್ಯರನ್ನು ರೋಟರಿ ಹೊಂದಿದೆ, 36,860 ರೋಟರಿ ಕ್ಲಬ್ ಗಳು ಜಗತ್ತಿನಲ್ಲಿವೆ, ರೋಟರಿ ಸದಸ್ಯರ ಪೈಕಿ ಶೇ.26 ರಷ್ಟು ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆಯಾಗಿದೆ ಎಂದರು ಮಾಹಿತಿ ನೀಡಿದರು. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಹೊಸಬ್ಬರು ರೋಟರಿ ಸದಸ್ಯರಾಗಿ ಸೇಪ೯ಡೆಯಾಗುತ್ತಿರುವುದು ಸೇವಾ ಕಾಯ೯ಗಳಿಗೆ ಭಾರತೀಯರು ನೀಡಿದ ಮನ್ನಣೆಗೆ ಸಾಕ್ಷಿಯಾಗಿದೆ ಎಂದರು. ಕೊಡಗನ್ನೊಳಗೊಂಡ ನಾಲ್ಕು ಕಂದಾಯ ಜಿಲ್ಲೆಗಳಿರುವ ರೋಟರಿ ಜಿಲ್ಲೆ 3181 ನಲ್ಲಿ ಈ ವಷ೯ 3550 ಸದಸ್ಯರಿದ್ದು ಕಳೆದ 1 ವಷ೯ದಲ್ಲಿ 100 ಹೊಸ ಸದಸ್ಯರ ಸೇಪ೯ಡೆಯಾಗಿದೆ ಎಂದೂ ದೀಪಕ್ ಪುರೋಹಿತ್ ಮಾಹಿತಿ ನೀಡಿದರು, ನೂತನವಾಗಿ ರೋಟರಿ ಸಂಸ್ಥೆಗಳಿಗೆ ಸೇರುವ ಸದಸ್ಯರಿಗೆ ಮತ್ತಷ್ಟು ಮಾಹಿತಯ ಅಗತ್ಯವಿದ್ದು, ಹೀಗಾದಾಗ ಶಾಶ್ವತವಾಗಿ ಅಂಥವರು ಸದಸ್ಯರಾಗಿ ಮುಂದುವರೆಯರು ಸಾಧ್ಯ ಎಂದೂ ದೀಪಕ್ ಸಲಹೆ ನೀಡಿದರು. ರೋಟರಿ ಮಾಜಿ ಗವನ೯ರ್ ಹೊಸಪೇಟೆಯ ಗೋಪಿನಾಥ್ ಮಾತನಾಡಿ, ರೋಟರಿಯಲ್ಲಿ ಜನಸೇವೆಗಾಗಿನ ಅತ್ಯುತ್ತಮ ಯೋಜನೆಗಳಿಗೆ ಎಂದಿಗೂ ಅನುದಾನದ ಕೊರತೆ ಭಾದಿಸದು, ಜಗತ್ತಿನ ಎಲ್ಲಿಂದಲೇ ಆದರೂ ಯೋಜನೆಗಳಿಗೆ ಹಣದ ನೆರವು ದೊರಕುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ರೋಟರಿ ಮಾಜಿ ಗವನ೯ರ್ ಚೆನ್ನೈನ ಮುನಿ ಗಿರೀಶ್ ಪಬ್ಲಿಕ್ ಇಮೇಜ್ ರೋಟರಿಗೆ ಅತ್ಯಂತ ಅಗತ್ಯವಾಗಿದ್ದು ಸಾಮಾಜಿಕ ಸೇವಾ ವಲಯದಲ್ಲಿ ರೋಟರಿ ಯೋಜನೆಗಳನ್ನು ಕೇಂದ್ರೀಕರಿಸಿ ವಿನೂತನ ಕಾಯ೯ಯೋಜನೆ ಜಾರಿಗೊಳಿಸಿದರೆ ಸಾವ೯ಜನಿಕರ ಪ್ರಶಂಸೆ ಖಂಡಿತಾ ಎಂದು ಕಿವಿಮಾತು ಹೇಳಿದರು. ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗೆ ಸೇರಲು ಸಮಯ ಇಲ್ಲ ಎಂಬುದು ಸರಿಯಾದ ವಾದ ಅಲ್ಲ ಸಮಾಜಸೇವೆ ಮಾಡಲು ಪ್ರತೀಯೋವ೯ರೂ ಸಮಯ ಮಾಡಿಕೊಂಡಲ್ಲಿ ಖಂಡಿತಾ ಅಂಥವರಿಗೆ ರೋಟರಿ ಸೂಕ್ತ ಅವಕಾಶ ನೀಡುತ್ತದೆ ಎಂದರು. ಇದೇ ಸಂದಭ೯ ರೋಟರಿ ಸದಸ್ಯತ್ವ ಕುರಿತ ಸಂವಾದದಲ್ಲಿ ರೋಟರಿ ಪ್ರಮುಖರಾದ ಅನಿಲ್ ಹೆಚ್.ಟಿ., ಬಿ.ಜಿ. ಅನಂತಶಯನ, ಡಾ. ಸಿಆರ್.ಪ್ರಶಾಂತ್, ರಾಘವೇಂದ್ರ, ಜಗದೀಶ್, ರಚನಾ ನಾಗೇಶ್, ಪಿ.ಆರ್. ಭಟ್ ಪಾಲ್ಗೊಂಡಿದ್ದರು. ರೋಟರಿ ಜಿಲ್ಲೆ 3181 ನ ಮಾಜಿ ಗವನ೯ರ್ ಗಳಾದ ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ರವೀಂದ್ರ ಭಟ್, ಡಾ.ನಾಗಾಜು೯ನ, ದೇವದಾಸ್ ರೈ, ಪ್ರಕಾಶ್ ಕಾರಂತ್, ಕೃಷ್ಣ, ಮುಂದಿನ ಸಾಲಿನ ಗವನ೯ರ್ ರಾಮಕೖಷ್ಣ, ನಿಯೋಜಿತ ಗವನ೯ರ್ ಸತೀಶ್ ಬೋಳಾರ್, ಕುಶಾಲನಗರ ರೋಟರಿ ಅಧ್ಯಕ್ಷ ಸಿ.ಬಿ.ಹರೀಶ್, ವಲಯ 6 ರ ಸಹಾಯಕ ಗವನ೯ರ್ ಡಾ, ಹರಿಶೆಟ್ಟಿ, ಸಮ್ಮೇಳನ ಸಮಿತಿ ಅಧ್ಯಕ್ಷ ಪಿ.ಆರ್.ನವೀನ್ ಸಮ್ಮೇಳನದ ವೇದಿಕೆಯಲ್ಲಿದ್ದರು. ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ ರೋಟರಿ ಸಂಸ್ಥೆಗಳ 450 ಕ್ಕೂ ಅಧಿಕ ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು, ಅತ್ಯಧಿಕ ಸದಸ್ಯರ ನೋಂದಣಿಗಾಗಿ ಮಡಿಕೇರಿಯ ರೋಟರಿ ವುಡ್ಸ್ ಮತ್ತು ಸೋಮವಾರಪೇಟೆ ರೋಟರಿ ಹಿಲ್ಸ್, ಕೊಡ್ಲಿಪೇಟೆ ರೋಟರಿ ಸಂಸ್ಥೆಗಳಿಗೆ ಪ್ರಶಂಸನ ಪತ್ರ ನೀಡಲಾಯಿತು.