ಮಡಿಕೇರಿ ಆ.13 NEWS DESK : ಒಲಂಪಿಕ್ಸ್ ಕ್ರೀಡೆಯು ಕ್ರಿಸ್ತ ಪೂರ್ವ 776ರಲ್ಲಿ ಗ್ರೀಕ್ ನ ಒಲಂಪಿಯಾದಲ್ಲಿ ಪ್ರಾರಂಭವಾಯಿತು. ಆದ್ದರಿಂದ ಒಲಂಪಿಕ್ ಗೇಮ್ಸ್ ಎಂಬ ಹೆಸರನ್ನು ಕೂಡ ಪಡೆದುಕೊಂಡಿತ್ತು. ಮೊದಲ ಆಧುನಿಕ ಒಲಂಪಿಕ್ಸ್ ಕ್ರೀಡೆಯು 1896ರಲ್ಲಿ ಗ್ರೀಕ್ ನ ಅಥೆನ್ಸ್ ನಲ್ಲಿ ಪ್ರಾರಂಭವಾಯಿತು. ಒಲಂಪಿಕ್ಸ್ ವಿಶ್ವದಲ್ಲೇ ಶ್ರೇಷ್ಠವಾದ ಕ್ರೀಡಾಕೂಟ. ಇದು 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಒಲಂಪಿಕ್ಸ್ ಲಾಂಛನದಲ್ಲಿರುವ ಐದು ಉಂಗುರಗಳು ಇದು ಖಂಡಗಳಾದ ಆಸ್ಟ್ರೇಲಿಯ, ಏಷ್ಯಾ, ಆಫ್ರಿಕಾ, ಯುರೋಪ್ ಹಾಗೂ ಅಮೇರಿಕಾವನ್ನು ಪ್ರತಿನಿಧಿಸುತ್ತದೆ. ಈ ಐದು ಉಂಗುರದ ಬಣ್ಣಗಳು ಐದು ದೇಶದ ಧ್ವಜದಲ್ಲಿ ಕನಿಷ್ಠ ಒಂದು ಬಣ್ಣವನ್ನು ಪ್ರತಿನಿಧಿಸುತ್ತದೆ. ಕೊಡಗಿನಿಂದ 11 ಒಲಂಪಿಕ್ಸ್ ಹಾಕಿ ಆಟಗಾರರು, ಇತರ ಕ್ರೀಡೆಯಿಂದ 7 ಒಲಂಪಿಕ್ಸ್ ಕ್ರೀಡಾಪಟುಗಳು ಹಾಗೂ 5 ಒಲಂಪಿಕ್ಸ್ ತರಬೇತುದಾರರನ್ನು ಕೊಟ್ಟ ಪುಟ್ಟ ಜಿಲ್ಲೆ ಕೊಡಗು.
ಹಾಕಿ ಆಟಗಾರರು
- ಬಿಳಿಮಗ್ಗ ಪಿ ಗೋವಿಂದ : ಮೂಲತಃ ಸೋಮವಾರಪೇಟೆ, 1972 ಮ್ಯುನಿಚ್ ಒಲಂಪಿಕ್ಸ್ ನ ಕಂಚಿನ ಪದಕ ವಿಜೇತ, 1976 ಮಾಂಟ್ರಿಲ್ ಒಲಂಪಿಕ್ಸ್ ನಲ್ಲಿ ಆಡಿದ ಅದ್ಭುತ ಆಟಗಾರ, ಇಂಡಿಯನ್ ಏರ್ ಲೈನ್ಸ್ ತಂಡದ ಪರ ಆಡುತ್ತಿದ್ದರು.
- ಡಾ.ಮೊಳ್ಳೇರ ಪಿ ಗಣೇಶ್ : ಮೂಲತಃ ಸುಂಟಿಕೊಪ್ಪ, ಪದ್ಮಶ್ರೀ ಪುರಸ್ಕೃತ, 1972 ಮ್ಯುನಿಚ್ ಒಲಂಪಿಕ್ಸ್ ನ ಕಂಚಿನ ಪದಕ ವಿಜೇತ, ಕೋರ್ ಆಫ್ ಸಿಗ್ನಲ್ಸ್ ನ ಅದ್ಭುತ ಮುನ್ನಡೆ ಹಾಕಿ ಆಟಗಾರ ಹಾಗು ಸರ್ವಿಸಸ್ ನಿಂದ ಭಾರತ ಪ್ರತಿನಿಧಿಸಿದ್ದರು.
- ಮನೆಯಪಂಡ ಎಂ ಸೋಮಯ್ಯ : ಮೂಲತಃ ಪೊನ್ನಂಪೇಟೆ, 1980 ಮಾಸ್ಕೋ ಒಲಂಪಿಕ್ಸ್ ನ ಚಿನ್ನದ ಪದಕ ವಿಜೇತ, 1984 ಲಾಸ್ ಏಂಜಲೀಸ್ ಒಲಂಪಿಕ್ಸ್, 1988 ಸಿಯೋಲ್ ಒಲಂಪಿಕ್ಸ್ ನಾಯಕ.
3 ಒಲಂಪಿಕ್ಸ್ ಆಡಿದ ಕೊಡಗಿನ ಏಕೈಕ ಹಾಕಿ ಆಟಗಾರ, ಮಹೇಂದ್ರ ಮುಂಬೈ ತಂಡದ ಪರ ಆಡಿದ್ದರು. - ಐಣ.ಅoಟ.ಬಾಳೆಯಡ ಕೆ ಸುಬ್ರಮಣಿ : ಮೂಲತಃ ನಾಪೋಕ್ಲು, 1988 ಸಿಯೋಲ್ ಒಲಂಪಿಕ್ಸ್ ಆಡಿದ ಹಾಕಿ ಆಟಗಾರ, M.E.G ಗೆ ಆಡಿ ಸರ್ವಿಸಸ್ ಪರ ಭಾರತದ ತಂಡವನ್ನು ಪ್ರತಿನಿಧಿಸಿದರು.
- ಚೆಪ್ಪುಡೀರ ಎಸ್ ಪೂಣಚ್ಚ : ಮೂಲತಃ ಪೊನ್ನಂಪೇಟೆ, 1992 ಬ್ರಾಸಿಲೋನ ಒಲಂಪಿಕ್ಸ್, S.B.I ತಂಡದ ಆಟಗಾರ ಹಾಗೂ ಅಲ್ಲಿನ ಉನ್ನತ ಅಧಿಕಾರಿ. ಕರ್ನಾಟಕ ತಂಡದ ಪರ ಆಡಿದರು.
- ಡಾ. ಅಂಜಪರುವಂಡ ಸುಬ್ಬಯ್ಯ : ಮೂಲತಃ ಮಡಿಕೇರಿ ತಾಲ್ಲೂಕಿನ ಬೋಯಿಕೆರೆ, ಹಾಕಿ ಕರ್ನಾಟಕದ ಕಾರ್ಯದರ್ಶಿ, 1992 ಬ್ರಾಸಿಲೋನ ಒಲಂಪಿಕ್ಸ್, 1996 ಅಟ್ಲಾಂಟ ಒಲಂಪಿಕ್ಸ್ ಆಡಿದ ಅದ್ಭುತ ಗೋಲ್ ಕೀಪರ್, ಇಂಡಿಯನ್ ಏರ್ ಲೈನ್ಸ್ ತಂಡದ ಪರ ಆಡುತ್ತಿದ್ದರು.
- ಅರ್ಜುನ್ ಹಾಲಪ್ಪ : ಮೂಲತಃ ಸೋಮವಾರಪೇಟೆ, 2004 ಅಥೆನ್ಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು, ಇಂಡಿಯನ್ ಏರ್ ಲೈನ್ಸ್ ನ ಆಟಗಾರ.
- ಒಕ್ಕಲಿಗರ ರಘುನಾಥ್ : ಮೂಲತಃ ಹಾತೂರು, 2012 ಲಂಡನ್ ಒಲಂಪಿಕ್ಸ್ ಹಾಗೂ 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. I.O.C.L ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
- ಸಣ್ಣುವಂಡ ಕೆ ಉತ್ತಪ್ಪ : ಮೂಲತಃ ದೇವರಪುರ, 2012 ಲಂಡನ್ ಒಲಂಪಿಕ್ಸ್ ಹಾಗೂ 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.I.O.C.L ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
- ಸೋಮವಾರಪೇಟೆ ವಿ ಸುನಿಲ್ : ಮೂಲತಃ ಸೋಮವಾರಪೇಟೆ 2012 ಲಂಡನ್ ಒಲಂಪಿಕ್ಸ್ ಹಾಗೂ 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.B.P.C.L ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
- ಚೇಂದಂಡ ನಿಕಿನ್ ತಿಮ್ಮಯ್ಯ : ಮೂಲತಃ ಚೆಂಬೆಬೆಳ್ಳೂರು, 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಕೆನರಾ ಬ್ಯಾಂಕ್ ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ಇತರ ಕ್ರೀಡೆಯ ಕ್ರೀಡಾಪಟುಗಳು ::
- ಚೇನಂಡ ಸಿ ಮಾಚಯ್ಯ : ಮೂಲತಃ ಕೋಕೇರಿ, ಅದ್ಭುತ ಬಾಕ್ಸರ್, 1976 ಮಾಂಟ್ರಿಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. M.E.G ಗೆ ಆಡಿ ಸರ್ವಿಸಸ್ ಪರ ಭಾರತದ ತಂಡವನ್ನು ಪ್ರತಿನಿಧಿಸಿದರು.
- ಪುಚ್ಚಿಮಂಡ ಅಶ್ವಿನಿ ನಾಚಪ್ಪ :
ಮೂಲತಃ ಬಿಟ್ಟಂಗಾಲ, ಅದ್ಭುತ ಅಥ್ಲೆಟ್ (ಓಟಗಾರ್ತಿ), 1988 ಸಿಯೋಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ವಿಜಯ ಬ್ಯಾಂಕ್ ನ ಉದ್ಯೋಗಿಯಾಗಿದ್ದರು. ಪ್ರಸ್ತುತ ತಮ್ಮ ಸ್ವಂತ K.A.L.S ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. - ಗುಡ್ಡಂಡ ಜಿ ಪ್ರಮೀಳ : ಮೂಲತಃ ಬಿಟ್ಟಂಗಾಲ, ಅದ್ಭುತ ಅಥ್ಲೆಟ್(ಓಟಗಾರ್ತಿ), 2000 ಸಿಡ್ನಿ ಒಲಂಪಿಕ್ಸ್ ಹಾಗೂ 2008 ಬೀಜಿಂಗ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ತಮ್ಮದೇ ಆದ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ.
- ಮಚ್ಚಂಡ ರೋಹನ್ ಬೋಪಣ್ಣ : ಮೂಲತಃ ಮಾದಾಪುರ, ಪದ್ಮಶ್ರೀ ಪುರಸ್ಕೃತ, ಅದ್ಭುತ ಟೆನ್ನಿಸ್ ಆಟಗಾರ, 2012 ಲಂಡನ್ ಒಲಂಪಿಕ್ಸ್ 2016 ರಿಯೋ ಒಲಂಪಿಕ್ಸ್ ಹಾಗೂ 2024 ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ವೃತ್ತಿಪರ ಟೆನ್ನಿಸ್ ಆಟದ ಸಿಂಗಲ್ಸ್ ಅಥವಾ ಡಬಲ್ಸ್ ನಲ್ಲಿ ವಿಶ್ವದ ಅತ್ಯಂತ ಹಿರಿಯ ನಂ.01 ಆಟಗಾರ ಎಂದು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ.
- ಮಾಚೆಟ್ಟೀರ ಆರ್ ಪೂವಮ್ಮ : ಮೂಲತಃ ಬಿಟ್ಟಂಗಾಲ, ಅದ್ಭುತ ಅಥ್ಲೆಟ್ (ಓಟಗಾರ್ತಿ), 2008 ಬೀಜಿಂಗ್ ಒಲಂಪಿಕ್ಸ್, 2016 ರಿಯೋ ಒಲಂಪಿಕ್ಸ್ ಹಾಗೂ 2024ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ONGC ಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
- ಮಾಚಿಮಂಡ ಅಶ್ವಿನಿ ಪೊನ್ನಪ್ಪ : ಮೂಲತಃ ಅಮ್ಮತ್ತಿ, ಬ್ಯಾಡ್ಮಿಂಟನ್ ಆಟಗಾರ್ತಿ, 2012 ಲಂಡನ್ ಒಲಂಪಿಕ್ಸ್, 2016 ರಿಯೋ ಒಲಂಪಿಕ್ಸ್ ಹಾಗು 2024 ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.
- ಕೇಳಪಂಡ ಗಣಪತಿ : ಮೂಲತಃ ಕೊಳತೋಡು ಬೈಗೋಡು, ಸೈಲಿಂಗ್ ಕ್ರೀಡಾಪಟು, 2021 ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ.
ಒಲಂಪಿಕ್ಸ್ ತರಬೇತಿದಾರರು ::
- ಡಾ. ಮೊಳ್ಳೇರ ಪಿ ಗಣೇಶ್ : 1980 ಮಾಸ್ಕೋ ಒಲಂಪಿಕ್ಸ್ (ಚಿನ್ನದ ಪದಕ) ಹಾಗು 1988 ಸಿಯೋಲ್ ಒಲಂಪಿಕ್ಸ್ ನ ಭಾರತ ಹಾಕಿ ತಂಡದ ತರಬೇತಿದಾರ.
- ಬಿಳಿಮಗ್ಗ ಪಿ ಗೋವಿಂದ : 1988 ಸಿಯಲ್ ಒಲಂಪಿಕ್ಸ್ ನ ಭಾರತ ಹಾಕಿ ತಂಡದ ತರಬೇತಿದಾರ. 1975 ವಿಶ್ವಕಪ್ ವಿಜೇತ.
- ಜಗ್ಗಾರಂಡ ಅಪ್ಪಚ್ಚು : ಮೂಲತಃ ಕೊಡಗರಹಳ್ಳಿಯ ಸುಂಟಿಕೊಪ್ಪ ಗ್ರಾಮ, ಕರ್ನಾಟಕ ಸರ್ಕಾರದ ಯುವಜನ ಸೇವಾ ಇಲಾಖೆಯ ಅಥ್ಲೆಟಿಕ್ಸ್ ತರಬೇತಿದಾರ, 1984 ಲಾಸ್ ಏಂಜಲೀಸ್ ಒಲಂಪಿಕ್ಸ್ ನ ಭಾರತದ ಪರ ತರಬೇತಿದಾರ.
- ಅಂಕಿತ ಸುರೇಶ್ : ಸುಂಟಿಕೊಪ್ಪದ ಕಂಬಿಬಾಣೆ, ಹಾಕಿ ತರಬೇತುದಾರರು, DYES ಪೊನ್ನಂಪೇಟೆ, 2021 ಟೋಕಿಯೋ ಒಲಂಪಿಕ್ಸ್ ನ ಭಾರತದ ಮಹಿಳಾ ತಂಡದ ತರಬೇತುದಾರರು, ಪ್ರಸ್ತುತ ಹಾಕಿ ಇಂಡಿಯಾದ ತರಬೇತುದಾರರಾಗಿದ್ದಾರೆ.
- ಚೇನಂಡ ವಿಶು ಕುಟ್ಟಪ್ಪ : ಮೂಲತಃ ಕೋಕೇರಿ, ಬಾಕ್ಸಿಂಗ್ ತರಬೇತುದಾರ, 2021 ಟೋಕಿಯೋ ಒಲಂಪಿಕ್ಸ್ ಹಾಗೂ 2024 ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ. ಇವರು ಒ.ಇ.ಉ ಯಿಂದ ಸರ್ವಿಸಸ್ ನ ತರಬೇತಿದಾರರಾಗಿದ್ದಾರೆ.
ರಾಷ್ಟ್ರ ಕ್ರೀಡೆ
ಹಾಕಿಯಲ್ಲಿ 8 ಚಿನ್ನದ ಪದಕ, 1 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಆದ್ದರಿಂದ ಹಾಕಿಯನ್ನು ಭಾರತದ ರಾಷ್ಟ್ರ ಕ್ರೀಡೆ ಎಂದು ಕರೆಯಲಾಗುತ್ತದೆ. ಕೊಡಗಿನ 18 ಆಟಗಾರರು ಹಾಗೂ 5 ತರಬೇತಿದಾರರಲ್ಲಿ ಡಾಕ್ಟರೇಟ್ ಪದವಿಧರರು, ಪದ್ಮಶ್ರೀ, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು ಇದ್ದಾರೆ. ಇವರೆಲ್ಲ ಕೊಡಗಿನ ಮುಕುಟ ಮಣಿಗಳು. ಇವರೆಲ್ಲರ ಭಾವಚಿತ್ರವನ್ನು ಕೊಡಗಿನ ಜಿಲ್ಲಾಡಳಿತ ಕಛೇರಿಯಲ್ಲಿ ಪ್ರಕಟಿಸಬೇಕೆಂದು ಕೊಡಗಿನ ಕ್ರೀಡಾ ಸಂಸ್ಥೆಗಳು ಒತ್ತಾಯಿಸಿ ಕಾರ್ಯರೂಪಕ್ಕೆ ತರಬೇಕು. ಒಲಂಪಿಕ್ಸ್ ನಲ್ಲಿ ಪದಕ ಗೆದ್ದರೆ ಭಾರತ ಸರ್ಕಾರವು ಜೀವಿತಾವಧಿವರೆಗೂ ಪಿಂಚಣಿಯನ್ನು ನೀಡುತ್ತದೆ. ಒಲಂಪಿಕ್ಸ್ ಆಟದಲ್ಲಿ ಭಾಗವಹಿಸಿದ ಆಟಗಾರರನ್ನು ಒಲಂಪಿಯನ್ ಗಳು ಎಂದು ಕರೆಯಲಾಗುತ್ತದೆ. ಈ ಆಟಗಾರರಿಗೆ ಮಾತ್ರ ಒಲಂಪಿಕ್ಸ್ ಲಾಂಛನವನ್ನು ಬಳಸಲು ಅವಕಾಶವಿರುತ್ತದೆ. ಈ ಎಲ್ಲಾ ಒಲಂಪಿಯನ್ ಗಳಿಗೆ ಕೊಡಗಿನಲ್ಲಿ ನಿವೇಶನ ಮಂಜೂರು ಮಾಡಿ ಒಲಂಪಿಯನ್ಸ್ ವಿಲೇಜ್ ಎಂದು ನಾಮಕರಣ ಮಾಡಿದರೆ ಕೊಡಗಿನ ಕ್ರೀಡಾ ತಾರೆಯರಿಗೆ ಇದು ಗೌರವ ಹೆಚ್ಚಿಸುತ್ತದೆ ಹಾಗೂ ಯುವ ಆಟಗಾರರಿಗೂ ಆಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರ ಭಾವಚಿತ್ರವನ್ನು “ಊಚಿಟಟ oಜಿ ಈಚಿme” ಎಂದು ದಾಖಲಿಸಿ ಗೌರವ ನೀಡಬೇಕು.
ಕ್ರೀಡಾ ವರದಿ : ಕ್ರೀಡಾ ವರದಿಗಳು ಕೇವಲ ಪುರಸ್ಕಾರಕ್ಕೆ ಮಾತ್ರ ಸೀಮಿತವಾಗಬಾರದು, ನೈಜಾಂಶಗಳನ್ನು ಬರೆಯಬೇಕು ಎಂದು ಹಿಂದೂ ಪತ್ರಿಕೆ ಸಂಪಾದಕ ರಂಗಸ್ವಾಮಿ ಅವರು 1950ರಲ್ಲಿ ಮುನ್ನುಡಿ ಬರೆದಿದ್ದರು. ಕೊಡಗಿನಲ್ಲಿ ಒಳಾಂಗಣ ಕ್ರೀಡಾಂಗಣ, ಆಸ್ಟ್ರೋ ಟರ್ಫ್ ಹಾಗೂ ಕ್ರೀಡಾ ಸಾಮಗ್ರಿಗಳ ಸೌಲಭ್ಯಗಳನ್ನು ಮತ್ತಷ್ಟು ವೃದ್ಧಿಸಿದರೆ ಇನ್ನು ಹೆಚ್ಚಿನ ಒಲಂಪಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಬಹುದು ಎಂಬುದೊಂದು ಆಶಾಭಾವನೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ