ಮದೆ ಗ್ರಾ.ಪಂ ಸದಸ್ಯೆ ಪಿ.ಎ.ಚಂದ್ರಾವತಿ ಹಾಗೂ ಬೆಟ್ಟಗೇರಿ ಗ್ರಾ.ಪಂ ಸದಸ್ಯೆ ಜಲಜಾಕ್ಷಿ ಧ್ವಜಾರೋಹಣ ನೆರವೇರಿ ದಿನದ ಮಹತ್ವ ತಿಳಿಸಿದರು. ಸ್ವಾತಂತ್ರ್ಯೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರನ್ನು ಪ್ರತಿನಿತ್ಯ ಸ್ಮರಿಸುವಂತಾಗಬೇಕು. ಅವರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ ಮದೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಬಿ.ಸಿ.ಗಿರಿಜಾ, ಅಂಗನವಾಡಿ ಕಾರ್ಯಕರ್ತೆ ನಳಿನಿ ಹಾಗೂ ಶ್ರೀದೇವಿ, ಶ್ರೀ ಲಕ್ಷ್ಮಿ ಸ್ವಸಾಹ ಸಂಘದ ಪದಾಧಿಕಾರಿಗಳು, ಸ್ವಯಂ ಸೇವಾ ಸಂಘ ಮತ್ತು ಗ್ರಾಮಸ್ಥರು, ಪುಟಾಣಿ ಮಕ್ಕಳು ಹಾಜರಿದ್ದರು.