ಮಡಿಕೇರಿ ಆ.15 NEWS DESK : ಭಾರತ ಸರ್ಕಾರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಸಹಯೋಗದಲ್ಲಿ ಮಡಿಕೇರಿಯ ನೆಹರು ಯುವ ಕೇಂದ್ರದಲ್ಲಿ 78ನೇ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು. ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ.ಸುಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳಾದ ದೀಪ್ತಿ, ರಾಷ್ಟ್ರಿಯ ಸೇವಾ ಕಾರ್ಯಕರ್ತೆ ರಂಜಿತಾ ಹಾಗೂ ಸ್ಥಳೀಯ ಯುವಕ ಸಂಘದ ಸದಸ್ಯರು ಹಾಜರಿದ್ದರು.