ಮಡಿಕೇರಿ ಆ.16
NEWS DESK : ಕೊಡಗು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಹಾಗೂ ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಕೊಡಗು ಘಟಕದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕವಿಗೋಷ್ಠಿ-ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ಪೊಲೀಸ್ ಹಾಗೂ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ನಗರದ ಪೊಲೀಸ್ ಮೈತ್ರಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಧ್ವಜಾರೋಹಣ ನೆರವೇರಿಸಿ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಕವಿಗೋಷ್ಠಿ-ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಕನ್ನಡ ಸರಿಗಮಪ ಖ್ಯಾತಿಯ ಯುವ ಗಾಯಕ ಅನ್ವಿತ್‍ಕುಮಾರ್, ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಉದ್ಘಾಟಿಸಿದರು. ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಹಾಗೂ ಸಂಸ್ಕೃತಿ ಸಿರಿ ಬಳಗ ಟ್ರಸ್ಟಿನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೈದ್ಯರುಗಳಾದ ಮಡಿಕೇರಿಯ ಮಕ್ಕಳ ತಜ್ಞ ಡಾ.ದೇವಯ್ಯ, ಡಾ. ಶ್ಯಾಮ್ ಅಪ್ಪಣ್ಣ, ಡಾ. ಆನಂದ್, ಡಾ.ಲೋಕೇಶ್, ಡಾ. ಸುಧಾಕರ್, ಡಾ.ಅನುಶ್ರೀ, ಡಾ.ದೀಪಾ ಸೇರಿದಂತೆ ಮೈಸೂರಿನ ಸುಯೋಗ ಆಸ್ಪತ್ರೆಯ ವೈದ್ಯರುಗಳು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು, ಕೊಡಗು ಮೆಡಿಕಲ್ ಕಾಲೇಜ್ ವೈದ್ಯರಾದ ಡಾ.ಶ್ರೀಕಾಂತ್, ಡಾ.ಹರಿನಾರಾಯಣ್ ಸೇರಿದಂತೆ ವಿವಿಧ ವಿಭಾಗದ ವೈದ್ಯಧಿಕಾರಿಗಳು ತಪಾಸಣೆ ನಡೆಸಿ, ಸಮಾಲೋಚನೆ ನೀಡಿದರು. ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಕಾರಾಗೃಹದ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರಾದಿಯಾಗಿ 140 ಜನರು ಶಿಬಿರವನ್ನು ಸದುಪಯೋಗಪಡಿಸಿಕೊಂಡರು. ಶಿಬಿರದ ಜೊತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕವಿ ಗೋಷ್ಠಿ, ದೇಶಭಕ್ತಿ ಗಾಯನ ಸ್ಪರ್ಧೆಗಳೂ ನಡೆದವು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಜನಪದ ಪರಿಷತ್ತು ಅಧ್ಯಕ್ಷರು ಹಾಗೂ ಪತ್ರಕರ್ತರಾದ ಹೆಚ್.ಟಿ.ಅನಿಲ್, ಸಿನಿಮಾ ನಿರ್ದೇಶಕಿ, ನಿರ್ಮಾಪಕಿ ಕೊಟ್ಟುಕತ್ತಿರಾ ಯಶೋಧ ಪ್ರಕಾಶ್, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ನ ಟ್ರಸ್ಟಿ ಈರಮಂಡ ವಿಜಯ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಮೇಚಿರ ರವಿಶಂಕರ್ ನಾಣಯ್ಯ, ಸಮಾಜ ಸೇವಕರಾದ ಕೆ.ಎಂ.ಬಿ ಗಣೇಶ್, ಹೈಕೋರ್ಟ್ ವಕೀಲರಾದ ಆನೇಡ ಹರೀಶ್ ಗಣಪತಿ, ಕೂಡಂಡ ಸೀಮಾ ಕಾವೇರಪ್ಪ, ಪ್ರಮುಖರಾದ ಕೇಚಂಡ ಸುನೀತಾ ಗಣೇಶ್, ಕಳ್ಳಿರ ಕಾಂಚನ ಸುಬ್ಬಯ್ಯ, ಮುಕ್ಕಾಟೀರ ಪುಣ್ಯ, ಅಪ್ಪಚಂಡ ಸುಚಿತ, ಕೂಡಂಡ ದಕ್ಷಕ್ ಪೂಣಚ್ಚ, ವೈದ್ಯಕೀಯ ವಿದ್ಯಾರ್ಥಿಗಳ ತಂಡ, ಸಂಸ್ಕೃತಿ ಸಿರಿ ಬಳಗದ ಟ್ರಸ್ಟಿಗಳು ಹಾಜರಿದ್ದರು. ಅಪ್ಪಚಂಡ ಜಸಿಕ ಕಾವೇರಪ್ಪ ಪ್ರಾರ್ಥಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯರಾದ ಅನುದೀಪ ಹಾಗೂ ಮನೋಜ್ ಶೇಖರ್ ನಿರೂಪಿಸಿದರು. ನಾಳಿಯಂಡ ಜಯಂತಿ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್ ವಂದಿಸಿದರು.
ಸಾಧಕರಿಗೆ ಸನ್ಮಾನ :: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವೆ ಹಾಗೂ ಪತ್ರಿಕಾರಂಗದ ಸೇವೆಗಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞ ಡಾ. ರಾಘವನ್ ಹಾಗೂ ಈ.ಎನ್.ಟಿ ತಜ್ಞ ಡಾ. ಮೋಹನ್ ಅಪ್ಪಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತೀರ್ಪುಗಾರರಾಗಿ ಆಗಮಿಸಿದ್ದ ಸರಿಗಮಪ ಖ್ಯಾತಿಯ ಯುವ ಗಾಯಕ ಅನ್ವಿತ್ ತಮ್ಮ ಸುಮಧುರ ಕಂಠದಿಂದ ದೇಶಭಕ್ತಿ ಗೀತೆಗಳನ್ನು ಹಾಡಿ ಮೆಚ್ಚುಗೆಗೆ ಪಾತ್ರರಾದರು. ನಂತರ ವಿವಿಧ ವಿಭಾಗಗಳಲ್ಲಿ ನಡೆದ ದೇಶಭಕ್ತಿ ಗೀತೆ ಗಾಯನ ಹಾಗೂ ಕವಿಗೋಷ್ಠಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು. ಶಿಬಿರದಲ್ಲಿ ಪಾಲ್ಗೊಂಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.
ಸ್ಪರ್ಧಾ ವಿಜೇತರು : ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ 6 ರಿಂದ 11 ವರ್ಷ ವಿಭಾಗದಲ್ಲಿ ಸ್ಕಂದ ಮಡಿಕೇರಿ ಪ್ರಥಮ, ಅನಘ ಕುಶಾಲನಗರ ದ್ವಿತೀಯ, ಎಂ.ಕೆ.ನಿಷ್ಮ ತೃತೀಯ, 12 ರಿಂದ 18 ವರ್ಷದ ವಿಭಾಗದಲ್ಲಿ ಸ್ವಪ್ನ ಮಡಿಕೇರಿ ಪ್ರಥಮ, ಚಿನ್ನಮ್ಮ ದ್ವಿತೀಯ, ಯಶಿಕ ಮಡಿಕೇರಿ ತೃತೀಯ, 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬಿ.ಎಂ.ಮಾಧುರ್ಯ ಪ್ರಥಮ, ಗೀತಾ ಮಧುಕರ್ ದ್ವಿತೀಯ, ಜೆಸಿಕಾ ಕಾವೇರಪ್ಪ ತೃತೀಯ ಸ್ಥಾನ ಪಡೆದುಕೊಂಡರು.
ಕವಿಗೋಷ್ಠಿಯಲ್ಲಿ ಹೆಚ್.ಜಿ. ಯಶೋಧ ಪ್ರಥಮ, ಕಿಗ್ಗಾಲು ಎಸ್ ಗಿರೀಶ್ ದ್ವಿತೀಯ, ಸುನಿತಾ ವಿಶ್ವನಾಥ್ ತೃತೀಯ, ಅಂಬೇಕಲ್ ಸುಶೀಲಾ ಕುಶಾಲಪ್ಪ ಹಾಗೂ ಬೇಬಿ ಪೂವಯ್ಯ ಸಮಾಧಾನಕರ ಬಹುಮಾನ ಪಡೆದುಕೊಂಡರು.