ಅಮ್ಮತ್ತಿ ಆ.17 NEWS DESK : ಶಾಫೀ ಮುಸ್ಲಿಂ ಜಮಾಅತ್ ಅಧೀನದ ತಲೀಮುದ್ದೀನ್ ಮದರಸಾದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ನೆನೆದು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಿ, ಕಾರ್ಯಕ್ರಮವನ್ನು ಮಹಲ್ ಖತೀಬರಾದ ಉಸ್ತಾದ್ ಇಬ್ರಾಹಿಂ ಮದನಿ ಉದ್ಘಾಟಿಸಿದರು. ಸಭೆಯನ್ನುದೇಶಿಸಿ ಮಾತನಾಡಿದ ತಲೀಮುದ್ದೀನ್ ಮದ್ರಸಾ ಪ್ರಾಂಶುಪಾಲ ಉಸ್ತಾದ್ ಸಿದ್ದೀಕ್ ಅಹ್ಸನಿ ದೇಶ ಪ್ರೇಮ ಧಾರ್ಮಿಕ ವಿಶ್ವಾಸದ ಭಾಗವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಲೆಸಿರುವುದು ನಮ್ಮ ಭಾಗ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಮಾಅತ್ ಆಡಳಿತ ಮಂಡಳಿ, ಮದ್ರಸಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಎಸ್‍ಎಸ್‍ಎಫ್ ಅಮ್ಮತ್ತಿ ಶಾಖೆಯ ಕಾರ್ಯಕರ್ತರು ಹಾಜರಿದ್ದರು.









