ಗೋಣಿಕೊಪ್ಪ ಆ.17 NEWS DESK : ಓದಿದ ಪತ್ರಿಕೆಯನ್ನು ನಾಳೆ ರದ್ದಿಗೆ ಹಾಕುವ ಬದಲಾಗಿ ಪತ್ರಿಕೆಯಿಂದ ಪೆನ್ನುಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿ ವಿಜಯಕರ್ನಾಟಕ ಪತ್ರಿಕೆಯ ಮಹಿಳಾ ಓದುಗರೊಬ್ಬರು ಗಮನ ಸೆಳೆದಿದ್ದಾರೆ. ಮೂರು ವರ್ಷಗಳಿಂದ ಗನ್ನುಬಿಡಿ ಪೆನ್ನು ಹಿಡಿಯಿರಿ ಎಂಬ ಸಂದೇಶ ಸಾರುತ್ತ ಸಾವಿರಾರು ವಿದ್ಯಾರ್ಥಿಗಳಿಗೆ ಲೇಖನಗಳನ್ನು ವಿತರಿಸುವ ಮೂಲಕ ವಿಶ್ವಶಾಂತಿ ಜಾಗೃತಿಯನ್ನು ಮೂಡಿಸುವಲ್ಲಿ ಅರುವತ್ತೊಕ್ಲು ನಿವಾಸಿ ಕೆ.ಟಿ ವಾತ್ಸಲ್ಯ ಮುಂದಾಗಿದ್ದಾರೆ. ಮೂರು ವರ್ಷಗಳಿಂದ ಲೇಖನಿ ಅಭಿಯಾನದ ಮೂಲಕ ಶಾಲಾ ಕಾಲೇಜುಗಳಿಗೆ ತೆರಳಿ ಗನ್ನ್ನಿಂದ ಉಂಟಾಗಬಹುದಾದ ಅಶಾಂತಿ ಮತ್ತು ಅದನ್ನು ತಡೆಯಲು ಲೇಖನಿಯಿಂದ ಸಾಧ್ಯ ಎಂಬ ವಿಚಾರವನ್ನು ವಿದ್ಯಾರ್ಥಿಗಳ ಮನಸ್ಸಿನಾಳಕ್ಕೆ ದಾಟಿಸುವ ಮೂಲಕ ಶಾಂತಿಯ ಕರೆ ನೀಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನ, ಗೋಷ್ಠಿಗಳು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಕಾಗದದ ಲೇಖನಿ ನೀಡುತ್ತಿದ್ದಾರೆ. ಇವರಿಗೂ ತಾವೇ ತಯಾರಿಸಿದ ಮೂರು ಸಾವಿರಕ್ಕೂ ಹೆಚ್ಚು ಕಾಗದದ ಪೆನ್ನುಗಳನ್ನು ವಿತರಿಸುತಲೆ ಸೌಮ್ಯತೆಯೋಳಡಗಿದ್ದಾರೆ.
ಒಂದು ಪೆನ್ನು ತಯಾರಿಸಲು ಮೂರು ನಿಮಿಷಗಳ ಕಾಲಾವಕಾಶ ಸಾಕು. ಒಂದು ಪತ್ರಿಕೆಯಿಂದ ಸುಮಾರು 30 ಪೆನ್ನು ತಯಾರಿಸಬಹುದಾಗಿದೆ. ತಗಲುವ ವೆಚ್ಚವು ಕಡಿಮೆ ಇದೆ. ಕಾಗದದ ಲೇಖನಿ ತಯಾರಿಕೆಯಿಂದ ಪರಿಸರ ಜಾಗೃತಿಯು ಮೂಡುತಿದೆ.ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿಗೆ ಮಾರಕವಾಗುತ್ತಿರುವ ಪರಿಣಾಮ ಬದಲಿ ಮಾರ್ಗವಾಗಿ ಕಾಗದಾದ ಲೇಖನಿಯ ಬಳಕೆ ಉಪಯುಕ್ತವಾಗಿದೆ. ಜೊತೆಗೆ ಪೆನ್ನಿನ ಒಂದು ತುದಿಯಲ್ಲಿ ಬರಯಲು ಸಾಧ್ಯವಾಗುವಂತೆ ಬಳಸಿದರೆ ಮತ್ತೊಂದು ತುದಿಯಲ್ಲಿ ಹಣ್ಣು, ಸೊಪ್ಪು, ತರಕಾರಿಗಳ ಬೀಜವನ್ನು ಅಳವಡಿಸಲಾಗಿದೆ. ಇದು ಮಣ್ಣಿನಲ್ಲಿ ಬೆರೆತಾಗ ಚಿಗುರೊಡೆಯಲ್ಲಿದೆ ಎಂಬ ಉದ್ದೇಶವು ಅಡಕವಾಗಿದೆ.
ವಿದ್ಯಾರ್ಥಿಗಳಲ್ಲಿ ಲೇಖನಿ ಅಭಿಯಾನ ಕುರಿತು ಜಾಗೃತಿ ಮೂಡಿಸುವುದರಿಂದ ಮುಂದೆ ಉತ್ತಮ ನಾಗರೀಕರಾಗಿ ದೇಶಕ್ಕೆ ಉತ್ತಮ ಪ್ರಜೆಗಳಾಗಿ ಮತ್ತು ವಿಶ್ವಕ್ಕೆ ಉತ್ತಮ ಕೊಡುಗೆ ನೀಡಿ ಶಾಂತಿ ಯುತ ಜಗತ್ತು ನಿರ್ಮಾಣ ಮಾಡುತ್ತಾರೆ ಎಂಬ ಉದ್ದೇಶದೊಂದಿಗೆ ದೇಶದಲ್ಲಿ ಶಾಂತಿಯ ಕರೆಗೆ ಈ ಲೇಖನಿ ಅಭಿಯಾನವನ್ನು ನಡೆಸಲಾಗುತ್ತಿದೆ. :: ಕೆ.ಟಿ ವಾತ್ಸಲ್ಯ, ಲೇಖನಿ ಅಭಿಯಾನದ ಸಂಚಾಲಕಿ ಮತ್ತು ಕವಯತ್ರಿ: :
ವರದಿ : ಜಗದೀಶ್ ಜೋಡುಬೀಟಿ