ಮಡಿಕೇರಿ NEWS DESK ನ 17 : 14ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ನ್ಯಾಷನಲ್ ಚಾಂಪಿಯನ್ ಶಿಪ್-2024 ನ.26ರಿಂದ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ನಡೆಯಲಿದ್ದು, ನ್ಯಾಷನಲ್ ಸಬ್ ಜೂನಿಯರ್ ಮಹಿಳಾ ಹಾಕಿ ತಂಡದ ಸೆಂಟರ್ ಫಾರ್ವರ್ಡ್ ಆಟಗಾರ್ತಿ ಆಗಿ ಮಡಿಕೇರಿಯ ಅಕ್ಷರ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಸಾಯಿ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿಯಾಗಿರುವ ಅಕ್ಷರ ತಿಮ್ಮಯ್ಯ, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿ. ಅಕ್ಷರ , ಮಡಿಕೇರಿ ನಗರ ಸಭೆ ಸದಸ್ಯೆ ಕುಟ್ಟನ ಶ್ವೇತ ಮತ್ತು ಪ್ರಶಾಂತ್ ಕೆ ಟಿ ದಂಪತಿ ಅವರ ಪುತ್ರಿಯಾಗಿದ್ದಾಳೆ.









