ಮಡಿಕೇರಿ ಆ.19 NEWS DESK : ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀದಂಡಿನ ಮಾರಿಯಮ್ಮ ದೇವಾಲಯ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಬಿ.ಎಂ.ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಲ್.ಸತೀಶ್ ಆಯ್ಕೆಯಾಗಿದ್ದಾರೆ. 94ನೇ ವರ್ಷದ ಅದ್ದೂರಿಯ ದಸರಾ ಹಾಗೂ ಕರಗ ಮಹೋತ್ಸವದ ಸಿದ್ಧತೆ ಕುರಿತು ದೇವಾಲಯದ ಆವರಣದಲ್ಲಿ ನಡೆಸಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಖಜಾಂಜಿಯಾಗಿ ಮೋಹನ್ ಸಂಪತ್, ಉಪಾಧ್ಯಕ್ಷರುಗಳಾಗಿ ವಿಷ್ಣುಪ್ರಿಯ ನಾಗರಾಜ್, ಸದಾಶಿವ, ಚದ್ದು, ಕಿಶೋರ್ ಬಾಬು, ವಿಜಯ್ ಕರ್ಕೆರ, ನಿರಂಜನ್, ಕಾರ್ಯದರ್ಶಿಗಳಾಗಿ ದಿನು, ಚೇತನ್, ಎ.ಎ.ಹರೀಶ್, ಸಹ ಕಾರ್ಯದರ್ಶಿಗಳಾಗಿ ಕೆ.ಸಂತೋಷ್, ಕಾರ್ತಿಕ್, ಸಹ ಖಜಾಂಚಿಯಾಗಿ ಮಧು ಟಿಂಕರ್, ಅನಿಲ್ ಕೆ.ಎ, ಮಯೂರ್ ನಾಯ್ಡು, ಚಲನವಲನ ಸಮಿತಿಯ ಅಧ್ಯಕ್ಷರಾಗಿ ಎ.ಬಿ.ದಿನೇಶ್ ನಾಯರ್, ಮುಖ್ಯ ಸಲಹೆಗಾರರಾಗಿ ಟಿ.ಎಸ್.ಪ್ರಕಾಶ್, ರಾಜಣ್ಣ, ಎ.ಎ.ಗಣೇಶ್, ಪಾಪಣ್ಣ, ಉಮೇಶ್ ಪೂಜಾರಿ, ಡಿ.ಪಿ.ದಯಾನಂದ, ಟಿ.ಆರ್.ದಯಾನಂದ, ಗೌರವ ಅಧ್ಯಕ್ಷರುಗಳಾಗಿ ಅಂಬೆಕಲ್ ನವೀನ್, ಅಮನ್ ಬೆಂಗಳೂರು ಹಾಗೂ 120 ಕ್ಕೂ ಹೆಚ್ಚು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ತಿಳಿಸಿದ್ದಾರೆ.









