ಮಡಿಕೇರಿ ಆ.19 NEWS DESK : ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಿಂದ ಕೊಡವ ಲ್ಯಾಂಡ್ ಗೆ ಅಪಾಯ ಎದುರಾಗಿದ್ದು, ಕಪ್ಪು ಹಣದಿಂದ ನಿರ್ಮಾಣಗೊಂಡಿರುವ ರೆಸಾರ್ಟ್, ವಿಲ್ಲಾ ಟೌನ್ ಶಿಪ್ ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‍ಸಿ ವತಿಯಿಂದ ಸುಂಟಿಕೊಪ್ಪದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‍ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ. ರೆಸಾರ್ಟ್ ಮಾಫಿಯಾಗಳು ಹೋರಾಟವನ್ನು ಹತ್ತಿಕ್ಕಲು ಪಂಚಾಯ್ತಿ ಪ್ರತಿನಿಧಿಗಳನ್ನು ಹಾಗೂ ಪ್ರಜಾಪ್ರಭುತ್ವದ 4ನೇ ಅಂಗದ ಕೆಲವು ಸದಸ್ಯರನ್ನು ಸ್ಲೀಫಿಂಗ್ ಪಾರ್ಟ್‍ನರ್ ಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಬೃಹತ್ ಮೊತ್ತದ ಲಂಚದ ರೂಪದ ಹಣ ನೀಡುವ ಭೂಮಾಫಿಯಾಗಳನ್ನು ಪ್ರೀತಿಯಿಂದ ಕಾಣುವ ಆಡಳಿತ ವರ್ಗ ಮುಗ್ಧ ರೈತರನ್ನು ಹಾಗೂ ಮೂಲ ನಿವಾಸಿಗಳನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಹೋರಾಟ ನಡೆಸುವ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ 2018 ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೆÇರಮಲೆನಾಡ್ ಮತ್ತು ಬದಿಗೇರಿನಾಡ್ ನಲ್ಲಿ ಭೀಕರ ಜಲಕಂಟಕದಿಂದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು. 15 ವಷಗಳ ಹಿಂದೆ ಗಡಿನಾಡಿನ ಬಿಳಿಗೇರಿ ಭಾಗದಲ್ಲಿ ಸಂಭವಿಸಿದ ಭೂಕಂಪನದಿಂದ ಬಾಚಿನಾಡಂಡ ಅಪ್ಪಾಜಿ ಕುಟುಂಬದ ಮನೆ ಸಂಪೂರ್ಣ ನಾಶವಾಗಿತ್ತು. ಇದೀಗ ಕೇರಳದ ವಯನಾಡಿನ ದುರಂತ ನಮ್ಮ ಮುಂದೆ ಇದ್ದು, ಮತ್ತೊಮ್ಮೆ ಈ ಅನಾಹುತ ಸಂಭವಿಸದಂತೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರಬೇಕು. ಕೊಡಗು ಪ್ರದೇಶ ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿದೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಹಾರಂಗಿ ಜಲಾಶಯ ಹಾಗೂ ದಕ್ಷಿಣಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಕಟ್ಟಿರುವ ಕಟ್ಟೆಯಲ್ಲಿ ಹೂಳು ತುಂಬಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ. ಜಲಾಶಯದ ಹೂಳು ತೆಗೆಯದೆ ಮತ್ತು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಜಲನಾಳಗಳಿಗೆ ಹಾನಿಯಾಗಿ ಭೂಗರ್ಭ ಸೀಳಿ ಅನಾಹುತಗಳಿಗೆ ದಾರಿಯಾಗುವ ಸಾಧ್ಯತೆಗಳಿದೆ. ವಯನಾಡಿನಂತಹ ದುರಂತ ಕೊಡಗಿನಲ್ಲೂ ಸಂಭವಿಸಬಾರದೆಂದಾರೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೈ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾಟ್ರ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
::: ಆ.20 ರಂದು ಕುಟ್ಟದಲ್ಲಿ ಜಾಗೃತಿ :::
ಸಿಎನ್‍ಸಿ ವತಿಯಿಂದ ಆ.20 ರಂದು ಕುಟ್ಟದಲ್ಲಿ, ಆ.29 ಮೂರ್ನಾಡು, ಸೆ.9 ನಾಪೋಕ್ಲು ಹಾಗೂ ಸೆ.10 ರಂದು ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.
ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಚೋಲಪಂಡ ಜ್ಯೋತಿ ನಾಣಯ್ಯ, ಚೋಲಪಂಡ ಜಾಜು ಸುರೇಶ್, ಮುಕ್ಕಾಟಿರ ಎ.ವಸಂತ್, ಪುಡಿಯಂಡ ಮುತ್ತಣ್ಣ, ದಾಸಂಡ ಜಯರಾಜ್, ನಂದಿನೆರವಂಡ ಅಪ್ಪಯ್ಯ, ಮಾಳೆಯಂಡ ಮುತ್ತಪ್ಪ, ಕಾಯಪಂಡ ತಮ್ಮಯ್ಯ, ಚಿಕ್ಕಂಡ ಉತ್ತಪ್ಪ, ನಾಗಶೆಟ್ಟರಿ ಮನು, ಕೇಚಿರ ಭಾಗೇಶ್, ಕುಲ್ಲಚಂಡ ಆರ್ಯನ್ ಕುಟ್ಟಪ್ಪ, ಕುಲ್ಲಚಂಡ ಕಾರ್ಯಪ್ಪ, ಪುಡಿಯಂಡ ರಂಜಿತ್, ದಾಸಂಡ ವಿಕ್ರಮ್, ನಾಗಶೆಟ್ಟಿರ ಬೊಳ್ಳಿಯಪ್ಪ, ಮೊಳ್ಳೇರ ಸುಬ್ರಮಣಿ, ಮೊಳ್ಳೇರ ಡಾಲು, ಮೊಳ್ಳೇರ ಜಗನ್, ದಾಸಂಡ ಶಿವು ಉತ್ತಪ್ಪ, ಚಿಕ್ಕಂಡ ಪೊನ್ನಪ್ಪ, ಕಂಜಿತಂಡ ಅಯ್ಯಣ್ಣ, ನಂದಿನೆರವಂಡ ರವಿ ಕುಟ್ಟಪ್ಪ, ನಂದಿನೆರವಂಡ ನಂದ, ನಂದಿನೆರವಂಡ ಐಯಣ್ಣ, ನಂದಿನೆರವಂಡ ವಿಜು, ಪುಟ್ಟಿಚಂಡ ದೇವಯ್ಯ, ನಂದಿನೆರವಂಡ ಟಿಪ್ಪು, ನಂದಿನೆರವಂಡ ರಾಜೇಶ್, ನಂದಿನೆರವಂಡ ಬೋಪಣ್ಣ, ಮೊಳ್ಳೆರ ಕಾವೇರಪ್ಪ, ಮೊಳ್ಳೆರ ಜಗನ್, ಕಲ್ಮಾಡಂಡ ಸುರೇಶ್, ಪಾರ್ವಂಗಡ ರವಿ, ಕೇಚಿರ ಚೆಂಗಪ್ಪ, ಚೋಳಪಂಡ ನಾಣಯ್ಯ, ದಾಸಂಡ ಕಿರಣ್, ದಾಸಂಡ ಜಗ ಮಾದಪ್ಪ, ದಾಸಂಡ ಮಂದಣ್ಣ, ಬಲ್ಲಾರಂಡ ರಾಜಪ್ಪ, ದಾಸಂಡ ಚೆಂಗಪ್ಪ, ದಾಸಂಡ ಅಚ್ಚಯ್ಯ, ಬೊಟ್ಟೋಳಂಡ ಕುಮಾರ್, ಚೆಪ್ಪುಡಿರ ಪ್ರಿನ್ಸ್, ಚೆಪ್ಪುಡಿರ ಸತೀಶ್, ಪುಲ್ಲೇರ ಹರ್ಷ, ಪಾಲೇಕಂಡ ಅಯ್ಯಪ್ಪ, ಪುಲ್ಲೇರ ಕಾಳಪ್ಪ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.
Breaking News
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*
- *ವಿರಾಜಪೇಟೆ : ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ ಉಪನ್ಯಾಸ ಕಾರ್ಯಕ್ರಮ*
- *ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ : ಶಿಕ್ಷಣ ನೀಡಿದ ಸರ್ಕಾರಿ ಶಾಲೆಗೆ ಆದಾಯದ ಒಂದು ಭಾಗ ಮೀಸಲಿಡಿ : ಹೆಚ್.ಎಲ್.ದಿವಾಕರ್ ಕರೆ*
- *ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೂತನ ಪದಾಧಿಕಾರಿಗಳ ನೇಮಕ : ಜಿಲ್ಲಾಧ್ಯಕ್ಷರಾಗಿ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆ*
- *ವಾರ ಭವಿಷ್ಯ : ಯಾರಿಗೆ ಈ ವಾರ ಶುಭ… : ನ.18 ರಿಂದ 24ರ ವರೆಗೆ*
- *ಬಿ.ಡಿ.ಮಂಜುನಾಥ್ “ಕೊಡಗು ಸಹಕಾರ ರತ್ನ” ಪ್ರಶಸ್ತಿಗೆ ಭಾಜನ : ನ.20 ರಂದು ಸಹಕಾರ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ*
- *ಭಾಗಮಂಡಲದಲ್ಲಿ ಕಾವೇರಿ ಆರತಿ*
- *ಬೊಳ್ಳಮ್ಮಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ*