ಮಡಿಕೇರಿ ಆ.19 NEWS DESK : ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸವಿರುವ ಹಿಂದೂಗಳಿಗೆ ಪ್ರತ್ಯೇಕವಾಗಿ ಸುಸಜ್ಜಿತವಾದ ಸ್ಮಶಾನದ ಜಾಗ ಗುರುತಿಸಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸೂಕ್ತ ಸ್ಮಶಾನವಿಲ್ಲದೆ ಶವಗಳನ್ನು ಕಾವೇರಿ ನದಿಯ ದಡದಲ್ಲಿ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಪಿಐಎಂ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.45 ರಷ್ಟು ಮಂದಿ ಹಿಂದೂಗಳಿದ್ದು, ಸ್ಮಶಾನದ ಕೊರತೆ ಎದುರಾಗಿದೆ. ಶೇ.5 ರಷ್ಟು ಮಾತ್ರ ಸಣ್ಣ ಹಿಡುವಳಿದಾರರಿದ್ದು, ಮೃತಪಟ್ಟರೆ ಸ್ವಂತ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವರಿಗೆ ಅವಕಾಶವಿದೆ. ಆದರೆ ಉಳಿದಿರುವ ಶೇ.35 ರಷ್ಟು ಹಿಂದೂಗಳು ಬಡವರಾಗಿದ್ದು, ಆದಿವಾಸಿಗಳು, ದಲಿತರು, ಬಿಲ್ಲವರು, ಮೊಗೇರ ಮತ್ತಿತರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮನೆಯಲ್ಲಿ ಸಾವು ಸಂಭವಿಸಿದಾಗ ಗೌರವಯುತವಾಗಿ ಎಲ್ಲಿ ಸಂಸ್ಕಾರ ಮಾಡಬೇಕು ಎನ್ನುವ ಗೊಂದಲ ಇವರನ್ನು ಕಾಡುತ್ತಿದೆ. ಸ್ವಂತ ಭೂಮಿಯಿಲ್ಲದೆ ಬಾಡಿಗೆ ಮನೆ, ಲೈನ್ ಮನೆಗಳಲ್ಲೇ ಜೀವನ ಸಾಗಿಸಿ ಸತ್ತ ನಂತರವೂ ಶವ ಸಂಸ್ಕಾರಕ್ಕೆ ಸೂಕ್ತ ಅವಕಾಶ ಇಲ್ಲ ಎನ್ನುವ ಬೇಸರ ಈ ಸಮುದಾಯಕ್ಕೆ ಇದೆ. ಹಿಂದೂತ್ವದ ಬಗ್ಗೆ ಮಾತನಾಡುವವರು ಆಡಳಿತ ನಡೆಸಿದ ಸಂದರ್ಭದಲ್ಲೂ ನೆಲ್ಲಿಹುದಿಕೇರಿಯ ಹಿಂದೂಗಳಿಗೆ ಸ್ಮಶಾನದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು. ಬೆಟ್ಟದಕಾಡು ರಸ್ತೆಯಲ್ಲಿರುವ ಕಾವೇರಿ ನದಿದಡದಲ್ಲಿ ಅರ್ಧ ಎಕರೆ ಜಾಗವಿದ್ದು, ಅಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಅಧಿಕ ಮಳೆಯ ಸಂದರ್ಭ ನದಿದಡದಲ್ಲಿ ಮಣ್ಣು ಕುಸಿಯುತ್ತಿದ್ದು, ಸಂಸ್ಕಾರ ಮಾಡಲಾದ ಶವದ ಅಸ್ತಿ ನದಿ ಪಾಲಾಗುತ್ತಿದೆ. ಇದರಿಂದ ನದಿ ಕಲುಷಿತಗೊಳ್ಳುತ್ತಿದೆ ಎಂದರು. ಗ್ರಾ.ಪಂ ಮೂಲಕ ಈಗಾಗಲೇ ಸ್ಮಶಾನಕ್ಕಾಗಿ ಗುರುತಿಸಲಾಗಿರುವ ಜಾಗ ಒತ್ತುವರಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಇದು ನಿಜವೇ ಆಗಿದ್ದರೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಬೇಕು. ಶೀಘ್ರ ಹಿಂದೂಗಳಿಗೆ ಪ್ರತ್ಯೇಕವಾದ ಸುಸಜ್ಜಿತ ಸ್ಮಶಾನದ ಜಾಗ ಮಂಜೂರು ಮಾಡಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾ.ಪಂ ಎದುರು ಶವದೊಂದಿಗೆ ಹೋರಾಟ ನಡೆಸುವುದಾಗಿ ಪಿ.ಆರ್.ಭರತ್ ಎಚ್ಚರಿಕೆ ನೀಡಿದರು. ಗ್ರಾ.ಪಂ ಉಪಾಧ್ಯಕ್ಷರಾದ ಪ್ರಮೀಳ ಹಾಗೂ ಗ್ರಾಮ ಲೆಕ್ಕಿಗ ಸಚಿನ್ ಅವರು ಪ್ರತಿಭಟನಾಕಾರರರದಿಂದ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಟಿ.ಟಿ.ಉದಯನ್, ಕೆ.ಯು.ಮೋನಪ್ಪ, ಯೂಸುಫ್, ಶಿವರಾಮನ್, ಎ.ಕೆ.ಮುಸ್ತಫ, ಕೆ.ಕೆ.ಚಂದ್ರನ್, ಪಿ.ವಿ.ರವಿ, ಬೋಜಿ, ಲಲಿತಮ್ಮ, ಕಾವೇರಿ, ವಿಜು, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.
Breaking News
- *ಯುವನಿಧಿ ಯೋಜನೆ ಹೆಸರು ನೋಂದಣಿಗೆ ಮನವಿ*
- *ಮಡಿಕೇರಿಯಲ್ಲಿ ಸಹಕಾರ ಸಪ್ತಾಹ : ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಶ್ರಮಿಸಿ : ಎಂ.ಸಿ.ನಾಣಯ್ಯ ಸಲಹೆ*
- *ಗೋಣಿಕೊಪ್ಪಲಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ*
- *ಶ್ರೀ ಕೇತ್ರ ಧರ್ಮಸ್ಥಳದಿಂದ ಕೊಡಗಿನ ಸರ್ಕಾರಿ ಶಾಲೆಗಳಿಗೆ 72 ಲಕ್ಷ ಮೌಲ್ಯದ ಡೆಸ್ಕ್- ಬೆಂಚು ವಿತರಣೆ*
- *ಪೊನ್ನಂಪೇಟೆ : ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಅವಿನ್ಯಂ” ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ*
- *ವಿಹೆಚ್ಪಿಯಿಂದ ನ.15 ರಂದು ಭಾಗಮಂಡಲದಲ್ಲಿ ಕಾವೇರಿ ಆರತಿ*
- *ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಗೋಣಿಕೊಪ್ಪಲಿನಲ್ಲಿ ಏಡ್ಸ್ ಕುರಿತು ಜಾಗೃತಿ : ಜಾಗೃತಿಯಿಂದ ಮಾತ್ರ ಏಡ್ಸ್ ತಡೆಗಟ್ಟಲು ಸಾಧ್ಯ : ಡಾ. ಎಂ.ಬಿ.ಕಾವೇರಿಯಪ್ಪ*
- *ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶಗಳಿಲ್ಲ : ಕೊಡಗು ಬಿಜೆಪಿ ಅಸಮಾಧಾನ*
- *ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ*