ಕುಶಾಲನಗರ, ಆ.19 NEWS DESK : ಬೆಂಗಳೂರಿನಲ್ಲಿ ಮುಕ್ತಾಯಗೊಂಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕೊಡಗು ಜಿಲ್ಲಾ ತಂಡವು ಜಯಗಳಿಸಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಆಯ್ಕೆಗೊಂಡಿದೆ. ಬೆಂಗಳೂರಿನ ಶಾಂತಿನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ತಂಡದ ವ್ಯವಸ್ಥಾಪಕ ಬಿ.ಟಿ.ಪೂರ್ಣೇಶ್ ನೇತೃತ್ವದಲ್ಲಿ ನಡೆದ ಅಂತಿಮ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಬೀದರ್ ಜಿಲ್ಲಾ ತಂಡವನ್ನು 5-0 ಗೋಲುಗಳಿಂದ ಮಣಿಸಿ ಗೆಲುವು ಪಡೆಯಿತು. ಕೊಡಗು ತಂಡದ ಪರವಾಗಿ ಸತೀಶ್ , ಶ್ರೀನಿವಾಸ್ ರೈ ,ಪೂನಚ್ಚ, ಜಾಗೃತ್ , ಮಂಜುನಾಥ್ ತಲಾ ಒಂದೊಂದು ಗೋಲು ಗಳಿಸಿ ಸತತ 19ನೇ ಬಾರಿ 5-0 ಗೋಲು ನೊಂದಿಗೆ ವಿರೋಚಿತ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು ನಡೆದ ಸೆಮಿ ಫೈನಲ್ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಬೆಂಗಳೂರು ನಗರ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿ ಅಂತಿಮ ಟೂರ್ನಿಗೆ ಅರ್ಹತೆ ಪಡೆಯಿತು. ಹಾಕಿ ಟೂರ್ನಿ ತಂಡದಲ್ಲಿ ತಂಡದ ವ್ಯವಸ್ಥಾಪಕ ಬಿ.ಟಿ.ಪೂರ್ಣೇಶ್ ನೇತೃತ್ವದಲ್ಲಿ ಕ್ರೀಡಾಳುಗಳಾದ ಕೆ.ಆರ್.ನವೀನ್ ಕುಮಾರ್, ಜಿ.ಎಸ್.ಚಂದ್ರಶೇಖರ, ಸಿ.ಜಿ.ಪೂಣಚ್ಚ, ಪಿ.ಎಸ್.ಸತೀಶ್, ಬಿ.ಎಂ.ಶ್ರೀನಿವಾಸ ರೈ, ಎಸ್.ಆರ್.ಪ್ರಸನ್ನಕುಮಾರ್, ಆರ್.ಡಿ.ಲೋಕೇಶ್, ಎಂ.ಟಿ.ದಯಾನಂದ ಪ್ರಕಾಶ್, ಆರ್.ಡಿ.ಮಹೇಶ್ ಕುಮಾರ್, ಕೆ.ಎಂ.ಸೋಮಯ್ಯ, ಮೌನ್ ಮೊಣ್ಣಪ್ಪ, ಸಿ.ಟಿ.ಜಾಗೃತ್, ಎ.ಸಿ.ವಿಖ್ಯಾತ್, ಸಿ.ಎಸ್.ಸುಬ್ಬಯ್ಯ, ಎಸ್.ಎಸ್.ಶಿವಕುಮಾರ್, ಬಿ.ಜಿ.ಅಶ್ವಥ್, ಕೆ.ಕೆ.ಮಾಚಯ್ಯ, ಡ್ಯಾನಿ ಈರಪ್ಪ, ಬಿ.ಟಿ.ಮಂಜುನಾಥ್ ಆಟ ಆಡಿದರು. ಹಾಕಿ ಟೂರ್ನಿಗೆ ಕೋಚ್ ಡ್ಯಾನಿ ಈರಪ್ಪ ಅವರು ತರಬೇತಿ ನೀಡಿದ್ದರು. ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿ ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿರುವುದಕ್ಕೆ ತಂಡದ ಕ್ರೀಡಾಳುಗಳನ್ನು ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಅಭಿನಂದಿಸಿದ್ದಾರೆ. ಕೊಡಗಿನ ಕ್ರೀಡಾಪ್ರೇಮಿಯೂ ಆದ ಗಾಯಕ ಕೆ.ಎಸ್.ಹರೀಶ್, ಟೂರ್ನಿಯ ಕ್ರೀಡಾಳುಗಳುಗಳಿಗೆ ಸಹಕರಿಸಿದರು.ಹಾಕಿ ಟೂರ್ನಿಗೆ ಕೋಚ್ ಡ್ಯಾನಿ ಈರಪ್ಪ ಅವರು ತರಬೇತಿ ನೀಡಿದ್ದರು.
Breaking News
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*