ಸೋಮವಾರಪೇಟೆ ಆ.20 NEWS DESK : ಗೌಡಳ್ಳಿ ಹನುಮಾನ್ ಕಬಡ್ಡಿ ಕ್ಲಬ್ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ 17 ವರ್ಷದೊಳಗಿನ ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿಯನ್ನು ಗೌಡಳ್ಳಿ ಹನುಮಾನ್ ಬಾಯ್ಸ್ ತಂಡ ಮುಡಿಗೇರಿಸಿಕೊಂಡಿತು. ಮೂರು ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು. ಕಳಲೆ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ 1500 ರೂ.ನಗದು ಹಾಗೂ ಟ್ರೋಫಿಯನ್ನು ಗಳಿಸಿತು. ಪಂದ್ಯಾವಳಿಯಲ್ಲಿ 9 ತಂಡಗಳು ಭಾಗವಹಿಸಿದ್ದವು. ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಸುರೇಶ್, ಬಹುಮಾನ ಮತ್ತು ಟ್ರೋಫಿ ದಾನಿಗಳಾದ ಶಾಂತಮಲ್ಲಪ್ಪ, ಸುಮಂತ್ ಕೂಗೂರು, ಪವನ್, ನಾಗರಾಜು, ನವೀನ್ ಅಜ್ಜಳ್ಳಿ, ಸುನಿಲ್ ಗೌಡಳ್ಳಿ ಇದ್ದರು. ತೀರ್ಪುಗಾರರಾಗಿ ಮಧುಸೂದನ್, ಗಣೇಶ್ ಕಾರ್ಯನಿರ್ವಹಿಸಿದರು.










