ಮಡಿಕೇರಿ ಆ.20 NEWS DESK : ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಕ್ಕೆಹೊಳೆ ನಾಲೆಯ ಕಾಲುವೆಗಳು ಕಳೆದ ಒಂದು ತಿಂಗಳುಗಳಿಂದ ಸುರಿದ ಮಳೆಯಿಂದಾಗಿ ಬೆಟ್ಟದ ನೀರು ಕಾಲುವೆಗಳ ಮೂಲಕ ಹರಿದ ಹಿನ್ನೆಲೆಯಲ್ಲಿ ಬೆಟ್ಟದ ಮಣ್ಣು ಸೇರಿ ಕಾಲುವೆಗಳು ಸಂಪೂರ್ಣವಾಗಿ ಹೂಳುವಿನಿಂದ ಮುಚ್ಚಲ್ಪಟ್ಟಿವೆ ಅದರ ತೆರವಿಗೆ ಗ್ರಾಮಸ್ಥರು ಮತ್ತು ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ. ಮಡಿಕೇರಿ ಸಣ್ಣ ನೀರಾವರಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಇಂಜಿನಿಯರ್ ಕುಮಾರ್ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಸೀಗೆಹೊಸೂರು, ಮಲ್ಲೇನಹಳ್ಳಿ ಗಂಗೆಕಲ್ಯಾಣ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ರೈತರು, ಸೀಗೆಹೊಸೂರು ಗ್ರಾಮದ ಗಣಪತಿ ದೇವಾಲಯ ಸಮೀಪದಿಂದ ಎರಡನೇ ಬ್ರಾಂಚ್ ನ ಉಪ ಕಾಲುವೆಯವರೆಗೆ ಸಂಪೂರ್ಣವಾಗಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಕಕ್ಕೆಹೊಳೆ ಮುಖ್ಯ ನಾಲೆಯ ನೀರು ಸರಾಗವಾಗಿ ಹರಿಯಲು ಸಾದ್ಯವಾಗದೇ ರಸ್ತೆ ಯಲ್ಲಿಯೂ ಹರಿಯುತ್ತದೆ, ಅಲ್ಲದೇ ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಬೇಸಾಯಕ್ಕೆ ನೀರಿನ ಸಮಸ್ಯೆಯಿಂದಾಗಿ ಬೇಸಾಯಕ್ಕೆ ತೊಂದರೆಗಳು ಅಗುತ್ತಿವೆ ಎಂದು ಗಮನ ಸೆಳೆದರು. ಈ ಸಂದರ್ಭ ಕೂಡಿಗೆ ಗ್ರಾ.ಪಂ ಸದಸ್ಯರಾದ ಅರುಣ್ ರಾವ್, ಅನಂತ, ರೈತ ಮುಖ್ಯಸ್ಥರಾದ ಕೆ.ಸಿ.ಶಿವಣ್ಣ, ರೇಣುಕ, ಟಿ.ಸಿ.ಬಸವರಾಜು,ಕೆ.ಎನ್.ಕೃಷ್ಣ, ಮಹದೇವಪ್ಪ, ಸೇರಿದಂತೆ ಹಲವಾರು ರೈತರು ಇದ್ದರು.
ರೈತರ ಸಮಸ್ಯೆಗೆ ಸ್ಪಂದಿಸುವ ಭರವಸೆ :: ಸೀಗೆಹೊಸೂರು ವ್ಯಾಪ್ತಿಯ ರೈತರ ಮನವಿಗೆ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕುಮಾರ್ ಸ್ವಾಮಿಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣವೇ ಉಪ ಕಾಲುವೆಗಳ ಹೂಳುನ್ನು ತೆರೆವುಗೊಳಿಸುವಲ್ಲಿ ಕಾರ್ಯನ್ಮಖರಾದರು.