ಸೋಮವಾರಪೇಟೆ ಆ.28 NEWS DESK : ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಚೇರ್ಗಳು, ಸ್ಟೀಲ್ ತಟ್ಟೆ ಮತ್ತು ಲೋಟಗಳು, ಆಟದ ಚೆಂಡುಗಳು, ಕಲಿಕೆಯ ಲೇಖನಿ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಜೆ.ಕೆ.ಪೊನ್ನಪ್ಪ 10,000 ರೂ, ಬೆಲೆಯ 10 ಚೇರ್ಗಳು ಸೇರಿದಂತೆ ಇತರ ಸಾಮಾಗ್ರಿಗಳನ್ನು ಅಂಗನವಾಡಿ ಶಿಕ್ಷಕಿ ಶಾರದ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಹಾನಗಲ್ಲು ಗ್ರಾ.ಪಂ ಉಪಾಧ್ಯಕ್ಷೆ ರೇಣುಕಾ, ಸದಸ್ಯೆ ಉಷಾ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ಜೋನಲ್ ಲೆಫ್ಟಿನೆಂಟ್, ಎಂ.ಎಂ.ಪ್ರಕಾಶ್ ಕುಮಾರ್, ಸದಸ್ಯರಾದ ಎಸ್.ಬಿ.ಯಶವಂತ್, ಬಿ.ಎಂ.ದಿನೇಶ್, ಕೆ.ಪಿ.ಪ್ರವೀಣ್, ಸವಿತಾ ಪ್ರಕಾಶ್ಕುಮಾರ್ ಇದ್ದರು.









