ಮಡಿಕೇರಿ ಆ.29 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಮಂಗಳೂರು ವಿಶ್ವವಿದ್ಯಾಲಯದ ಆರನೇ ಸೆಮಿಸ್ಟರ್ ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎ ಫಲಿತಾಂಶಗಳು ಪ್ರಕಟವಾಗಿದೆ. ಕಲಾ ವಿಭಾಗದಲ್ಲಿ ಶೇ.90, ವಾಣಿಜ್ಯ ವಿಭಾಗದಲ್ಲಿ ಶೇ.90 ಮತ್ತು ನಿರ್ವಹಣಾ ಶಾಸ್ತ್ರದಲ್ಲಿ ಶೇ. 80 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ (ಹೆಚ್.ಇ) ಕುಮಾರಿ, ಪಿ.ಎ.ಅಯಿಷ ಶೇ.95.22 ಅಂಕ, ಕಲಾವಿಭಾಗದಲ್ಲಿ(ಪಿ.ಕೆ) ಕುಮಾರ ಹೆಚ್.ಎ.ಅಜಿತ್ ಶೇ.88, ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಕುಮಾರಿ ಬಿ.ಜಿ.ಲಷ್ಮೀತ ಶೇ. 92.92 ಮತ್ತು ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಎಸ್.ಡಿ.ವೆನಿಲ್ಲ ಶೇ.80.61 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ದಯಾನಂದ.ಕೆ.ಸಿ ಪ್ರಕಟಣೆಯಲ್ಲಿ ತಿಳಿಸಿರುವರು.