ವಿರಾಜಪೇಟೆ ಆ.29 NEWS DESK : ಕ್ರೀಡೆಗಳಿಗೆ ತನ್ನದೆಯಾದ ರೀತಿಯಲ್ಲಿ ಕೊಡುಗೆ ನೀಡಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರ ಸನ್ಮಾನಿ ಗೌರವಿಸಿದೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯದ ಗೃಹ ಮಂತ್ರಿ ಜಿ.ಪರಮೇಶ್ವರ್ ಅವರು ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿದ ಕ್ರೀಡಾ ದೇಶೀಯ ಮತ್ತು ಅಂತರ್ ರಾಷ್ಟ್ರೀಯ ಹಾಕಿ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೈ ನೀಡಿದ ಕೊಡಗು ಜಿಲ್ಲೆಯ ಹಾಕಿ ಕಲಿಗಳಾದ ಎ.ಬಿ.ಸುಬ್ಬಯ್ಯ, ಸಿ.ಎಸ್.ಪೂಣಚ್ಚ, ಕೆ.ಕೆ.ಪೂಣಚ್ಚ, ವಿ.ಎಸ್.ವಿನಯ್, ಅರ್ಜುನ್ ಹಾಲಪ್ಪ, ನಿಕಿನ್ ತಿಮ್ಮಯ್ಯ ಮತ್ತು ಬಿ.ಸಿ.ಪೂಣಚ್ಚ ಹಾಗೂ ಅನಿಲ್ ಆಡ್ರಿಯನ್ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹಾಕಿ ಕ್ಷೇತ್ರವಲ್ಲದೆ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಕ್ರೀಡಾ ಪಟುಗಳಿಗೆ ಗೌರವಾರ್ಥ ಸ್ಮರಣಿಕೆ ನೀಡಿ ಗೌರವಿಸಲಾಯಿತು.