ಚೆಟ್ಟಳ್ಳಿ ಸೆ.3 NEWS DESK : ಮಡಿಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬಾಲಕರ ಫುಟ್ಬಾಲ್ ಮತ್ತು ಬಾಲಕಿಯರ ಥ್ರೋಬಾಲ್ ತಂಡ ಪ್ರಥಮ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಮಡಿಕೇರಿಯ ಸ.ಮಾ.ಪ್ರಾ. ಶಾಲಾ ಬಾಲಕರ ತಂಡವನ್ನು ಮಣಿಸಿ ಚೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ಥ್ರೋಬಾಲ್ ಫೈನಲ್ ಪಂದ್ಯದಲ್ಲಿ ಸಂತ ಮೈಕಲರ ಶಾಲಾ ಬಾಲಕಿಯರು ತಂಡವನ್ನು ಮಣಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಸಂದರ್ಭ ಚೆಟ್ಟಳ್ಳಿ ಶಾಲೆಯ ದೈಹಿಕ ಶಿಕ್ಷಕ ಕುಶಾಲಪ್ಪ, ಸಹ ಶಿಕ್ಷಕರಾದ ಅಶೋಕ, ರಸೀನ ಮತ್ತು ಶಾಂಭವಿ ಇದ್ದರು.