ನಾಪೋಕ್ಲು ಸೆ.10 NEWS DESK : ಭಾಗಮಂಡಲ ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ (ಎಇಒS) ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1 ರಿಂದ 4ನೇ ತರಗತಿಯ ವಿಭಾಗದಲ್ಲಿ ಹಮ್ನ (ಮಣ್ಣಿನ ಮಾದರಿ ತಯಾರಿ ), ಹವ್ಯ (ಕಥೆ ಹೇಳುವುದು ), ಪ್ರಣಾಮ್ಯ (ಚಿತ್ರಕಲೆ ), ತನ್ವಿಕ ( ಛದ್ಮವೇಷ ), ನೆಬೀಲ್ ( ಹಿಂದಿ ಕಂಠಪಾಠ ) ದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ನಿಕ್ಕಿ ನಂಜಪ್ಪ (ಆಶುಭಾಷಣ ), ಮಿಸ್ಬ ( ಧಾರ್ಮಿಕ ಪಠಣ ಅರೇಬಿಕ್ ) ದ್ವಿತೀಯ ಬಹುಮಾನವನ್ನೂ, ಪೊನ್ನಮ್ಮ ( ಅಭಿನಯ ಗೀತೆ ), ದೀಪಾಲಿ ( ಭಕ್ತಿ ಗೀತೆ )ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ 5ರಿಂದ 7ನೇ ತರಗತಿ ವಿಭಾಗದಲ್ಲಿ ರೀತಿಶ್ರೀ ( ಭಾವಗೀತೆ ), ಯುಕ್ತ ( ಮಿಮಿಕ್ರಿ ) ಯಲ್ಲಿ ಪ್ರಥಮ ಬಹುಮಾನವನ್ನನ್ನೂ, ಮೇಘನಾ ( ಚಿತ್ರಕಲೆ ), ರಕ್ಷ ( ಪ್ರಬಂಧ )ಹಿರಾಲ್ ಕಾರಿಯಪ್ಪ ( ಆಶುಭಾಷಣ ), ಬೃಂದಾ ಎ. ಎನ್.( ಹಿಂದಿ ಕಂಠಪಾಠ ) ದ್ವಿತೀಯ ಸ್ಥಾನವನ್ನೂ, ಸಜನ್ (ಮಣ್ಣಿನ ಮಾದರಿ ),ದೃಶ್ಯ ( ಕಥೆ ಹೇಳುವುದು ), ಬಿನಿಶ್( ಧಾರ್ಮಿಕ ಪಠಣ ಸಾಂಸ್ಕೃತಿಕ ), ಲವ್ಯ ( ಭಕ್ತಿ ಗೀತೆ )ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. 8 ರಿಂದ 12ನೇ ತರಗತಿ ವಿಭಾಗದಲ್ಲಿ ನಿಧಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಮೌಲ್ಯ ( ಕವನ ವಾಚನ )ಫಾತಿಮಾತ್ ಹಿಬಾ ( ಇಂಗ್ಲೀಷ್ ಭಾಷಣ ), ಕುಶಾಲಪ್ಪ (ಆಶುಭಾಷಣ ), ಸುಪ್ರ ( ಪ್ರಬಂಧ ). ಮುನಾಜ್ ( ಧಾರ್ಮಿಕ ಪಠಣ ಅರೇಬಿಕ್ ) ಹಾಗೂ ಸುಪ್ರ ಮತ್ತು ಕುಶಾಲಪ್ಪ ತಂಡ ( ರಸಪ್ರಶ್ನೆ ) ದ್ವಿತೀಯ ಸ್ಥಾನವನ್ನೂ, ಪ್ರಣಮ್ ( ಹಿಂದಿ ಭಾಷಣ ), ಶಮ್ನ ( ಕನ್ನಡ ಭಾಷಣ ), ಸ್ಪಂದನ ( ಚಿತ್ರಕಲೆ ), ಲಕ್ಷಿ ತಾ ( ಭಾವಗೀತೆ ), ಹೇಮಂತ್ ( ಚರ್ಚಾ ಸ್ಪರ್ಧೆ), ಮೌಲ್ಯ ( ಧಾರ್ಮಿಕ ಪಠಣ ಸಾಂಸ್ಕೃತಿಕ ), ರಂಶ ( ಮಿಮಿಕ್ರಿ ) ಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು
ವರದಿ : ದುಗ್ಗಳ ಸದಾನಂದ.