ಮಡಿಕೇರಿ NEWS DESK ಸೆ.10 : ಬೆಂಗಳೂರಿನ ಗ್ಲೋಬಲ್ ಜ್ಞಾನ್ ಅಕಾಡೆಮಿಯ 5 ನೇ ಜಾಗತಿಕ ಅತ್ಯುತ್ತಮ ಸಮುದಾಯ ಶಿಕ್ಷಕಿ ಪ್ರಶಸ್ತಿಗೆ ಮಡಿಕೇರಿಯ ವಿ.ಎ.ನಮ್ರೀನ್ ಆಸಿಫ್ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿ.ಎ.ನಮ್ರೀನ್ ಆಸಿಫ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಉಪಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಗ್ಲೋಬಲ್ ಜ್ಞಾನ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ರುಕ್ಸಾನಾ ಹಾಸನ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸುಮಾರು ಒಂದು ಸಾವಿರ ಶಿಕ್ಷಕರಲ್ಲಿ 100 ಮೆರಿಟ್ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡ ವಿ.ಎ.ನಮ್ರೀನ್ ಆಸಿಫ್ ಅವರು, ಇದರಲ್ಲಿ ಆಯ್ಕೆಯಾದ 15 ಅತ್ಯುತ್ತಮ ಶಿಕ್ಷಕರಲ್ಲಿ ಮೊದಲ ಸ್ಥಾನ ಗಳಿಸಿದರು. ನಮ್ರೀನ್ ಆಸಿಫ್ ಅವರು ದಕ್ಷಿಣ ಕನ್ನಡ ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ವಾಂಸಕಿಯಾಗಿದ್ದು, ಇವರು ಮಡಿಕೇರಿಯ ಕೊಹಿನೂರು ರಸ್ತೆ ನಿವಾಸಿ ವಿ.ಎಸ್.ಮೊಹಮ್ಮದ್ ಆಸಿಫ್ ಹಾಗೂ ವಿ.ಎಸ್.ನಸೀಮಾ ದಂಪತಿಗಳ ಪುತ್ರಿ.












