ಸೋಮವಾರಪೇಟೆ NEWS DESK ಸೆ.11 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 71ನೇ ವಾರ್ಷಿಕ ಮಹಾಸಭೆ ಸೆ.15ರ ಭಾನುವಾರ ಪೂರ್ವಾಹ್ನ 10 ಗಂಟೆಗೆ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ರೂಪಾ ಸತೀಶ್ ಹೇಳಿದರು. ಸಂಘದ ಒಟ್ಟು ವ್ಯವಹಾರ 2024ರ ದಿನಾಂಕ ಮಾರ್ಚ್ 31ಕ್ಕೆ 380 ಕೋಟಿಯಾಗಿದ್ದು, ಸಂಘದ ಒಟ್ಟು ದುಡಿಯುವ ಬಂಡವಾಳ 77.26 ಕೋಟಿಯಾಗಿರುತ್ತದೆ.2023-24ನೇ ಸಾಲಿಗೆ ಸಂಘವು 1.19 ಕೋಟಿ ಲಾಭ ಗಳಿಸಿರುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲದ ವಿಮಾ ಯೋಜನೆ,ಸ್ವಸಹಾಯ ಮತ್ತು ಜಂಟಿಭಾದ್ಯತಾ ಗುಂಪುಗಳ ಯೋಜನೆಯನ್ನು ರೂಪಿಸಲಾಗಿದೆ.ಹಿಂದಿನಿಂದಲೂ ಸಂಘವು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಎ ತರಗತಿಯನ್ನು ಪಡೆದುಕೊಂಡಿದ್ದು 2023-24ನೇ ಸಾಲಿಗೂ ಸಹ ಎ ತರಗತಿ ಪಡೆದುಕೊಂಡಿರುತ್ತದೆ ಎಂದರು. ಒಬ್ಬ ಸದಸ್ಯನ ಎಲ್ಲಾ ಸಾಲದ ಮಿತಿ ಗರಿಷ್ಠ 60 ಲಕ್ಷ ಆಗಿದ್ದು,ಸಂಘದಲ್ಲಿ ಯಶಸ್ವಿನಿ ರೈತರ ವಿಮಾ ಯೋಜನೆ ಜಾರಿಯಲ್ಲಿದ್ದು 2023-24ನೇ ಸಾಲಿನಲ್ಲಿ ಒಟ್ಟು 1093 ಜನ ಸದಸ್ಯರು ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊAಡಿದ್ದಾರೆ.ರೂ.1,57.575 ಗಳನ್ನು ವಿಮಾ ಯೋಜನೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು. 2023-24ನೇ ಸಾಲಿನ 7ನೇ ತರಗತಿ.ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮತ್ತು ಸಂಘದ ವ್ಯಾಪ್ತಿಗೆ ಬರುವ ಸರಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನವನ್ನು ನೀಡಲಾಗುವುದು.ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ಸೋಮವಾರಪೇಟೆ ತಾಲೂಕಿನ ವಸತಿ ರಹಿತ ಸರಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಪಿ.ದಿವಾನ್, ನಿರ್ದೆಶಕರುಗಳಾದ ಜಿ.ಬಿ.ಸೋಮಯ್ಯ, ಬಿ.ಎಂ.ಸುರೇಶ್.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ.ರವೀಂದ್ರ ಇದ್ದರು.