ಮಡಿಕೇರಿ ಸೆ.18 NEWS DESK : ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾಅತ್ ಆಶ್ರಯದಲ್ಲಿ ಸೆ.20 ರಿಂದ 22ರ ವರೆಗೆ “ಮದದೇ ಮದೀನಾ” ಬೃಹತ್ ಮಿಲಾದ್ ಸಮಾವೇಶ ನಾಪೋಕ್ಲುವಿನಲ್ಲಿ ನಡೆಯಲಿದೆ ಎಂದು ಜಮಾಅತ್ನ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರೆಹಮಾನ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಮಾವೇಶಕ್ಕೆ ಸೆ.20 ರಂದು ಜುಮುಅ ನಮಾಜ್ನ ನಂತರ ನಾಪೋಕ್ಲು ಟೌನ್ ಮುಹಿಯದ್ದೀನ್ ಸುನ್ನಿ ಮುಸ್ಲಿಂ ಜಮಾಅತ್ನ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರೆಹಮಾನ್ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ದೊರೆಯಲಿದೆ ಎಂದರು. ಸಂಜೆ 7 ಗಂಟೆಗೆ ಧಾರ್ಮಿಕ ಪ್ರಭಾಷಣ ನಡೆಯಲಿದ್ದು, ನಾಪೋಕ್ಲು ಟೌನ್ ಮುಸ್ಲಿಂ ಜಮಾಅತ್ ಮುದರಿಸ್ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದಾರೆ. ಮಿಲಾದ್ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉಸ್ಮಾನ್ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಖತೀಬ್ ಉಬೈದ್ ಸಖಾಫಿ ಅಲ್ ಅಝ್ಹರಿ ವಯನಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುದರಿಸ್ ಕುಂಜಿಲ ನಿಝಾರ್ ಅಹ್ಸನಿ ಕಕ್ಕಿಡಿಪುರಂ ದುಆ ನೇತೃತ್ವ ವಹಿಸಲಿದ್ದಾರೆ ಎಂದರು. ಸೆ.21 ರಂದು ಬೆಳಿಗ್ಗೆ 9 ಗಂಟೆಗೆ ಮದ್ರಸ ವಿದ್ಯಾರ್ಥಿಗಳಿಗೆ ಕಲಾ ಸ್ಪರ್ಧೆ ನಡೆಯಲಿದ್ದು, ಕಾರ್ಯಕ್ರಮವನ್ನು ನಾಪೋಕ್ಲು ಮುಅಲ್ಲಿಂ ಹಿದಾಯತುಲ್ ಇಸ್ಲಾಂ ಮದ್ರಸ್ನ ಸದರ್ ರಫೀಖ್ ಅಹ್ಸನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಮಾನ್ ವಹಿಸಿದ್ದಾರೆ ಎಂದು ತಿಳಿಸಿದರು. ಸಂಜೆ 7 ಗಂಟೆಗೆ ಹುಬ್ಬುರಸೂಲ್ ಪ್ರಭಾಷಣ ನಡೆಯಲಿದ್ದು, ಕಾರ್ಯಕ್ರಮವನ್ನು ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಮಾಜಿ ಖತೀಬ್ ಶಾದುಲಿ ಸಖಾಫಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಂ.ಅಬೂಬಕರ್ ವಹಿಸಲಿದ್ದು, ಯಹ್ಯ ಬಾಖವಿ ಪುಝಕ್ಕರ ಮುಖ್ಯ ಭಾಷಣ ಮಾಡಲಿದ್ದಾರೆ. ದುಆ ನೇತೃತ್ವವನ್ನು ಸಯ್ಯಿದ್ ಅಬ್ದುಲ್ ಅಝೀಝ್ ತಂಙಳ್ ಮಲೇಶಿಯ ವಹಿಸಲಿದ್ದಾರೆ ಎಂದು ಹೇಳಿದರು. ಸೆ.22 ರಂದು ಸಂಜೆ 4 ಗಂಟೆಗೆ ಸಾರ್ವಜನಿಮ ಸಮಾವೇಶ ನಡೆಯಲಿದ್ದು, ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾಪೋಕ್ಲು ಟೌನ್ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಮಾನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು. ಸಂಜೆ 7 ಗಂಟೆಗೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಆತ್ಮೀಯ ಮಜ್ಲಿಸ್ ನಡೆಯಲಿದ್ದು, ದುಆ ನೇತೃತ್ವವನ್ನು ಸಯ್ಯಿದ್ ಅಲ್ ಮಶ್ಹೂರ್ ಆಟಕೋಯ ತಂಙಳ್ ಅಲ್ ಅಝ್ಹರಿ ನಿಲಾಮುಟಂ ವಹಿಸಲಿದ್ದಾರೆ ಎಂದು ತಿಳಿಸಿದರು. ಜಮಾಅತ್ನ ಮಾಜಿ ಅಧ್ಯಕ್ಷ ಸಲೀಂ ಹ್ಯಾರಿಸ್ ಮಾತನಾಡಿ, ಸೆ.22 ರಂದು ಮಧ್ಯಾಹ್ನ 1.30 ಗಂಟೆಗೆ ಹಳೇತೂಕು ಮಸೀದಿ ಆವರಣದಿಂದ ನಾಪೋಕ್ಲು ಮಾರುಕಟ್ಟೆಯವರೆಗೆ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಲಿದ್ದು, ಜಾಥಾದಲ್ಲಿ ಪ್ರವಾದಿ ಮಹಮ್ಮದ್ರ ಶಾಂತಿ ಸಂದೇಶ ಹಾಗೂ ಅಲ್ಲಾ ಶ್ಲೋಕ ಪಠಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಮಿತಿಯವರು ಜಾಗೃತಿ ವಹಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಮಾಅತ್ ಮಾಜಿ ಅಧ್ಯಕ್ಷ ಬಿ.ಹೆಚ್.ಹಮೀದ್, ಅಬ್ದುಲ್ ಹಝಿಜ್, ಸಮಾವೇಶ ಸಮಿತಿ ಕಾರ್ಯದರ್ಶಿ ಸಿ.ಹೆಚ್.ಅಹಮ್ಮದ್ ಹಾಗೂ ಗೌರವಾಧ್ಯಕ್ಷ ಕೆ.ಕೆ.ಉಸ್ಮಾನ್ ಉಪಸ್ಥಿತರಿದ್ದರು.