ವಿರಾಜಪೇಟೆ ಸೆ.20 NEWS DESK : ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಜಡ್ಜ್ ಬಿ ಪರೀಕ್ಷೆಯಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಚರೀಷ್ ಪೊನ್ನಣ್ಣ ಉತ್ತೀರ್ಣನಾಗುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಹ ಕರಾಟೆ ಸ್ಪರ್ಧೆಗಳ ತೀರ್ಪುಗಾರನಾಗುವ ಅರ್ಹತೆಯನ್ನು ಪಡೆದುಕೊಂಡಿದ್ದಾನೆ. ಈ ಅರ್ಹತಾ ಪರೀಕ್ಷೆಯಲ್ಲಿ ಕೊಡಗಿನಿಂದ ಎಂಟು ಜನರು ಪಾಲ್ಗೊಂಡಿದ್ದು, ಇದರಲ್ಲಿ ಮೂರು ಜನ ಉತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಒಟ್ಟು 270 ಪ್ರಶ್ನೆಗಳಿದ್ದು, ಇದರಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಿ ಹಾಗೂ ಒಂದು ಪ್ರಾಯೋಗಿಕ ಸ್ಪರ್ಧೆಯ ತೀರ್ಪುಗಾರನಾಗಿ ಈ ಸಾಧನೆಯನ್ನು ಮಾಡಿದ್ದಾನೆ. ಚರೀಷ್ ವಿರಾಜಪೇಟೆಯ ಬೋಪಯ್ಯ ಹಾಗೂ ಪುಷ್ಪಾ ದಂಪತಿಯ ಪುತ್ರ. ಚಿಕ್ಕಪೇಟೆಯಲ್ಲಿನ ಸೋಮಣ್ಣ ಸಿನ್ಸೆ ಅವರ ವಿದ್ಯಾರ್ಥಿ.