ವಿರಾಜಪೇಟೆ ಸೆ.20 NEWS DESK : ಚಿಕ್ಕಪೇಟೆ ಯೂನಿಯನ್ ಬ್ಯಾಂಕ್ ವತಿಯಿಂದ ಪಿಂಚಣಿದಾರರಿಗೆ ಪಿಂಚಣಿ ವ್ಯವಸ್ಥೆಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಬ್ಯಾಂಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಕೆ.ನಾಗರಾಜು ಪಿಂಚಣಿದಾರರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾಹಿತಿಯನ್ನು ಪಡೆದುಕೊಂಡರು. ಪಿಂಚಣಿದಾರರ ಪಿಂಚಣಿ ಖಾತೆಯಿಂದ ತೆರಿಗೆ ಕಟಾವು ಆಗಿರುವುದು, ಪಿಂಚಣಿದಾರರು ಮೃತಪಟ್ಟಲ್ಲಿ ಕುಟುಂಬದವರು ನೀಡಬೇಕಾದ ದಾಖಲೆಗಳ ವಿವರ, 80 ವರ್ಷ ಮೇಲ್ಪಟ್ಟ ಪಿಂಚಣಿದಾರರ ಪಿಂಚಣಿಯ ಪರಿಷ್ಕರಣೆಯ ಬಗ್ಗೆ ಮರು ಪರಿಶೀಲನೆ ಮಾಡುವುದು ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಪಿಂಚಣಿದಾರರು ಪಡೆಯುವ ಪಿಂಚಣಿ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆಯಾದಲ್ಲಿ ಕೂಡಲೇ ಮುಖ್ಯ ವ್ಯವಸ್ಥಾಪಕರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ಪಿಂಚಣಿದಾರರು ಕೂಡ ಬ್ಯಾಂಕ್ ಸಿಬ್ಬಂದಿಗಳ ಜೊತೆಗೆ ಅನೇಕ ಸಂದೇಹಗಳನ್ನು ಬಗೆಹರಿಸಿಕೊಂಡರು. ಈ ಸಭೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರದ 75 ಕ್ಕೂ ಅಧಿಕ ಪಿಂಚಣಿದಾರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಜೇಮ್ಸ್ ಮೆನೇಜಸ್, ನಿರೀಕ್ಷಾ, ವೆಂಕಟೇಶ್, ಗೌರಿ, ಕಿರಣ್ ಹಾಗೂ ಇನ್ಶೂರೆನ್ಸ್ ಪ್ರತಿನಿಧಿ ದೇಚಮ್ಮ ರವರು ಉಪಸ್ಥಿತರಿದ್ದರು.