ಮಡಿಕೇರಿ ಸೆ.20 NEWS DESK : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಡಿ.ಎಸ್ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹವಲು ವಿಚಾರಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಸಂಘವು ಈ ಸಾಲಿನಲ್ಲಿ 3.ಲಕ್ಷ ದ 2.ಸಾವಿರಗಳಷ್ಟು ನಿವ್ವಳ ಲಾಭಾಂಶ ಗಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಪೂರಕವಾದ ಯೋಜನೆಗಳಿಗೆ ಒಕ್ಕೂಟದ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಒಕ್ಕೂಟದ ವಿಸ್ತಾರಣಾಧಿಕಾರಿ ವೀಣಾ ಮಾತನಾಡಿ, ಪಶುಪಾಲನೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಆರ್.ಕುಮಾರಸ್ವಾಮಿ, ನಿರ್ದೇಶಕರಾದ ರಾಮಣ್ಣ ರೈ, ಪುಟ್ಟೆಗೌಡ, ದೇವೆಗೌಡ, ಗುಜೇಂದ್ರ, ಪುಟ್ಟಯ್ಯ, ಅಶ್ವಿನಿ ಕುಮಾರ್, ಗೋವಿಂದ ಶೆಟ್ಟಿ, ಪುರುಷೋತ್ತಮ, ಪುಷ್ಪಲತಾ, ಸುಶೀಲಾ, ಲಕ್ಷ್ಮಿ ಸೇರಿದಂತೆ ಕಾರ್ಯನಿರ್ವಣಾಧಿಕಾರಿ ರಾಮೇಗೌಡ ಹಾಜರಿದ್ದರು. ಸಂಘಕ್ಕೆ ಹೆಚ್ಚು ಹಾಲನ್ನು ನೀಡುತ್ತಿರುವ ರೈತರಿಗೆ ಬಹುಮಾನವನ್ನು ನೀಡಲಾಯಿತು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮಂಡಿಸಿದರು. ರಾಮೇಗೌಡ ಸ್ವಾಗತಿಸಿ, ವಂದಿಸಿದರು.