ಮಡಿಕೇರಿ ಸೆ.20 NEWS DESK : ತಾಲ್ಲೂಕು ದಸರಾ ಕ್ರೀಡಾಕೂಟಕ್ಕೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಚಾಲನೆ ನೀಡಿದರು. ಅಥ್ಲೆಟಿಕ್ಸ್ ಸಂಬಂಧಿಸಿದಂತೆ 100, 200, 400, 800 ಹಾಗೂ 1500 ಹಾಗೂ 5 ಸಾವಿರ, 10 ಸಾವಿರ ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ, ರಿಲೇ, ಹಾಗೆಯೇ ವಾಲಿಬಾಲ್, ಕೋಕೋ, ಥ್ರೋಬಾಲ್, ಪುಟ್ಬಾಲ್ ಆಟಗಳು ನಡೆದವು. ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಹಾಕಿ ಆಯ್ಕೆ ಪ್ರಕ್ರಿಯೆಯು ಕುಶಾಲನಗರ ಕೂಡಿಗೆಯ ಹಾಕಿ ಟರ್ಪ್ ಮೈದಾನದಲ್ಲಿ ಸೆಪ್ಟೆಂಬರ್ 21 ರಂದು ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ಸರ್ಕಾರ ದಸರಾ ಕ್ರೀಡಾಕೂಟಕ್ಕೆ ಅವಕಾಶ ಮಾಡಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳು ನಡೆಯಲಿದ್ದು, ಈ ಅವಕಾಶವನ್ನು ಕ್ರೀಡಾಪಟುಗಳು ಬಳಸಿಕೊಳ್ಳುವಂತೆ ಸಲಹೆ ಮಾಡಿದರು. ಕ್ರೀಡಾ ತರಬೇತಿದಾರರು ಇತರರು ಇದ್ದರು.
ಕುಶಾಲನಗರ ತಾಲ್ಲೂಕಿನವರಿಗೆ ಸೆಪ್ಟೆಂಬರ್, 21 ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನ (ಮಡಿಕೇರಿ ಮತ್ತು ಕುಶಾಲನಗರ ಹಾಕಿ ಕ್ರೀಡಾಪಟುಗಳಿಗೆ ಹಾಕಿ ಆಯ್ಕೆ ಪ್ರಕ್ರಿಯೆಯು ಕೂಡಿಗೆ ಕ್ರೀಡಾಶಾಲೆ ಮೈದಾನದಲ್ಲಿ ನಡೆಯಲಿದೆ). ಸೋಮವಾರಪೇಟೆ ತಾಲ್ಲೂಕಿನವರಿಗೆ ಸೆಪ್ಟೆಂಬರ್, 22 ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನ (ಸೋಮವಾರಪೇಟೆಯ ಹಾಕಿ ಕ್ರೀಡಾಪಟುಗಳಿಗೆ ಹಾಕಿ ಆಯ್ಕೆ ಪ್ರಕ್ರಿಯೆಯು ಕ್ರೀಡಾ ಶಾಲೆ ಮೈದಾನ, ಕೂಡಿಗೆಯಲ್ಲಿ ನಡೆಯಲಿದೆ) ಕ್ರೀಡಾಕೂಟ ನಡೆಯಲಿದೆ. ಪೊನ್ನಂಪೇಟೆ ತಾಲ್ಲೂಕಿನವರಿಗೆ ಸೆಪ್ಟೆಂಬರ್, 23 ರಂದು ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನ ಪೊನ್ನಂಪೇಟೆ(ಹಾಕಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ). ವಿರಾಜಪೇಟೆ ತಾಲ್ಲೂಕಿನವರಿಗೆ ಸೆಪ್ಟೆಂಬರ್, 24 ರಂದು ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನ ಪೊನ್ನಂಪೇಟೆ (ಹಾಕಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ).