ಮಡಿಕೇರಿ ಸೆ.23 NEWS DESK : ಆರವತ್ತರ ದಶಕದ ಆರಂಭದಿಂದಲೂ ಇ.ಎಂ.ಇ. ಹಾಕಿ ಕ್ಷೇತ್ರದಲ್ಲಿ ತನ್ನದೇ ಆದ ಖ್ಯಾತಿಯನ್ನು ಉಳಿಸಿಕೊಂಡಿದೆ. ಪ್ರಾರಂಭದ ದಿನಗಳಲ್ಲಿ ಸಾಮಾನ್ಯ ಆಟಗಾರರನ್ನು ಹೊಂದಿದ್ದ ತಂಡ ಕೆಲವೇ ವರ್ಷಗಳಲ್ಲಿ ಹಲವು ಪ್ರತಿಭಾನ್ವಿತ ಆಟಗಾರರೊಂದಿಗೆ ಕೆಲವು ಭರವಸೆಯ ಆಟಗಾರರ ಪಡೆಯನ್ನು ಸಿದ್ಧಪಡಿಸಿ ಸಾಂಘಿಕ ಹೋರಾಟದಲ್ಲಿ ಹೆಸರುಗಳಿಸುತ್ತಾ ಪ್ರವರ್ಧಮಾನಕ್ಕೆ ಬಂತು. ಪಂದ್ಯಗಳನ್ನು ಗೆಲ್ಲಿಸಿ ಕೊಡುವಂತಹ ಆತ್ಮವಿಶ್ವಾಸದ ಆಟಗಾರರು ತಂಡದಲ್ಲಿ ಕಾಣಿಸಿಕೊಂಡರು.
ಇ.ಎಂ.ಇ ಇತಿಹಾಸ : : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ತಮ್ಮ ಆಡಳಿತದಲ್ಲಿ ಸೇನೆಯನ್ನು ಇನ್ನಷ್ಟು ಬಲಪಡಿಸಲು 1943ರಲ್ಲಿ ಕೋರ್ ಆಫ್ ರಾಯಲ್ ಬ್ರಿಟೀಷ್ ಆರ್ಮಿ ಎಕ್ಯೂಪ್ ಮೆಂಟ್ ಘಟಕವನ್ನು ಆರಂಭಿಸಿತು. ಇದರ ಕಾರ್ಯವೈಖರಿ ಏನೆಂದರೆ ಯುದ್ಧದಲ್ಲಿ ಬಳಸಿದ ಯುದ್ಧ ಸಾಮಗ್ರಿಗಳನ್ನು, ವಾಹನಗಳನ್ನು ರಿಪೇರಿ ಮಾಡುವುದು ಮತ್ತು ಅಭಿವೃದ್ಧಿಪಡಿಸುವುದು. ಸ್ವಾತಂತ್ರ್ಯ ನಂತರ ಬ್ರಿಟೀಷರು ದೇಶ ಬಿಟ್ಟು ಹೋದ ನಂತರ ಹಲವು ಬದಲಾವಣೆಯೊಂದಿಗೆ ಅಧಿಕೃತವಾಗಿ ಇ.ಎಂ.ಇ (ಎಲೆಕ್ಟ್ರಿಕ್ ಮೆಕ್ಯಾನಿಕ್ ಇಂಜಿನಿಯರ್ಸ್) ಎಂದು ನಾಮಕರಣ ಮಾಡಲಾಯಿತು. ಇದರ ಕೇಂದ್ರ ಕಚೇರಿ ಸಿಕಂದರಾಬಾದ್ ನಲ್ಲಿದೆ. ಇ.ಎಂ.ಇ ಗೆ ಈಗ 81 ವರ್ಷ. ಇದು ಇ.ಎಂ.ಇ. ನಡೆದು ಬಂದ ದಾರಿ.
ಹಾಕಿ ಕ್ರೀಡೆಯ ಆಗುಹೋಗು :: 1970 ಮತ್ತು 80ರ ದಶಕದ ಆವಧಿಯಲ್ಲಿ ಅಂದಿನ ಹೀರೋಗಳಲ್ಲಿ ಒಬ್ಬರಾಗಿ ಮಿಂಚಿದ್ದ ಅನುಭವಿ ಆಟಗಾರ ಶರವೇಗದ ಕೊಡಂದೇರ ನಂಜಪ್ಪ ಕುಶ ಅವರ ಸೇರ್ಪಡೆಯಿಂದ ತಂಡಕ್ಕೆ ಆನೆ ಬಲ ಬಂದಂತಾಯಿತು. ಅಂದಿನಿಂದ ತಂಡ ಖ್ಯಾತಿಯನ್ನು ಕುಗ್ಗಿಸಿಕೊಳ್ಳದೆ ಸೋಲು ಗೆಲುವುಗಳ ಹಾದಿಯಲ್ಲಿ ಸಾಗುತ್ತಾ ಬಂತು.ಕಲಾತ್ಮಕ ಆಟಗಾರರೆನಿಸಿಕೊಂಡ ಕೊಡಂದೇರ ಕುಶ ಆನಂದದ ಕ್ಷಣಗಳನ್ನು ಸೃಷ್ಟಿಸಿದ್ದರು. ಕೊಡಗಿನ ಯುವ ಪ್ರತಿಭಾವಂತ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸುವಲ್ಲಿ ಪ್ರಮುಖ ಕಾರಣಕರ್ತರಾದರು. ಇವರೊಂದಿಗೆ ಹಂತ ಹಂತವಾಗಿ ಹಲವು ಆಟಗಾರರು ಆತ್ಮವಿಶ್ವಾಸದಿಂದ ಸಾಥ್ ನೀಡಿದರು.
ಹಿರಿಯ – ಕಿರಿಯ ಆಟಗಾರರು :: ಸೃಷ್ಟಿಸಿದ್ದ ಅದೆಷ್ಟೋ ಭಾವಪೂರ್ಣ ಕ್ಷಣಗಳನ್ನು ಎಂದೂ ಮರೆಯುವಂತಿಲ್ಲ. ಇವರೆಲ್ಲರೂ ಇ.ಎಂ.ಇ ಮೂಲಕ ಸರ್ವಿಸಸ್ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಪ್ರತಿಮ ಸಾಧನೆ ತೋರಿದ್ದರು.
ಕೊಡಗಿನ ಇ.ಎಂ.ಇ ಆಟಗಾರರು ::
ಕೊಡಂದೇರ ಕುಶ ನಂಜಪ್ಪ : : ಭಾರತ ಹಾಕಿ ತಂಡದ ಪರ ಏಷ್ಯನ್ ಗೇಮ್ಸ್ ಆಡಿ 1979 ನೇ ಪ್ರೀ ಒಲಂಪಿಕ್ಸ್ ಆಡಿದ ಆಟಗಾರ. ಮೊಣಕಾಲು ನೋವಿನಿಂದ 1980 ನೇ ಮಾಸ್ಕೋ ಒಲಂಪಿಕ್ಸ್ ನಿಂದ ಅವಕಾಶ ವಂಚಿತರಾದರು.
ಐತಿಚಂಡ ನಂಜಪ್ಪ(ಕಾಶಿ) : : ಇ.ಎಂ.ಇ ಯ ಮುನ್ನಡೆ ಆಟಗಾರ. ಅದ್ಭುತ ಕ್ರೀಡಾಪಟು. ಸರ್ವಿಸಸ್ ಆಟಗಾರ. ದಕ್ಷಿಣ ಭಾರತದ ಆಯ್ಕೆ ಶಿಬಿರದಲ್ಲಿದ್ದವರು.
ಚೋಳಂಡ ಮುದ್ದಯ್ಯ(ಡಾಲು) : : ಇ.ಎಂ.ಇ ಯ ಅತ್ಯುತ್ತಮ ಫುಲ್ ಬ್ಯಾಕ್ ಆಟಗಾರ. ಸರ್ವಿಸಸ್ ಆಟಗಾರ.
ನೆಲ್ಲಮಕ್ಕಡ ಅಪ್ಪು ಕಾರ್ಯಪ್ಪ :: ಇ.ಎಂ.ಇ ಯ ಮುನ್ನಡೆ ಆಟಗಾರ. ಎನ್.ಐ.ಎಸ್ ತರಬೇತಿದಾರ. ಗುಜರಾತ್ ರಾಜ್ಯ ಪ್ರತಿನಿಧಿಸಿದ್ದರು.
ಪುಗ್ಗೇರ ತಿಮ್ಮಯ್ಯ(ಕಿಟ್ಟು) : : ಇ.ಎಂ.ಇ ಯ ಹಾಫ್ ಬ್ಯಾಕ್ ಆಟಗಾರ.
ಕೇಲೆಟ್ಟೀರ ಅಶೋಕ್ ಸೋಮಣ್ಣ : : ಇ.ಎಂ.ಇ ಯ ಮುನ್ನಡೆ ಆಟಗಾರ
ಮಾದಂಡ ರವಿ ಪೆಮ್ಮಯ್ಯ : : ಇ.ಎಂ.ಇ ಯ ಮುನ್ನಡೆ ಆಟಗಾರ. ಎನ್.ಐ.ಎಸ್ ತರಬೇತಿದಾರ. ಪೊನ್ನಂಪೇಟೆ ಕ್ರೀಡಾಶಾಲೆಯ ತರಬೇತಿದಾರರಾಗಿದ್ದರು.
ನೆರವಂಡ ಮಧು ಪೂಣಚ್ಚ : : ಇ.ಎಂ.ಇ ಹಾಗೂ ಆರ್ಮಿ ರೆಡ್ ಆಟಗಾರ.
ಚೇಯಂಡ ಅಪ್ಪಚ್ಚು :: ಇ.ಎಂ.ಇ ಯ ಮುನ್ನಡೆ ಆಟಗಾರ. ಅದ್ಭುತ ತೀರ್ಪುಗಾರ.
ಬೊಳ್ತಜ್ಜಿ ಅಶೋಕ್ :: ಇ.ಎಂ.ಇ ಯ ಅದ್ಭುತ ಫುಲ್ ಬ್ಯಾಕ್ ಆಟಗಾರ
ಅರೆಯಡ ಬೇಬಿ ಚಿಣ್ಣಪ್ಪ : : ಇ.ಎಂ.ಇ ಆಟಗಾರ. ಎನ್.ಐ.ಎಸ್ ತರಬೇತಿದಾರ. ಹೈದರಾಬಾದ್ ತಂಡದ ಪರ ನ್ಯಾಷನಲ್ ಆಡಿದ್ದರು.
ಅಲ್ಲಂಡ ವಾಸು ಮಾಚಯ್ಯ : : ಇ.ಎಂ.ಇ ಗೋಲ್ ಕೀಪರ್. ಹೈದರಾಬಾದ್ ತಂಡದ ಪರ ನ್ಯಾಷನಲ್ ಆಡಿದ್ದರು.
ಚಂದಪಂಡ ಆಕಾಶ್ ಚಂಗಪ್ಪ : : ಇ.ಎಂ.ಇ ಯ ಹಾಫ್ ಬ್ಯಾಕ್ ಆಟಗಾರ. ಅದ್ಭುತ ತೀರ್ಪುಗಾರ.
ಮಾರ್ಚಂಡ ಪ್ರಭು :: ಇ.ಎಂ.ಇ ಯ ಮುನ್ನಡೆ ಆಟಗಾರ.
ಚೇಮಿರ ಬೆಳ್ಳಿಯಪ್ಪ : : ಇ.ಎಂ.ಇ ಯ ಮುನ್ನಡೆ ಆಟಗಾರ..
ವಿನೋದ್ : : ಇ.ಎಂ.ಇ ಯ ಹಾಫ್ ಬ್ಯಾಕ್ ಆಟಗಾರ.
ದಿವಂಗತ ಬಲ್ಲಚಂಡ ಪೂವಯ್ಯ(ಪೂಕುಞ್ಞ) : : ಕೊಡಗಿನಿಂದ ಸರ್ವಿಸಸ್ ಆಡಿದ ಪ್ರಥಮ ಹಾಕಿ ಆಟಗಾರ.
ಭಾರತದ ಆಯ್ಕೆ ಶಿಬಿರದಲ್ಲಿದ್ದವರು.
ದಿವಂಗತ ಕರ್ನೆಯಂಡ ರಾಜು : : ಇ.ಎಂ.ಇ ಆಟಗಾರ.
ದಿವಂಗತ ಕಾದೀರ ವಾಸು ಮಾಚಯ್ಯ : : ಇ.ಎಂ.ಇ ಯ ಮುನ್ನಡೆ ಆಟಗಾರ.
ದಿವಂಗತ ಮೂಕಳೇರ ಕಾಶಿ ಪೂಣಚ್ಚ : : ಇ.ಎಂ.ಇ ಯ ಮುನ್ನಡೆ ಆಟಗಾರ.
ದಿವಂಗತ ಬಲ್ಲಚಂಡ ಸುರೇಶ್ ಬಿದ್ದಪ್ಪ : : ಇ.ಎಂ.ಇ ಆಟಗಾರ. ಎನ್.ಐ.ಎಸ್ ತರಬೇತಿದಾರ.
ದಿವಂಗತ ಅಜ್ಜಿನನಕಂಡ ಸತೀಶ್ ಅಯ್ಯಣ್ಣ : : ಇ.ಎಂ.ಇ ಅತ್ಯುತ್ತಮ ಗೋಲಕಿಪರ್. ಪ್ರಸ್ತುತ ಕೊಡಗಿನ ಇ.ಎಂ.ಇ ಆಟಗಾರ
ಚೀರಂಡ ಚಂಗಪ್ಪ(ಆಕರ್ಶ್), ಮುಕ್ಕಾಟೀರ ಚಂಗಪ್ಪ(ಹೇಮಂತ್), ಪಳಂಗಂಡ ಪೊನ್ನಪ್ಪ ::
ಈ ಮೇಲ್ಕಂಡ ಎಲ್ಲಾ ಆಟಗಾರರು ಇ.ಎಂ.ಇ ತಂಡ, ಕಮಾಂಡ್, ಆರ್ಮಿ – 11, ಆರ್ಮಿ ರೆಡ್ ಮತ್ತು ಗ್ರೀನ್, ಭಾರತದ ಕೆಲವು ಪ್ರದರ್ಶನ ಪಂದ್ಯಾವಳಿಗಳು, ಕೆಲವರು ಭಾರತದ ಆಯ್ಕೆ ಶಿಬಿರ, ಇನ್ನೂ ಕೆಲವು ಆಟಗಾರರು ಬೇರೆ ರಾಜ್ಯದ ಪರ ರಂಗಸ್ವಾಮಿ ಕಪ್ ನ್ಯಾಷನಲ್ಸ್ ಹಾಗೂ ಭಾರತದ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಗಳಾದ ನೆಹರು ಗೋಲ್ಡ್ ಕಪ್, ಬಾಂಬೆ ಗೋಲ್ಡ್ ಕಪ್, ಬೀಟನ್ ಕಪ್ ಹಾಗು ಇಂದಿರಾ ಗಾಂಧಿ ಗೋಲ್ಡ್ ಕಪ್ ಮುಂತಾದ ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಕೆಲವು ಆಟಗಾರರು ಅದ್ಭುತ ತೀರ್ಪುಗಾರರಾಗಿದ್ದಾರೆ, ಇನ್ನು ಕೆಲವು ಆಟಗಾರರು ಅದ್ಭುತ ತರಬೇತಿದಾರರು, ಹೀಗೆ ಇ.ಎಂ.ಇ ಆಟಗಾರರು ಎಲ್ಲದರಲ್ಲೂ ಮೇಲುಗೈ ಸಾಧಿಸಿ ಕೊಡಗಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ ಎಂದರೆ ತಪ್ಪಾಗಲಾರದು.
ಇ.ಎಂ.ಇ ಆಟಗಾರರ ಸ್ನೇಹ ಮಿಲನ :: ಪ್ರತಿ ವರ್ಷವೂ ಇ.ಎಂ.ಇ ಆಟಗಾರರು ಒಂದೆಡೆ ಸೇರಿ ಕೊಡಂದೇರ ಕುಶ ಅವರ ಅಧ್ಯಕ್ಷತೆಯಲ್ಲಿ ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಇದರಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ತಾವು ನಡೆದು ಬಂದ ಹಾದಿ ಹಾಗೂ ಹಾಕಿ ಆಟದ ಅನುಭವಗಳನ್ನು , ತಮ್ಮ ಕಷ್ಟ ಸುಖವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದು ವಾಡಿಕೆಯಾಗಿದೆ. ಇವರ ಈ ಪರಿಶ್ರಮವನ್ನು ಇಂದು ಕೊಡಗಿನ ಜನರು ಅರಿಯಲಿ. ಕೊಡಗಿನಿಂದ ಇ.ಎಂ.ಇ ಯತ್ತ ಅತೀ ಹೆಚ್ಚು ಕ್ರೀಡಾಪಟುಗಳು ಸಾಗಲಿ. ಇಂತಹ ಹಿರಿಯರನ್ನು ಮಾರ್ಗದರ್ಶನವಾಗಿಟ್ಟುಕೊಂಡು ಕೊಡಗಿನ ಯುವ ಪೀಳಿಗೆಯ ಕೊಡಗಿಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು ತರಲಿ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ