ಮಡಿಕೇರಿ ಸೆ.24 NEWS DESK : ಕರಿಮೆಣಸು ಬೆಳೆ ಮೇಲೆ ಸಕಾ೯ರ ಜಿಎಸ್ ಟಿ ವಿಧಿಸಿರುವುದರಿಂದಾಗಿ ಬೆಳೆಗಾರರ ಸಮಸ್ಯೆ ಹೆಚ್ಚಾಗಿದ್ದು, ಕೇಂದ್ರ ಸಕಾ೯ರ ಕರಿಮೆಣಸು ಮೇಲೆ ವಿಧಿಸಿರುವ ಜಿಎಸ್ ಟಿಯನ್ನು ತೆಗೆದುಹಾಕುವ ಮೂಲಕ ಕೃಷಿಕರ ಪರವಾಗಿ ನಿಲವು ತಳೆಯಬೇಕಾಗಿದೆ ಎಂದು ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ನ ನಿದೇ೯ಶಕ ತೇಲಪಂಡ ಪೂವಯ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾಷಿ೯ಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೂವಯ್ಯ, ಕಪಿಮೆಣಸು ಫಸಲಿನ ಮೇಲೂ ಜಿಎಸ್ ಟಿ ವಿಧಿಸಿರುವುದು ಸರಿಯಾದ ಕ್ರಮವಲ್ಲ, ನಿಯಮಪ್ರಕಾರವಾಗಿ ಕರಿಮೆಣಸು ಜಿಎಸ್ ಟಿ ವ್ಯಾಪ್ತಿಗೆ ಸೇರಿದ್ದರೂ ಕೃಷಿ ಫಸಲಾಗಿರುವುದರಿಂದಾಗಿ ಜಿಎಸ್ ಟಿ ವಿಧಿಸುವುದರಿಂದ ವಿನಾಯಿತಿ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ಈಗಾಗಲೇ ಕೇಂದ್ರ ಸಕಾ೯ರದ ಗಮನ ಸೆಳೆದಿವೆ ಎಂದರು. ಕಾನೂನುಗಳನ್ನು ಏಕಪ್ರಕಾರವಾಗಿ ಬೆಳೆಗಾರರಿಗೂ ವಿಧಿಸುವುದರಿಂದಾಗಿ ಬೆಳೆಗಾರರ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಂದ ಅನೇಕರು ವಿಮುಖರಾಗುತ್ತಿರುವ ವಿದ್ಯಮಾನಕ್ಕೆ ಕಾರಣವಾಗಬಹುದು ಎಂದೂ ತೇಲಪಂಡ ಪೂವಯ್ಯ ಎಚ್ಚರಿಸಿದರು. ಬ್ರೆಜಿಲ್ ವಿಯಟ್ನಾಂ ಸೇರಿದಂತೆ ವಿಶ್ವದ ಕಾಫಿ ಕ್ಷೇತ್ರದ ಆಗುಹೋಗುಗಳನ್ನು ಗಮನಿಸಿದರೆ ಭಾರತೀಯ ಕಾಫಿಗೆ ಉತ್ತಮ ಭವಿಷ್ಯವಿರುವುದು ಸ್ಪಷ್ಟ, ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಶೇ.8 ರಷ್ಟು ಹೆಚ್ಚಾಗುತ್ತಿರುವುದು ಕೂಡ ಕಾಫಿ ರಂಗಕ್ಕೆ ಆಶಾದಾಯಕವಾಗಿ ಪರಿಣಮಿಸಿದೆ ಎಂದು ಪೂವಯ್ಯ ಹೇಳಿದರು. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕೃಷಿ ಫಸಲು ನಷ್ಟಕ್ಕೆ ಮಾತ್ರ ಪರಿಹಾರ ನೀಡಲಾಗುತ್ತಿದೆ, ಆದರೆ ಪರಿಹಾರವನ್ನೂ ಪ್ರಾಕೖತ್ತಿಕ ವಿಕೋಪದಿಂದ ಹಾನಿಗೊಳಗಾದ ಭೂಮಿಗೂ ನೀಡಿ ಪರಿಹಾರವನ್ನು ಹೆಚ್ಚಿಸುವ ನಿಯಮ ಜಾರಿಯಾಗಬೇಕು, ಇಲ್ಲದೋ ಹೋದಲ್ಲಿ ಬೆಳೆಯೊಂದಿಗೆ ಭೂಮಿ ಕೂಡ ಕಳೆದುಕೊಂಡ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂದೂ ಪೂವಯ್ಯ ಕಳವಳ ವ್ಯಕ್ತಪಡಿಸಿದರು. ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ಮಹಿಳೆಯರೇ ಸೇರಿ ಕಾಫಿ ಸೇವನೆಯನ್ನು ಪ್ರೋತ್ಸಾಹಿಸುವ ಸಂಘ ಸ್ಥಾಪಿಸಿ 23 ವಷ೯ಗಳು ಕಳೆದಿವೆ ಸಂಘಕ್ಕೆ ಪ್ರತೀ ವಷ೯ವೂ ಯುವತಿಯರೂ ಸೇರಿದಂತೆ ಸದಸ್ಯೆಯರಾಗಿ ಹೆಚ್ಚಿನವರು ಸೇಪ೯ಡೆಯಾಗುತ್ತಿರುವುದು ಸಂಘದ ಬೆಳವಣಿಗೆ ನಿಟ್ಟಿನಲ್ಲಿ ಶ್ಲಾಘನೀಯವಾಗಿದೆ ಎಂದರು. ಕಾಯ೯ಕ್ರಮದಲ್ಲಿ ಕಾರುಗುಂದದ ರಮ್ಯ ನರೇನ್ ಕಾಫಿ ಕೆಫೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾಯ೯ದಶಿ೯ ಅನಿತಾ ನಂದ, ಜಂಟಿ ಕಾಯ೯ದಶಿ೯ ರಾಣಿನರೇಂದ್ರ, ಸಂಘಟನಾ ಕಾಯ೯ದಶಿ೯ ರೀಟಾ ದೇಚಮ್ಮ, ಖಜಾಂಚಿ ಕುಮಾರಿ ಕುಂಜ್ಞಪ್ಪ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಮಹಿಳಾ ಸದಸ್ಯೆಯರು ಸಂಘದ ವಾಷಿ೯ಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು. ಸರುಸತೀಶ್ ಪ್ರಾಥಿ೯ಸಿದರು.
ಕಾಫಿ ದಸರಾಕ್ಕೆ ಸಹಕಾರ :: ಮಡಿಕೇರಿ ದಸರಾದಲ್ಲಿ ಈ ವಷ೯ದಿಂದ ಕಾಫಿ ದಸರಾ ಎಂಬ ಹೊಸ ಕಾಯ೯ಕ್ರಮ ಸೇಪ೯ಡೆಯಾಗುತ್ತಿದ್ದು, ಕಾಫಿಗೆ ಸಂಬಂಧಿಸಿದಂತೆ 32 ಮಳಿಗೆಗಳಲ್ಲಿ ಸಾವ೯ಜನಿಕರಿಗೆ ಮಾಹಿತಿ ನೀಡಲಾಗುತ್ತದೆ, ಅ 6 ಮತ್ತು 7 ರಂದು ಕಾಫಿ ದಸರಾ ಸಂದಭ೯ ಕಾಫಿ ಮತ್ತು ಇತರ ಕೖಷಿ ಸಂಬಂಧಿತ ಬೆಳೆಗಾರರಿಗೆ ಸೂಕ್ರ ಮಾಹಿತಿ ನೀಡಲಾಗುತ್ತದೆ, ಮಹಿಳಾ ಕಾಫಿ ಜಾಗ್ರತಿ ಸಂಘದ ಸದಸ್ಯೆಯರೂ ಕಾಫಿ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಫಿ, ಮತ್ತಿತರ ಕೖಷಿ ಸಂಬಂಧಿತ ಬೆಳೆಗಳ ಮಾಹಿತಿಯ ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್ ಟಿ ಕಾಯ೯ಕ್ರಮದಲ್ಲಿ ಮನವಿ ಮಾಡಿದರು, ಸಂಘದ ವತಿಯಿಂದ ಕಾಫಿ ದಸರಾಕ್ಕೆ ಸಂಪೂಣ೯ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಭರವಸೆ ನೀಡಿದರು.