ಮಡಿಕೇರಿ ಅ.2 NEWS DESK : ವಿಶ್ವ ಹಿಂದೂ ಪರಿಷದ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಹಿಂದೂ ಸಮಾಜದ ದೇವಾಲಯಗಳು ಹಾಗೂ ಪೂಜಾ ಮಂದಿರಗಳ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸನಾತನ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಒಂದು ದಿನದ ಅರ್ಚಕರ ಚಿಂತನಾ ಬೈಠಕ್ ಸಭೆ ನಡೆಯಿತು. ವಿರಾಜಪೇಟೆಯ ಕಾಕೋಟು ಪರಂಬುವಿನ ಶ್ರೀ ಕಾಳಭೈರವ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರೀಯ ಧರ್ಮ ಪ್ರಸಾರದ ಪ್ರಮುಖ ಸೂರ್ಯನಾರಾಯಣ ಅವರು ಬೌದ್ಧಿಕ್ ಮೂಲಕ ಜಾಗೃತಿ ಸಂದೇಶ ನೀಡಿದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಚಿ.ನಾ.ಸೋಮೇಶ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಯತೀಶ್ ನಂಜಪ್ಪ ವಂದಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಪರಿಷದ್ ಗೀತೆಯನ್ನು ಪ್ರಸ್ತುತ ಪಡಿಸಿದರು. ಜಿಲ್ಲಾ ಮಠ ಮಂದಿರ ಪ್ರಮುಖ್ ಡಾ.ಮಹಾಭಲೇಶ್ವರ ಭಟ್, ಶ್ರೀಕಾಳಭೈರವ ದೇವಾಲಯದ ತಕ್ಕರಾದ ಅಮ್ಮಂಡಿರ ಚೇತನ್, ಪ್ರಚಾರ ಪ್ರಸಾರ ಪ್ರಮುಖ್ ಶಾನ್ ಸೋಮಣ್ಣ, ಧರ್ಮ ಪ್ರಸಾರ ಪ್ರಮುಖ್ ಕಿರಣ್, ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ್, ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು, ನೂರಾರು ಅರ್ಚಕರು ಉಪಸ್ಥಿತರಿದ್ದರು.