ಮಡಿಕೇರಿ ಅ.4 NEWS DESK : ಬೇರ್ ನಾ ನೋಡಿದ ಕೊಡವ ಸಿನಿಮಾದಲ್ಲಿ ಅಪರೂಪದ ಸಿನಿಮಾ. ಕೊಡವ ಸಿನೆಮಾ ಅಂದರೆ ಇಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ಹೆಸರು ಟ್ಯಾಗ್ ಆಗುವುದು ಸಾಮಾನ್ಯವಾಗಿ ಹೋಗಿದೆ. ಬೇರ್ ಒಂದು ಕೌಟುಂಬಿಕ ಸಂಬಂಧ ಗಳ/ವಿಷೇಶವಾಗಿ ಅಪ್ಪ ಮಗಳ ಸಂಬಂಧ ದ ಸುತ್ತ ಹೆಣೆದ ಕಥೆ. ಇಡೀ ಸಿನಿಮಾ ನಿರೀಕ್ಷೆ ಗಳು ಹುಸಿಯಾದಾಗ ಆಗುವ ನೋವು, ಮಾನಸಿಕವಾಗಿ ಬದುಕನ್ನೇ ಹೇಗೆಲ್ಲ ಜರ್ಜರಿತ ಗೊಳಿಸುತ್ತದೆ ಎಂಬುದನ್ನ “ಬೇರ್” ತಿಳಿಸಿ ಕೊಡುತ್ತದೆ. ತೆಳಂಗ್ ನೀರ್ (ಗೋಪಿ ಪೀಣ್ಯ ರ) ಸಿನಿಮಾದ ನಂತರ ಕೊಡವ ಭಾಷೆಯಲ್ಲಿ ಅತ್ಯಂತ ವಿಭಿನ್ನ ವಾಗಿ ಮೂಡಿಬಂದಿರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳುವೆ. ಬೇರ್ ತಾಂತ್ರಿಕವಾಗಿ ಕೂಡಾ ತಾಂತ್ರಿಕ ತೆಯನ್ನ ಚೆನ್ನಾಗಿ ಬಳಸಿಕೊಂಡು ಕೊಡವ ಭಾಷಾ ಸಿನಿಮಾಗೆ ಹೊಸ ಭಾಷ್ಯವನ್ನು ಬರೆದಿದೆ. ಸಿನಿಮಾದ ನಿರ್ದೇಶಕರು ಪ್ರತೀ ಫ್ರೇಮ್ ನಲ್ಲೂ ಆಶಕ್ತಿಯನ್ನ ಬಹಳ ಶ್ರದ್ಧೆಯಿಂದ ಹೋಮ್ ಮಾಡಿರುವುದು ಅವರ ಇದುವರೆಗಿನ ಅನುಭವವನ್ನು ದಾರೆಎರೆದಿರುವುದನ್ನ ಪ್ರೇಕ್ಷಕರು “ಬೇರ್” ನಲ್ಲಿ ಗಮನಿಸಿ wow ಎಂದು ಹೇಳದೆ ಇರಲಾಗದು. “ಬೇರ್” ಕಲಾವಿದರು ಒಬ್ಬರಿಗೊಬ್ಬರು ಪರಸ್ಪರ ಪೈಪೋಟಿ ನೀಡಿರುವುದು ಈ ಸಿನಿಮಾದ ಮತ್ತೊಂದು ವಿಷೇಶ. ತಂದೆಯ ಪಾತ್ರದಾರಿ ಇಲ್ಲಿ ಎಲ್ಲೋ ಒಂದು ಕಡೆ ತನ್ನ ದ್ವಂದ್ವ ಚಿಂತನೆ. ಹುಸಿಯಾಗುತ್ತಿರುವ ತನ್ನ ಚಿಂತನೆಯಿಂದ ತನಗೆ ತಾನೇ ವಿಲನ್ನಾಗಿಬಿಡುತ್ತಾನೆ. ಹಾಗೆಯೇ ಅಪ್ಪನ ಹೆಜ್ಜೆಯ ಮೇಲೋಂದು ಹೆಜ್ಜೆಗಳನ್ನು ಇಟ್ಟು ಬೆಳೆದ ಮಗಳು ತನ್ನ ತಪ್ಪು ನಿರ್ಧಾರದಿಂದ ಅಪ್ಪನಂತೇ ತಾನೂ ದುರಂತದ ಮಗದೊಂದು ಮುಖವಾಗಿ ಬಿಡುತ್ತಾಳೆ. ಇಡೀ ಸಿನಿಮಾದಲ್ಲಿ ಮಗುವಿನ ಕೂಗನ್ನ ಬಳಸಿಕೊಂಡ ರೀತಿ ಅನುಭವಿಸಿಯೇ ಅನುಬವಿಸಬೇಕೇ ವಿನಹ ಮಾತಿನಲ್ಲಿ ಹೇಳಲಾರೆ.. ನಾ ಹೇಳೋದು ಇನ್ನೂ ಇದೆ ನೀವುಗಳು ಪರದೆಯಲ್ಲಿ ನೋಡಿ ಅನುಭವಿಸಿ.
ವಿಮರ್ಶೆ :: ಅಲ್ಲಾರಂಡ ವಿಠಲ್ ನಂಜಪ್ಪ.