ಮಡಿಕೇರಿ ಅ.5 NEWS DESK : ಮಡಿಕೇರಿ ದಸರಾ ಜನೋತ್ಸವದಲ್ಲಿಂದು (ಶನಿವಾರ ಅ.5) ಮಕ್ಕಳ ನಡೆಯಲಿದೆ, 11 ನೇ ವಷ೯ದ ಮಕ್ಕಳ ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಬೆಳಗ್ಗಿನಿಂದಲೇ ಮಕ್ಕಳಿಗಾಗಿ ವೈವಿಧ್ಯಮಯ ಸ್ಪಧಾ೯ ಕಾಯ೯ಕ್ರಮಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಹೆಚ್ ಟಿ ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ಗಾಂಧಿ ಮೈದಾನದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳಿಂದ ಮಂಟಪ, ಕ್ಲೇಮಾಡೆಲಿಂಗ್ ಮತ್ತು ಛದ್ನವೇಶ ಸ್ಪಧೆ೯ಗಳು ಆಯೋಜಿತವಾಗಿದೆ, ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳ ದಸರಾಕ್ಕೆ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದು ಛದ್ನವೇಷ ಸ್ಪಧೆ೯ಗೇ 130 ಸ್ಪಧಿ೯ಗಳಿದ್ದಾರೆ, ಮಕ್ಕಳ ಅಂಗಡಿಗೆ 80 ಮಕ್ಕಳ ಸಂತೆಗೆ 65 ಮಕ್ಕಳ ಮಂಟಪಕ್ಕೆ 20, ಕ್ಲೇಮಾಡೆಲಿಂಗ್ ಸ್ಪಧೆ೯ಗೆ 23 ಸ್ಪಧಿ೯ಗಳ ನೋಂದಣಿಯಾಗಿದೆ. ಇದೇ ವೇಳೆ ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ಮಕ್ಕಳಿಂದ ವಾದ್ಯ ವೈವಿಧ್ಯ ಕೂಡ ಆಯೋಜಿತವಾಗಿದೆ. ಸಂಜೆ 6 ಗಂಟೆಯಿಂದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಸುಮಾರು 4 ಗಂಟೆಗಳ ಕಾಲ ಮಕ್ಕಳಿಂದಲೇ ವೈವಿಧ್ಯಮಯ ಕಾಯ೯ಕ್ರಮಗಳು ನಡೆಯಲಿದೆ. ಹುಬ್ಬಳ್ಳಿಯ ಭೂಮಿಕಾ ದೀಪಿಕಾ ಸಹೋದರಿಯರಿಂದ ಗಾನವೈವಿಧ್ಯ, ಮಡಿಕೇರಿಯ ವಿಕ್ರಂಶೆಟ್ಟಿ ಅವರಿಂದ ಮಾಂತ್ರಿಕ ಜಾದೂ ಕಾಯ೯ಕ್ರಮ , ಬನ್ನೂರಿನ ಚಿಲಿಪಿಲಿ ಗೊಂಬೆ ತಂಡದಿಂದ ಬೊಂಬೆಗಳ ಕಲರವ ಕೂಡ ಮಕ್ಕಳ ದಸರಾದ ಪ್ರಮುಖ ಆಕಷ೯ಣೆಗಳಾಗಿದೆ.