ಸುಂಟಿಕೊಪ್ಪ ಅ.7 NEWS DESK : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 54ನೇ ವರ್ಷದ ಆಯುಧಪೂಜಾ ಸಮಾರಂಭದ ಅಂಗವಾಗಿ ಸಂಘದ ವತಿಯಿಂದ ಕುಶಾಲನಗರ ವಿಸನ್ಸ್ಸ್ಪ್ರಿಂಗ್ ಹಾಗೂ ಮಡಿಕೇರಿಯ ಆಶೋಧಯ ಸಮಿತಿ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ವಾಹನಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ಮಾತನಾಡಿದ ಅವರು ಗ್ರಾಮೀಣ ಬಡ ಜನರಿಗೆ ಸದುಪಯೋಗಗೊಳಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ 130ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ನಡೆಸಿಕೊಂಡಿದ್ದು, 80 ಮಂದಿಗೆ ಕನ್ನಡಕ ಹಾಗೂ 7 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆಗೆಶಿಪಾರಸ್ಸು ಮಾಡಲಾಯಿತು. ಶಿಬಿರದಲ್ಲಿ ರಕ್ತದ ಒತ್ತಡ, ಹೆಚ್ಐವಿ, ಸಿಫಿಲಿಸ್ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ತಜ್ಞ ವೈದ್ಯರಾದ ಪುಷ್ಪೆಂದ್ರಯಾಧವ್, ಪುಷ್ಪೇಂದ್ರ ಮಿಶ್ರ ಹಾಗೂ ಸಿಬ್ಬಂದಿಗಳು ತಪಾಣೆ ನಡೆಸಿದರು. ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ರಕ್ಷಿತ್, ರಿಜ್ವಾನ್, ಬಸಪ್ಪ, ಶಕ್ತಿ ವೇಲು ಕಾರ್ಯಕಾರಿ ಸಮಿತಿ ಸದಸ್ಯರು ಸಾರ್ವಜನಿಕರು ಹಾಜರಿದ್ದರು.