Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬಾಳೆಯಡ ಕಿಶನ್ ಪೂವಯ್ಯ ಅವರ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಗೆ ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ*
  • *ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಂಪರ್ ಆಫರ್: ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್*
  • *ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ಕೈಲ್ ಮುಹೂರ್ತ ಜಂಬರ : ಸಿಎಂ ಡಿ.ಕೆ.ಶಿವಕುಮಾರ್ ಭಾಗಿ*
  • *ಮಡಿಕೇರಿ ಸರಕಾರಿ ಮಹಿಳಾ ಕಾಲೇಜಿನಲ್ಲಿ ರೋಟರೆಕ್ಟ್ ಕ್ಲಬ್ ಪದಗ್ರಹಣ*
  • *ದಸರಾ ಸುವರ್ಣ ಮಹೋತ್ಸವ ಸಂಭ್ರಮ : ಶ್ರೀ ಕೋಟೆ ಮಹಾಗಣಪತಿ ಸಮಿತಿಯಿಂದ ಸ್ವಚ್ಛತಾ ಶ್ರಮದಾನ : ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ*
  • *ಸೂಪರ್ ಎಲ್‌ನಿನೊ ಪರಿಣಾಮ : ನೀರನ್ನು ಮಿತವಾಗಿ ಬಳಸಿ ಸಹಕರಿಸಿ : ಸಚಿವ ಪಿ.ಎಂ. ನರೇಂದ್ರಸ್ವಾಮಿ*
  • *ನಿಯಮಗಳಡಿಯಲ್ಲೇ ಜವಾಬ್ದಾರಿಯಿಂದ ದಸರಾ ಆಚರಿಸಿ : ಸಚಿವ ಪಿ.ಎಂ.ನರೇಂದ್ರಸ್ವಾಮಿ*
  • *ಮಕ್ಕಳ ಸುರಕ್ಷತೆಗಾಗಿ ವಿವಿಧೆಡೆ ಜಾಗೃತಿ ಅಭಿಯಾನ*
  • *ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*
  • *ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮೀಸಲು ಅರಣ್ಯವೆಂದು ಘೋಷಿಸುವ ಸುತ್ತೋಲೆ : ಆತಂಕದಲ್ಲಿ ಗ್ರಾಮಸ್ಥರು : ಅರಣ್ಯ ವ್ಯವಸ್ಥಾಪನಾಧಿಕಾರಿಯನ್ನು ಭೇಟಿಯಾದ ರವಿ ಕುಶಾಲಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮೀಸಲು ಅರಣ್ಯವೆಂದು ಘೋಷಿಸುವ ಸುತ್ತೋಲೆ : ಆತಂಕದಲ್ಲಿ ಗ್ರಾಮಸ್ಥರು : ಅರಣ್ಯ ವ್ಯವಸ್ಥಾಪನಾಧಿಕಾರಿಯನ್ನು ಭೇಟಿಯಾದ ರವಿ ಕುಶಾಲಪ್ಪ*

ಅಕ್ಟೋಬರ್ 7, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.7 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಸಿ ಮತ್ತು ಡಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿರುವ ಬಡವರ ಜಮೀನುಗಳನ್ನು ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಗ್ರಾ.ಪಂ ಗಳಿಗೆ ಸುತ್ತೋಲೆ ಹೊರಡಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದ ಸರ್ವೆ ನಂಬರ್ 55ರ ಒಟ್ಟು ವಿಸ್ತೀರ್ಣ 109.44 (ಹೆಕ್ಟೇರುಗಳಲ್ಲಿ) ಜಮೀನುಗಳನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಎಂದು ಅರಣ್ಯ ವ್ಯವಸ್ಥಾಪನಾಧಿಕಾರಿಯಾಗಿರುವ ನಿವೃತ್ತ ಕೆಎಎಸ್ ಅಧಿಕಾರಿ ರೇಣುಕಾಂಬ ಅವರು ಮಕ್ಕಂದೂರು ಗ್ರಾ.ಪಂ ಗೆ 2024 ಜುಲೈ 5ಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಇದೇ ರೀತಿಯ ಸುತ್ತೋಲೆ ಜಿಲ್ಲೆಯ ಇನ್ನಿತರ ಗ್ರಾ.ಪಂ ಗಳಿಗೂ ಕಳುಹಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ತಾವು ಹಾಗೂ ಗ್ರಾಮಸ್ಥರು ರೇಣುಕಾಂಬ ಅವರನ್ನು ಮೈಸೂರು ಕಚೇರಿಯಲ್ಲಿ ಭೇಟಿಯಾಗಿರುವುದಾಗಿ ತಿಳಿಸಿದರು. ಜಮೀನುಗಳ ಪಹಣಿ ಪತ್ರಿಕೆಗಳ ಕಬ್ಜೆದಾರರ ಕಾಲಂನಲ್ಲಿ ಅರಣ್ಯ ಅಂತ ದಾಖಲೆ ಇದ್ದು ಸದರಿ ಜಮೀನುಗಳಲ್ಲಿ ಅನಧಿಕೃತವಾಗಿಯಾಗಲಿ ಅಥವಾ ಅಧಿಕೃತವಾಗಿಯಾಗಲಿ ಸಾರ್ವಜನಿಕರು ಯಾರಾದರು ಜಮೀನುಗಳನ್ನು ಸಾಗು ಮಾಡುತ್ತಿದ್ದಾರೆಯೇ ಹಾಗೂ ಯಾರಿಗಾದರೂ ಮಂಜೂರಾತಿಯಾಗಿದೆಯೇ, 02.12.1995ರ ಪೂರ್ವದಲ್ಲಿ ದರಖಾಸ್ತು ಮೂಲಕ ಜಮೀನು ಮಂಜೂರಾಗಿರುವ ಬಗ್ಗೆ ಮತ್ತು ಸಾರ್ವಜನಿಕ ಅಭಿವೃದ್ಧಿಗಾಗಿ ಜಮೀನನ್ನು ಕಾಯ್ದಿರಿಸಲಾಗಿದೆಯೆ ಎನ್ನುವ ಕುರಿತು ಮಾಹಿತಿ ಅವಶ್ಯವಿದ್ದು ಸ್ಥಾನಿಕವಾಗಿ ಪರಿಶೀಲನೆ ಮಾಡಿ ವರದಿ ನೀಡಲು ಕೋರಲಾಗಿದೆ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ರೇಣುಕಾಂಬ ಅವರು ಸುತ್ತೋಲೆ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಹುತೇಕ ಗ್ರಾಮಗಳಲ್ಲಿ ಬಹಿರಂಗವಾಗಿರಲಿಲ್ಲ. ಮಕ್ಕಂದೂರು ಗ್ರಾ.ಪಂ ಗೆ ಬಂದಿರುವ ಸುತ್ತೋಲೆಯನ್ನು ಆಧರಿಸಿ ನಾವುಗಳು ರೇಣುಕಾಂಬ ಅವರನ್ನು ಭೇಟಿಯಾಗಿ ಜಿಲ್ಲೆಯ ನೈಜ ಸ್ಥಿತಿಗತಿಯನ್ನು ವಿವರಿಸಿದ್ದೇವೆ. ಸಿ ಮತ್ತು ಡಿ ಭೂಮಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಬಡವರು, ದುರ್ಬಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಆದಿವಾಸಿಗಳು ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಈ ಭೂಮಿ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಅರಣ್ಯ ಇಲಾಖೆಗೆ ಹಿಂದೆ ನಿರ್ವಹಣೆಗಾಗಿ ನೀಡಲಾಗಿತ್ತು ಅಷ್ಟೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಭೂಮಿ ಕುರಿತು ಹಲವು ವರ್ಷಗಳಿಂದ ಗೊಂದಲವಿದೆ. ಜಿಪಿಎಸ್ ಸರ್ವೆ ಬದಲಿಗೆ ಇಲಾಖೆಗಳು ಜಂಟಿಯಾಗಿ ಚೈನ್ ಸರ್ವೆ ನಡೆಸಿದಾಗ ಮಾತ್ರ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಪೈಸಾರಿ ಜಾಗದಲ್ಲಿ ಬದುಕು ಕಟ್ಟಿಕೊಂಡಿರುವವರು ಅಗತ್ಯ ದಾಖಲೆಗಳನ್ನು ಹೊಂದಿದ್ದಾರೆ. ಇದೀಗ ದಿಢೀರ್ ಆಗಿ ಜಮೀನನ್ನು ಅರಣ್ಯವೆಂದು ಘೋಷಿಸುವುದಾಗಿ ಹೊರಡಿಸಲಾದ ಸುತ್ತೋಲೆಯಿಂದ ಗ್ರಾಮೀಣ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಸ್ಥರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಗಳಿಗೆ ಭೇಟಿ ನೀಡಿ ನೈಜತೆಯನ್ನು ಅರಿಯಬೇಕು ಎಂದು ರೇಣುಕಾಂಬ ಅವರ ಬಳಿ ಮನವಿ ಮಾಡಿಕೊಂಡಿದ್ದೇವೆ. ಸುಮಾರು ಒಂದೂವರೆ ಗಂಟೆ ಕಾಲ ನಮ್ಮೊಂದಿಗೆ ಚರ್ಚಿಸಿದ ಅವರು, ಗ್ರಾಮಸ್ಥರು ಖುದ್ದು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಗೆ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ತಲುಪಿಸಿದರೆ ಗ್ರಾಮಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ರವಿ ಕುಶಾಲಪ್ಪ ತಿಳಿಸಿದರು. ರೇಣುಕಾಂಬ ಅವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಗ್ರಾಮಸ್ಥರು ಶೀಘ್ರ ತಮ್ಮ ಬಳಿ ಇರುವ ದಾಖಲೆಗಳ ಪ್ರತಿಯನ್ನು ಮೈಸೂರು ಕಚೇರಿಗೆ ತಲುಪಿಸಿ ಎಂದು ಮನವಿ ಮಾಡಿದರು. ಕೇವಲ ಸೀಮಿತ ಅವಧಿಯಷ್ಟೇ ಉಳಿದಿದ್ದು, ದಾಖಲೆ ನೀಡುವುದು ವಿಳಂಬವಾದರೆ ಜಮೀನು ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು. ಆದ್ದರಿಂದ ಗ್ರಾಮಸ್ಥರು ಒಗ್ಗಟ್ಟಾಗಿ ತಕ್ಷಣ ಎಚ್ಚೆತ್ತುಕೊಳ್ಳಬೇಕು, ಗ್ರಾ.ಪಂ ಗಳು ದಾಖಲೆಗಳನ್ನು ಸಂಗ್ರಹಿಸಿ ರೇಣುಕಾಂಬ ಅವರಿಗೆ ತಲುಪಿಸಿದರೆ ಗ್ರಾಮಸ್ಥರಿಗೆ ಸಹಕಾರಿಯಾಗುತ್ತದೆ ಎಂದರು. ಹೆಚ್ಚಿನ ಮಾಹಿತಿ ಮತ್ತು ಸಹಕಾರದ ಅಗತ್ಯವಿದ್ದರೆ ಗ್ರಾಮಸ್ಥರು ತಮ್ಮ ಮೊಬೈಲ್ ಸಂಖ್ಯೆ 9448000431, 9480149389 ನ್ನು ಸಂಪರ್ಕಿಸಬಹುದು ಎಂದು ರವಿ ಕುಶಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಬೋಪಯ್ಯ ಎಸ್.ಪಿ, ಸುನಿತಾ ಹಚ್ಚಿನಾಡು, ಲೋಕೇಶ್ ಸಿ.ಜಿ ಹಾಗೂ ಅರುಣ್ ಕುಮಾರ್ ಎಂ.ಎಂ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಬಾಳೆಯಡ ಕಿಶನ್ ಪೂವಯ್ಯ ಅವರ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಗೆ ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ*

ಅಕ್ಟೋಬರ್ 4, 2026

*ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಂಪರ್ ಆಫರ್: ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್*

ಅಕ್ಟೋಬರ್ 4, 2026

*ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ಕೈಲ್ ಮುಹೂರ್ತ ಜಂಬರ : ಸಿಎಂ ಡಿ.ಕೆ.ಶಿವಕುಮಾರ್ ಭಾಗಿ*

ಅಕ್ಟೋಬರ್ 4, 2026

*ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಂಪರ್ ಆಫರ್: ಸರ್ಕಾರದಿಂದ ಉಚಿತ ಆನ್‌ಲೈನ್ ಕೋಚಿಂಗ್*

ಅಕ್ಟೋಬರ್ 4, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಸರ್ಕಾರಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಕರ್ನಾಟಕದ ನಿರುದ್ಯೋಗಿ ಯುವಜನರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ‘ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ…

*ಬೆಂಗಳೂರಿನಲ್ಲಿ ಕೊಡಗು ಗೌಡ ಸಮಾಜದ ಕೈಲ್ ಮುಹೂರ್ತ ಜಂಬರ : ಸಿಎಂ ಡಿ.ಕೆ.ಶಿವಕುಮಾರ್ ಭಾಗಿ*

ಅಕ್ಟೋಬರ್ 4, 2026

*ಮಡಿಕೇರಿ ಸರಕಾರಿ ಮಹಿಳಾ ಕಾಲೇಜಿನಲ್ಲಿ ರೋಟರೆಕ್ಟ್ ಕ್ಲಬ್ ಪದಗ್ರಹಣ*

ಅಕ್ಟೋಬರ್ 4, 2026

*ದಸರಾ ಸುವರ್ಣ ಮಹೋತ್ಸವ ಸಂಭ್ರಮ : ಶ್ರೀ ಕೋಟೆ ಮಹಾಗಣಪತಿ ಸಮಿತಿಯಿಂದ ಸ್ವಚ್ಛತಾ ಶ್ರಮದಾನ : ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ*

ಅಕ್ಟೋಬರ್ 4, 2026

*ಸೂಪರ್ ಎಲ್‌ನಿನೊ ಪರಿಣಾಮ : ನೀರನ್ನು ಮಿತವಾಗಿ ಬಳಸಿ ಸಹಕರಿಸಿ : ಸಚಿವ ಪಿ.ಎಂ. ನರೇಂದ್ರಸ್ವಾಮಿ*

ಅಕ್ಟೋಬರ್ 3, 2026

*ನಿಯಮಗಳಡಿಯಲ್ಲೇ ಜವಾಬ್ದಾರಿಯಿಂದ ದಸರಾ ಆಚರಿಸಿ : ಸಚಿವ ಪಿ.ಎಂ.ನರೇಂದ್ರಸ್ವಾಮಿ*

ಅಕ್ಟೋಬರ್ 3, 2026

*ಮಕ್ಕಳ ಸುರಕ್ಷತೆಗಾಗಿ ವಿವಿಧೆಡೆ ಜಾಗೃತಿ ಅಭಿಯಾನ*

ಅಕ್ಟೋಬರ್ 3, 2026

*ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ*

ಅಕ್ಟೋಬರ್ 3, 2026

*ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದಿಂದ ಕೈಲ್ ಮುಹೂರ್ತ ಸಂತೋಷಕೂಟ*

ಅಕ್ಟೋಬರ್ 3, 2026

*ನಶಾ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ*

ಅಕ್ಟೋಬರ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.