ಮಡಿಕೇರಿ ಅ.8 NEWS DESK : ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 106ನೇ ವರ್ಷದ ಉತ್ಸವ ಆಚರಣೆ ತಯಾರಿ ನಡೆಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ಗಳನ್ನು ಬಳಸಲಾಗುತ್ತಿದ್ದು, ಕಾಳಿಂಗ ಮರ್ದನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಕೊಪ್ಪಳದ ಪದ್ಮ ಎಲೆಕ್ಟ್ರಿಕಲ್ಸ್ನವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆ ಮಾಡಲಿದ್ದಾರೆ. 28 ಕಲಾ ಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಆರ್.ಬಿ.ರವಿ ಕ್ರಿಯೇಷನ್ಸ್ರವರು ಕಲಾಕೃತಿಗಳನ್ನು ರಚಿಸಲಿದ್ದಾರೆ. ಪ್ಲಾಟ್ಫಾರಂ ನಿರ್ಮಾಣ, ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಮಡಿಕೇರಿಯ ಪುಣ್ಯ ಕ್ರಿಯೇಷನ್ಸ್ನ ಪ್ರಮೋದ್ ಮತ್ತು ತಂಡದವರು ಮಾಡಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್ನ್ನು ಮಡಿಕೇರಿಯ ಗಣೇಶ್ ಬೆಳವಾಯಿ, ಕಿರಣ್, ಸೋಮ, ನಿತಿಶ್ ತಂಡ ಮಾಡಲಿದ್ದು, ಬೆಂಗಳೂರಿನ ಗನ್ ಅನಿಲ್ ಸ್ಪೆಷಲ್ ಎಫೆಕ್ಟ್ ಕಲ್ಪಿಸಲಿದ್ದಾರೆ. ಒಟ್ಟು 16 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು. ಮಂಗಳೂರಿನ ನಾಸಿಕ್ ಬ್ಯಾಂಡ್ ಮಂಟಪವನ್ನು ಮುನ್ನಡೆಸಲಿದೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.