ಮಡಿಕೇರಿ ಅ.8 NEWS DESK : ನಗರದ ಶ್ರೀ ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. 50ನೇ ವರ್ಷದ ಆಚರಣೆಯಲ್ಲಿ ಶ್ರೀ ರಾಮನಿಂದ ರಾವಣನ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಕುಶಾಲ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್ನ ಡೇವಿಡ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. 27 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಸಮಿತಿ ಸದಸ್ಯರು ಕಲಾಕೃತಿಗಳನ್ನು ರಚಿಸಲಿದ್ದಾರೆ. ಟೀಂ ಜೆವೈಸಿ ಕಲಾಕೃತಿಗಳಿಗೆ ಚಲನವಲನ ನೀಡಲಿದೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್ನ್ನು ಸಮಿತಿಯ ಹೇಮರಾಜ್, ವಿವೇಕ್, ಮಂಜಿ, ರವೀಂದ್ರ ತಂಡದವರು ಮಾಡಲಿದ್ದಾರೆ. ಸೋಮವಾರಪೇಟೆಯ ಲೋಬೋ ಧ್ವನಿವರ್ಧಕ ಒದಗಿಸಲಿದ್ದು, ಮಡಿಕೇರಿಯ ಗೌತಮ್ ಮತ್ತು ಸಂದೇಶ್ ಸ್ಟುಡಿಯೋ ಲೈಟಿಂಗ್ ವ್ಯವಸ್ಥೆ ಮಾಡಲಿದ್ದಾರೆ. ಸಮಿತಿ ಸದಸ್ಯರೆ ಪ್ಲಾಟ್ಫಾರಂ ನಿರ್ಮಾಣ ಮಾಡಲಿದ್ದಾರೆ. 25 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಕಳೆದ ಬಾರಿ ಪ್ರಥಮ ಬಹುಮಾನ ಪಡೆದಿದ್ದು, ಈ ಬಾರಿಯೂ ಜನಾಕರ್ಷಣೆಯೊಂದಿಗೆ ಬಹುಮಾನಕ್ಕೆ ಪೈಪೋಟಿ ನೀಡಲಾಗುವುದು. ಮಂಗಳೂರಿನ ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ ಎಂದು ಎಸ್.ಕುಶಾಲ್ ಮಾಹಿತಿ ನೀಡಿದ್ದಾರೆ.