

ನಾಪೋಕ್ಲು NEWS DESK ಅ.11 : ಮಹಾರಾಷ್ಟ್ರದ ಮುಂಬೈನ ಅಂದೇರಿಯಲ್ಲಿ ಕೊಂಬೆಟ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ವತಿಯಿಂದ ನಡೆದ ಮೂರನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಚೆಟ್ಟಿಯಾರಂಡ ದಿಲನ್ ತಿಮಯ್ಯ ಹಾಗೂ ಧೀರಜ್ ಕಾರ್ಯಪ್ಪ ಸಹೋದರರು ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ವಿರಾಜಪೇಟೆಯ ಕಾವೇರಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಧೀರಜ್ ಕಾರ್ಯಪ್ಪ 16ನೇ ವಯೋಮಿತಿಯ ಬ್ಲಾಕ್ ಬೆಲ್ಟ್ ವಿಭಾಗದ ಕುಮಿಟೆಯಲ್ಲಿ ಚಿನ್ನದ ಪದಕ ಪಡೆದುಕೊಂಡರು. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿಯಾಗಿರುವ ದಿಲನ್ ತಿಮ್ಮಯ್ಯ 19ನೇ ವಯೋಮಿತಿಯ ಕರಾಟೆ ಪಂದ್ಯಾವಳಿಯಲ್ಲಿ ಬ್ಲಾಕ್ ಬೆಲ್ಟ್ ವಿಭಾಗದ ಕುಮಿಟೆಯಲ್ಲಿ ಚಿನ್ನ ಮತ್ತು ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಸಹೋದರರು ಬಲಮಾವಟ್ಟಿ ಗ್ರಾಮ ಪಂಚಾಯಿತಿಯ ನೆಲಜಿ ಗ್ರಾಮದ ಚೇಟ್ಟಿಯರಂಡ ಮನು ಹಾಗೂ ಪವಿತ ದಂಪತಿಗಳ ಪುತ್ರ. ಕರಾಟೆ
ಮಾಸ್ಟರ್ ಸೆನ್ ಸಾಯಿ ನಾಗೇಂದ್ರಪ್ಪ ಅವರ ಶಿಷ್ಯರಾಗಿದ್ದಾರೆ. (ವರದಿ : ದುಗ್ಗಳ ಸದಾನಂದ)








