ಮಡಿಕೇರಿ ಅ.14 NEWS DESK : ಇತರರಿಗೆ ಮಾದರಿಯಾಗಿರುವ “ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ” ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಶ್ರಮದಲ್ಲಿರುವ ನೊಂದ ಹಿರಿಯರಿಗೆ ಅನ್ನದಾನ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. “ಎಲ್ಲರೂ ನಮ್ಮವರು” ಎಂಬ ಘೋಷವಾಕ್ಯದೊಂದಿಗೆ ಮಡಿಕೇರಿಯ ತ್ಯಾಗರಾಜ ಕಾಲೋನಿಯ ತನಲ್ ಆಶ್ರಮದಲ್ಲಿ ಹಿರಿಯರಿಗಾಗಿ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು. ನಂತರ ಆಶಾಕಿರಣದ ಫೈವ್ ಸ್ಟಾರ್ ಸಿಂಗರ್ಸ್ ನ ಭಾಷಾ ಹಾಗೂ ಶಿವಣ್ಣ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿ ಆಶ್ರಮವಾಸಿಗಳಿಗೆ ಮನರಂಜನೆ ನೀಡಲಾಯಿತು ಮತ್ತು ಅನ್ನದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗದ ಅಧ್ಯಕ್ಷ ಮೊಹಮ್ಮದ್ ಆಲಿ, ಉಪಾಧ್ಯಕ್ಷ ಸುಲೇಮಾನ್, ಖಜಾಂಚಿ ಶಿವು, ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್, ಗಾಯಕಿ ಮಮತಾ, ದೀಕ್ಷಿತ್, ನಗರಸಭಾ ಸದಸ್ಯರಾದ ಅಮಿನ್ ಮೊಹಿಸಿನ್, ಬಶೀರ್, ಅಹ್ಮದ್, ಮೇರಿ ವೇಗಸ್, ಲತೀಫ್, ಸಾಮಾಜಿಕ ಕಾರ್ಯಕರ್ತರಾದ ರಜಾಕ್, ಅಬ್ಸೀನಾ, ಸೆಲಿಕತ್ ಹಾಗೂ ಬಡಾವಣೆಯ ನಿವಾಸಿಗಳು ಹಾಜರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.