ಮಡಿಕೇರಿ ಅ.14 NEWS DESK : ಕರ್ನಾಟಕ ಮತ್ತು ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದಿಂದ ಬಾಗಲಕೋಟೆಯಲ್ಲಿ ನಡೆದ 14ನೇ ಕರ್ನಾಟಕ ರಾಜ್ಯ ಕಿವುಡರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು ತಂಡ ತೃತೀಯ ಬಹುಮಾನ ಪಡೆದುಕೊಂಡಿತು. ಬಾಗಲಕೋಟೆಯ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಕೊಡಗು ಸೇರಿದಂತೆ ಸುಮಾರು 20 ಜಿಲ್ಲೆಗಳಿಂದ ಸ್ಪರ್ಧಿಗಳು ಪಾಲ್ಗೊಂಡು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಪ್ರಥಮ ಬಹುಮಾನ ಮಂಗಳೂರು, ದ್ವಿತೀಯ ಬಹುಮಾನ ಮಂಡ್ಯ, ತೃತೀಯ ಕೊಡಗು ಹಾಗೂ ನಾಲ್ಕನೇ ಬಹುಮಾನವನ್ನು ಮೈಸೂರು ತಂಡ ತಮ್ಮದಾಗಿಸಿಕೊಂಡಿತು. ಸಂಜ್ಞೆ ಭಾಷೆ ಹಾಗೂ ಧ್ವಜದ ಚಿಹ್ನೆಗಳನ್ನು ನೋಡುವ ಮೂಲಕ ಕ್ರೀಡೆಗಳಲ್ಲಿ ಸೆಣಸಾಟ ಆರಂಭಿಸಿದ ಕ್ರೀಡಾಪಟುಗಳು ಕೊನೆಯ ಕ್ಷಣದವರೆಗೂ ರೋಚಕವಾಗಿ ಹೋರಾಟ ನಡೆಸಿ ಗಮನ ಸೆಳೆದರು. 2025ರ ಅಕ್ಟೋಬರ್ ತಿಂಗಳಿನಲ್ಲಿ 15ನೇ ಕರ್ನಾಟಕ ರಾಜ್ಯ ಕಿವುಡರ ಕ್ರೀಡಾಕೂಟವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯಲಿದೆ.