ಮಡಿಕೇರಿ ಅ.25 NEWS DESK : ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಚೆನ್ನೈ ನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ನಡೆದ “44ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-2024ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 23 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿದ್ದು, 14 ಚಾಂಪಿಯನ್ ಟ್ರೋಫಿ, 8 ಚಿನ್ನದ ಪದಕ ಮತ್ತು 1 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ರೈನೋಬ್ರೈನ್ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.
ಸ್ಪರ್ಧೆಯಲ್ಲಿ ಒಟ್ಟು 8200 ಮಕ್ಕಳು ಭಾಗವಹಿಸಿದ್ದು, ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ವಿದ್ಯಾರ್ಥಿಗಳು ಸಾಧನೆ ಮೆರೆದರು. ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆ ನಮ್ಮ ಕೇಂದ್ರದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
::: ಚಾಂಪಿಯನ್ ಟ್ರೋಫಿ ವಿಜೇತರು ::: ಕನಿಷಾ ಸುನಿತ್ ಕುಮಾರ್, ನಿಲ್ಹಾ ಜೆ ತಾರಕನ್, ಪರೀಕ್ಷ.ಎ.ಎಲ್, ಪಾವನಿ.ಕೆ.ಕುಂದರ್, ಆರಾಧ್ಯ.ಕೆ.ಸಿ., ಐಡೆನ್.ಜೆ.ತಾರಕನ್, ಚಾರ್ವಿ ದೇಚಮ್ಮ.ಎಸ್.ಎ, ದ್ರುಪದ್.ಪಿ ಮಣಿಕೋಥ್, ಲಿವ್ಯ ಸುನಿತ್ ಕುಮಾರ್, ಯಾನ್ವಿ ಬೋಜಮ್ಮ ಎಂ.ಪಿ., ಅಲುಫ್.ಎ.ಆರ್, ಜಾರ್ಜ್ ಮ್ಯಾಥಿವ್, ನಮನ್ ಎಂ.ಗೌಡ, ಮಿಯ ಅರುಣ್.
::: ಚಿನ್ನದ ಪದಕ ವಿಜೇತರು ::: ಕುಶನ್ ದೇವಪ್ಪ.ವೈ.ಡಿ, ಜೋನ್ನಾ ಮಡ್ತಾ, ಟಿಯ ಕಿಶೋರ್, ರೋನಿತ್ ಗಣಪತಿ.ಎ.ಎಸ್., ಆರನ್ ಅಲ್ಬರ್ಟ್, ರೈವತ್ ಪಟೇಲ್ ಎನ್.ಆರ್, ಗಾನವಿ ಗಂಗಮ್ಮ.ಸಿ.ವಿ, ಆದಿತ್ ಗೌತಮ್.ಕೆ.
::: ಬೆಳ್ಳಿ ಪದಕ ವಿಜೇತರು ::: ಅಲ್ಫಾ.ಎ.ಆರ್.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ಎಲ್ಲಾ ರಾಜ್ಯಗಳ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.