ವಿರಾಜಪೇಟೆ ಅ.28 NEWS DESK : ಕೊಡವ ಕೂಟಾಳಿಯಡ ಕೂಟ ಸಂಘಟನೆ ವತಿಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ಆಯೋಜಿಸಿಸಲಾಗಿದ್ದ ನಾಲ್ಕನೇ ವರ್ಷದ ಕೊಡಗ್’ರ ಚುಪ್ಪಿ ಕೋಗಿಲೆ ಎಂಬ ಆನ್ಲೈನ್ ಗಾಯನ ಸ್ಪರ್ಧೆಯಲ್ಲಿ ಪಳಂಗಂಡ ಶಾನ್ ಸುಬ್ಬಯ್ಯ ಪ್ರಥಮ ಸ್ಥಾನ ಪಡೆಯುವ ಮೂಲಕ “ಕೊಡಗ್ ರ ಚುಪ್ಪಿ ಕೋಗಿಲೆ-2024” ಎನ್ನುವ ಬಿರುದಿಗೆ ಭಾಜನರಾಗಿದ್ದಾರೆ. ದ್ವಿತೀಯ ಸ್ಥಾನವನ್ನು ಕಾಂಡಂಡ ಪರಿಧಿ ಪೂವಮ್ಮ , ತೃತೀಯ ಸ್ಥಾನವನ್ನು ತಾಪಂಡ ಹರ್ಷಿತ್ ಪೊನ್ನಪ್ಪ ಹಾಗೂ ಹಂಚೆಟ್ಟಿರ ದಿಶಾ ದೇಚಮ್ಮ ಪಡೆದುಕೊಂಡರು. ಮೊಣ್ಣಂಡ ಭವಿನ್ ಬೋಪಣ್ಣ, ತಾತಂಡ ದಕ್ಷ್ ಬೋಜಣ್ಣ, ಬೊಳ್ಳಚೆಟ್ಟಿರ ದಿಲೀಪ್ ಕುಮಾರ್, ಬಾಚರಣಿಯಂಡ ಚೈತ್ರಾ ಚಿಣ್ಣಮ್ಮ, ಬಾಚರಣಿಯಂಡ ಪರಿಧಿ ಪೊನ್ನಮ್ಮ, ಬಲ್ಯಮೀದೇರಿರ ರೋಹನ್ ತಿಮ್ಮಯ್ಯ, ಕಾಳಿಮಡ ಹಿತಾ ದೇಚಮ್ಮ ಟಾಪ್ಟೆನ್ ಸ್ಪರ್ಧಿ ಸ್ಥಾನ ಅಲಂಕರಿಸಿದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಮಾರು 43 ಮಕ್ಕಳು ತಮ್ಮ ಕಂಠದಾನದ ಮೂಲಕ ಗಮನ ಸೆಳೆದರು. ಕಾಟಿಮಾಡ ಗಿರಿ ಅಯ್ಯಪ್ಪ, ಕೊಳ್ಳಿಮಾಡ ಕರುಣ್ ಪೂವಯ್ಯ, ಅಲ್ಲಾರಂಡ ಸೋಮಯ್ಯ, ಮಾಳೇಟಿರ ಲೀನಾ ಸೋಮಯ್ಯ ಧನ ಸಹಾಯದ ಮೂಲಕ ಪ್ರೋತ್ಸಾಹ ನೀಡಿದರು. ತೀರ್ಪುಗಾರರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಚೆಕ್ಕೆರ ಪಂಚಮ್ ಬೋಪಣ್ಣ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ನೂರೆರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತಾ ವಾಸುದೇವ ಅವರುಗಳು ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ಜವಾಬ್ದಾರಿ ನಿಭಾಯಿಸಿದರು ಎಂದು ಕೂಟದ ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.