ಮಡಿಕೇರಿ ನ.2 NEWS DESK : ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಇಂದಿರಾ ಕ್ಯಾಂಟಿನ್‍ಬಳಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್‍ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಕರ್ನಾಟಕದಲ್ಲಿ ಇರುವವರೆಗೆ ಮಾನವೀಯ ದೃಷ್ಟಿಯಿಂದ ಎಲ್ಲರೂ ಸಮಾನರು. ಯಾರು ಮೇಲು ಕೀಳು ಎಂಬ ಬೇಧ-ಭಾವವಿಲ್ಲ. ಎಲ್ಲರೂ ಕನ್ನಡದ ಮಕ್ಕಳೇ ಎಂದರು. ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರೊಂದಿಗೆ ನಾವು ಕನ್ನಡದಲ್ಲಿ ವ್ಯವಹರಿಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದ ಅವರು, ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳ ಸಹಕಾರದಿಂದ ಕನ್ನಡದ ಶಾಲೆಗಳನ್ನು ದತ್ತು ಪಡೆದು ಆ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಕೇವಲ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡಭಿಮಾನವನ್ನು ತೋರದೆ ಪ್ರತಿದಿನ ಕನ್ನಡದ ಬಳಕೆಯಾಗಬೇಕು ಆ ನಿಟ್ಟಿನಲ್ಲಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದೆಂದರು. ಈ ಸಂದರ್ಭ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಪ್ರಮುಖರಾದ ವಾಸು, ಸತೀಶ್, ಆರ್.ಲಕ್ಷ್ಮಣ್, ಸಲಹೆಗಾರರಾದ ಚೌರಿರ ರಮೇಶ್, ಬ್ಲಡ್‍ಬಯ್ಯ ಸೇರಿದಂತೆ ವಾಹನ ಚಾಲಕರು ಹಾಜರಿದ್ದರು. ಕೀರ್ತನ್ ರೈ ಪ್ರಾರ್ಥಿಸಿದರು.