ಮಡಿಕೇರಿ ಅ.4 NEWS DESK : ‘ಆರೋಗ್ಯವೇ ಭಾಗ್ಯ’ ಎಂಬ ನುಡಿಯಂತೆ ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಂಪಾದಿಸಬಹುದು. ಆದ್ದರಿಂದ ಇಂದಿನ ಮಕ್ಕಳು ತಮ್ಮ ದೈನಂದಿನ ಶಿಕ್ಷಣದೊಂದಿಗೆ ಆಯ್ದ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಕ್ರೀಡಾಪಟು, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ದೇವಯ್ಯ (ಚುಮ್ಮಿ) ಕರೆ ನೀಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ನ 23ನೇ ವಾರ್ಷಿಕೋತ್ಸವದ ಅಂಗವಾಗಿ ಅ.3 ರಂದು ಪತ್ರಿಕಾ ಭವನದಲ್ಲಿ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬದವರಿಗೆ ಆಯೋಜಿಸಿದ್ದ ಒಳಾಂಗಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಕೆಗಳಲ್ಲಿ ಪಾಲೊಳ್ಳುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಕ್ರೀಡೆಗಳು ಸಹಕಾರಿಯಾಗುತ್ತವೆ. ಪತ್ರಕರ್ತರ ಕುಟುಂಬಗಳು ಇಂತಹ ಕ್ರೀಡಾಕೂಟಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಸ್ಥಾಪಕ ಟ್ರಸ್ಟಿ ಟಿ.ಪಿ. ರಮೇಶ್ ಅವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಕಾರ್ಯಕ್ರಮವನ್ನು ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಕೆ.ತಿಮ್ಮಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀಧರ ಹೂವಲ್ಲಿ, ವಿ.ಪಿ.ಸುರೇಶ್ ಹಾಜರಿದ್ದರು. ಕೊಡಗು ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಟೇಬಲ್ ಟೆನ್ನಿಸ್, ಕೇರಂ, ಚೆಸ್ ಮುಂತಾದ ಕ್ರೀಡೆಗಳಲ್ಲಿ ಪಾಲ್ಗೊಂಡರು.
ಕ್ರೀಡಾ ವಿಜೇತರು ::
ಕೇರಂ ಸಿಂಗಲ್ಸ್ :: ಟಿ.ದಿನೇಶ್ ಪ್ರಥಮ, ಡಿ.ಪಿ ಲೋಕೇಶ್ ದ್ವಿತೀಯ, ರಂಜಿತ್ ಕವಲಪಾರ ತೃತೀಯ
ಕೇರಂ ಡಬಲ್ಸ್ :: ಅಶೋಕ್ ಮಡಿಕೇರಿ-ಎಸ್.ಆರ್.ವತ್ಸಲಾ ಪ್ರಥಮ, ಹನೀಫ್-ಜಿ.ಕೆ.ಬಾಲಕೃಷ್ಣ ದ್ವಿತೀಯ,
ಟೇಬಲ್ ಟೆನ್ನಿಸ್ ಸಿಂಗಲ್ಸ್ :: ರಾಜೇಶ್ ಪ್ರಥಮ, ಧನುಶ್ ದ್ವಿತೀಯ, ಟಿ.ಪಿ ರಮೇಶ್ ತೃತೀಯ,
ಟೇಬಲ್ ಟೆನ್ನಿಸ್ ಡಬಲ್ಸ್ :: ಉಮೇಶ್ ಮತ್ತು ವಿನೊದ್, ರಾಜೇಶ್ ಮುರಳೀಧರ್,
ಚೆಸ್ :: ಡಿ.ಪಿ ಲೋಕೇಶ್ ಪ್ರಥಮ, ವಿನೋದ್ ಮೂಡಗದ್ದೆ ದ್ವಿತೀಯ
ಚೆಸ್ ಮಕ್ಕಳು :: ತರುಣ್ ಬಜೆಕೋಡಿ ಪ್ರಥಮ, ವಿದ್ವತ್ ದ್ವಿತೀಯ.
ಕೇರಂ ಮಕ್ಕಳು :: ತರುಣ್ ಬಜೆಕೋಡಿ ಪ್ರಥಮ, ಅಹನ್ ಪೂಜಾರಿ ದ್ವಿತೀಯ
ಮ್ಯೂಸಿಕಲ್ ಚೇರ್ :: ಸವಿತಾ, ಚರಿತಾ