ಗೋಣಿಕೊಪ್ಪ, ನ.4 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ ( ಕಾಪ್ಸ್ ) ಯಲ್ಲಿ ಗೋ ಗ್ರೀನ್ ಅಭಿಯಾನ: 2024 ದಡಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲಾಯಿತು. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಣತೆ ಬೆಳಗಿಸುವ ಮೂಲಕ ದೀಪಾವಳಿ ಆಚರಿಸುವ ಮೂಲಕ ಸಂಭ್ರಮಿಸಿದರು. ಪರಿಸರಸ್ನೇಹಿ ದೀಪಾವಳಿ ಆಚರಿಸುವ ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಗೈಡ್ ಕ್ಯಾಪ್ಟನ್ ಬಿ.ಎಸ್.ಕಾವೇರಿ, ನಾವು ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯವನ್ನುಂಟು ಮಾಡದೆ ನಮ್ಮ ಪರಿಸರ ಮತ್ತು ನಾಗರಿಕರ ಆರೋಗ್ಯಕ್ಕೆ ನೀಡಬೇಕು. ಇದು ನಮ್ಮ ಪರಿಸರ ಜವಾಬ್ದಾರಿಯ ಅಗತ್ಯತೆ ಎಂದರು. ಪಟಾಕಿ ಸಿಡತವು ನೆಲ, ಜಲ, ಗಾಳಿಯನ್ನು ವಿಕಾರಗೊಳಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದರು. ವಿದ್ಯಾರ್ಥಿಗಳು ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ ಮಾಲಿನ್ಯ ತಡೆಯಿರಿ, ನಮ್ಮ ನಡೆ ಹಸಿರೆಡೆಗೆ, ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ ಮಾಲಿನ್ಯ ತಡೆಯಿರಿ, ನಮ್ಮ ನಡೆ ಹಸಿರೆಡೆಗೆ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಿದರು. ರೇಂಜರ್ ಲೀಡರ್ ಪುಷ್ಪ ಅಶೋಕ್ ಮತ್ತು ಸ್ಕೌಟ್ ಮಾಸ್ಟರ್ ಎಸ್ ಪಾಟೀಲ್ , ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.