ಮಡಿಕೇರಿ ನ.4 NEWS DESK : ಸಮಥ೯ ಕನ್ನಡಿಗರು ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ವಾಷಿ೯ಕ ಪ್ರಶಸ್ತಿಯನ್ನು ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೖಷ್ಣ ಸನ್ಮಾನಿತರಿಗೆ ಗೌರಪಾವ೯ಣೆ ಮೂಲಕ ವಿತರಿಸಿದರು. ನಗರದ ಓಂಕಾರ ಸದನದಲ್ಲಿ ಆಯೋಜಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 11 ಸಾಧಕರಿಗೆ ಸಮಥ೯ ಕನ್ನಡಿಗ ಪ್ರಶಸ್ತಿ ವಿತರಿಸಿ ಮಾತನಾಡಿದ ರಾಜಲಕ್ಷ್ಮಿ ಗೋಪಾಲಕೖಷ್ಣ, ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ವಾಷಿ೯ಕ ಪ್ರಶಸ್ತಿ ನೀಡಿ ಗೌರವಿಸುವ ಕಾಯ೯ ಶ್ಲಾಘನೀಯ ಇಂಥ ಪ್ರಶಸ್ತಿ, ಸನ್ಮಾನಗಳು ಸಾಧಕರಿಗೆ ತಮ್ಮ ಕಾಯ೯ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ.ಮಾತನಾಡಿ, ಕನಾ೯ಟಕಕ್ಕೆ ರಾಜ್ಯದ ಸ್ಥಾನ ದೊರಕಿ 68 ವಷ೯ಗಳೇ ಕಳೆದರೂ ಕನ್ನಡ ಸಾಹಿತ್ಯ ಸಂಸ್ಕೃತಿಗಾಗಿನ ಹೋರಾಟಗಳು ಅಂತ್ಯಕಾಣುತ್ತಿಲ್ಲ, ಬದಲಿಗೆ ದಿನೇ ದಿನೇ ಪರಭಾಷೆಯ ಸವಾರಿ ಕನ್ನಡದ ಮೇಲೆ ಹೆಚ್ಚುತ್ತಲೇ ಇದೆ, ಬಾಲ್ಯದಲ್ಲಿಯೇ ಸಂಸ್ಕಾರದ ಜತೆಜತೆಗೇ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಪ್ರೇಮವನ್ನು ಕಲಿಸಿದರೆ ಕನ್ನಡ ಎಂದೆಂದಿಗೂ ಚಿರನೂತನವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.ಕೋವಿಡ್ ಲಾಕ್ ಡೌನ್ ಸಂದಭ೯ ಮಕ್ಕಳಿಗೆ ಮೊಬೈಲ್ ಮೂಲಕ ಪಾಠ ಹೇಳಿದ್ದೇ ತಪ್ಪಾದಂತಿದೆ, ಲಸಿಕೆಯ ಅಡ್ಡಪರಿಣಾಮಗಳ ಜತೆಗೇ ಮಕ್ಕಳಲ್ಲಿ ಮೊಬೈಲ್ ಚಟದ ಅಡ್ಡಪರಿಣಾಮ ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅನಿಲ್, ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನೇ ಮಕ್ಕಳು ಮರೆಯುತ್ತಾ ಮೊಬೈಲ್ ಲೋಕದಲ್ಲಿ ವಿಹರಿಸುತ್ತಾ ತಮ್ಮದೇ ಪ್ರಪಂಚವನ್ನು ಸೖಷ್ಟಿಸಿಕೊಂಡು ಬಿಟ್ಟಿದ್ದಾರೆ, ಪೋಷಕರ ಮಾತೂ ಸಹಿಸಲಾಗದ ದುಸ್ಥಿತಿಗೆ ಅನೇಕ ಮಕ್ಕಳು ತಲುಪಿರುವುದು ನವ ತಂತ್ರಜ್ಞಾನದ ಕೊಡುಗೆಯಾಗಿದ್ದು ಇಂಥ ಸ್ಥಿತಿಯಿಂದ ಮಕ್ಕಳನ್ನು ಹೊರತಂದು ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನ ಕೂಡಲೇ ಆಗಲೇಬೇಕಾದ ಅನಿವಾಯ೯ತೆಯಿದೆ ಎಂದರು ನೂತನವಾಗಿ ಸಕಾ೯ರ ಉದ್ದೇಶಿಸಿರುವ ಆಂಗ್ಲಮಾಧ್ಯಮದ ಪಬ್ಲಿಕ್ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಮಕ್ಕಳನ್ನು ಇಂಗ್ಲೀಷ್ ವ್ಯಾಮೋಹಕ್ಕೆ ಸಿಲುಕಿಸುವ ಎಲ್ಲಾ ಸಾಧ್ಯತೆಯೂ ಇದ್ದು, ಹುಯ್ಯೋ ಹುಯ್ಯೋ ಮಳೆರಾಯ ಹಾಡಿನ ಬದಲಿಗೆ ರೇನ್ ರೇನ್ ಗೋ ಎವೇ ಎಂಬ ಇಂಗ್ಲೀಷ್ ಹಾಡು ಹಳ್ಳಿಯ ಮಕ್ಕಳಲ್ಲಿಯೂ ಕೇಳಿಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದೂ ಅನಿಲ್ ಆತಂಕ ವ್ಯಕ್ತಪಡಿಸಿದರು. ಸಮಥ೯ ಕನ್ನಡಿಗರು ಸಂಸ್ಥೆಯ ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಮಾತನಾಡಿ, ಬೇರೆ ಬೇರೆ ವೖತ್ತಿಯಲ್ಲಿರುವ ಕನ್ನಡಾಭಿಮಾನಿಗಳು ಸೇರಿಕೊಂಡು 14 ವಷ೯ದ ಹಿಂದೆ ಪ್ರಾರಂಭಿಸಿದ ಸಮಥ೯ ಕನ್ನಡಿಗರು ಸಂಸ್ಥೆ ಇಂದು ಕೊಡಗೂ ಸೇರಿದಂತೆ ರಾಜ್ಯವ್ಯಾಪಿ ವಿವಿಧ ಕಾಯ೯ಕ್ರಮಗಳನ್ನು ಆಯೋಜಿಸುತ್ತಿದ್ದು, ಸಾಂಸ್ಕೖತಿಕ ವೇದಿಕೆಯನ್ನು ಪ್ರತಿಭಾವಂತರಿಗೆ ನೀಡುತ್ತಾ ಬಂದಿದೆ ಎಂದರು. ಮಡಿಕೇರಿ ಜೀವವಿಮಾ ನಿಗಮದ ಶಾಖಾಧಿಕಾರಿ ದೀಪಕ್ ಕುಮಾರ್ ಸುರ ಮಾತನಾಡಿ, ಕನ್ನಡ ಭಾಷೆಯನ್ನು ಕಲಿಯುವುದು ಸುಲಭವಾಗಿದ್ದು, ಪರಭಾಷಿಕರೂ ಸುಲಭವಾಗಿ ಕನ್ನಡ ಕಲಿತು ಸಾಹಿತ್ಯ ಪ್ರೇಮಿಗಳಾಗಬೇಕೆಂದು ಕೋರಿದರು. ಸಮಥ೯ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಹೇಮಂತ್ ಹೊಸೂರು ವೇದಿಕೆಯಲ್ಲಿದ್ದರು. ಚೆರಿಯಮನೆ ಗಾಯತ್ರಿ ನಿರೂಪಿಸಿದರು. ಕಡ್ಲೇರ ತುಳಸಿ ಸ್ವಾಗತಿಸಿದರು.
ಸಮಥ೯ ಕನ್ನಡಿಗರು ಸಂಸ್ಥೆಯಿಂದ ವಾಷಿ೯ಕ ಸನ್ಮಾನಕ್ಕೆ ಭಾಜನರಾದವರು :: ಟಿ.ಪಿ ರಮೇಶ್ ಮಡಿಕೇರಿ ( ಸಾಹಿತ್ಯ ಸಂಘಟನೆ) , ಕುಂಡ್ಯೊಳಂಡ ದಿನೇಶ್ ಕಾಯ೯ಪ್ಪ ನಾಪೋಕ್ಲು (ಕ್ರೀಡಾ ಸಂಘಟನೆ) ಆರ್.ಕೆ ಬಾಲಚಂದ್ರ ಕುಶಾಲನಗರ ( ಕನ್ನಡದಲ್ಲಿ ಬ್ಯಾಂಕಿಂಗ್ ಮಾಗ೯ದಶ೯ನ) ಅರುಣ್ ಶೆಟ್ಟಿ ಮಡಿಕೇರಿ (ಸಮಾಜಸೇವೆ) , ತೇಲಪಂಡ ಆರತಿ ಸೋಮಯ್ಯ ಸ್ವಸ್ಥ ಶಿಕ್ಷಣ ಸಂಸ್ಥೆ ಸುಂಟಿಕೊಪ್ಪ (ಶಿಕ್ಷಣ), , ನಿಖಿಲ್ ರಾಮಮೂತಿ೯ ವಿರಾಜಪೇಟೆ (ಬಿದಿರು ಕೖಷಿ), ಚಿತ್ರಾ ಆಯ೯ನ್ ಮಡಿಕೇರಿ (ಸಂಗೀತ), ಸಂಗೀತ ರವಿರಾಜ್ ಸಂಪಾಜೆ (ಸಾಹಿತ್ಯ), ಎಸ್ ಕೆ ಲಕ್ಷ್ಮೀಶ್ ಮಡಿಕೇರಿ (ಮಾಧ್ಯಮ), ಓಬಳೇಶ್ವರ ಮಡಿಕೇರಿ (ಪೌರಸೇವೆ) ಬೆಂಗಳೂರಿನ ಲಕ್ಷ್ಮಿ ಲಿಂಗೇಶ್ (ಸಮಾಜಮುಖಿ ಕಾಯ೯) ಸನ್ಮಾನವನ್ನು ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೃಷ್ಣ ನೆರವೇರಿಸಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಜಿಲ್ಲಾ ಎಲ್ ಐಸಿ ಯ ಶಾಖಾಧಿಕಾರಿ ದೀಪಕ್ ಕುಮಾರ್, ಸಮಥ೯ ಕನ್ನಡಿಗ ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಜಯಕುಮಾರ್ ಹಾಜರಿದ್ದರು.