ಸೋಮವಾರಪೇಟೆ ನ.7 NEWS DESK : ಕಿರಗಂದೂರು ಗ್ರಾಮದ ಜನತಾಕಾಲನಿಯ ಶ್ರೀ ಮಂಜುನಾಥ ಸ್ವಸಹಾಯ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ವಿಷನ್‍ಸ್ಪ್ರಿಂಗ್ ಫೌಂಡೇಶನ್ ಸಂಸ್ಥೆ ತಜ್ಞರು ನೇತ್ರಪರೀಕ್ಷೆ ನಡೆಸಿದರು. 114 ಮಂದಿ ಪರೀಕ್ಷೆ ಮಾಡಿಸಿಕೊಂಡರು. 80 ಮಂದಿಗೆ ಸ್ಥಳದಲ್ಲೇ ಕನ್ನಡಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಕೂಲಿ ಕಾರ್ಮಿಕರು ಕಣ್ಣಿನ ಅರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ದೃಷ್ಟಿ ಮಂಕಾದ ಸಂದರ್ಭ ಪರೀಕ್ಷೆ ಮಾಡಿಸಿಕೊಂಡು ಕನ್ನಡಕ ಹಾಕಿಕೊಂಡರು ಸಮಸ್ಯೆ ಬಗೆಹರಿಯುತ್ತದೆ. ಎಲ್ಲಾ ಕಾಲನಿಗಳಲ್ಲಿ ವರ್ಷಗೊಮ್ಮೆಯಾದರೂ ಉಚಿತ ಶಿಬಿರಗಳು ನಡೆದರೆ ಬಡವರಿಗೆ, ವೃದ್ಧರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಫೌಂಡೇಶನ್‍ನ ಸಿಬ್ಬಂದಿಗಳಾದ ಆಶಿಶ್ ಚೌದರಿ, ಅಮಿತ್ ಕುಮಾರ್, ಪುಷ್ಪೇಂದ್ರಯಾದವ್ ಸಂಘದ ಕಾರ್ಯದರ್ಶಿ ಟಿ.ಜೆ.ಗೋಪಾಲ್, ನಾವು ಪ್ರತಿಷ್ಠಾನದ ಪಿ.ಬಿ.ಪೊನ್ನಪ್ಪ ಇದ್ದರು.