ಸುಂಟಿಕೊಪ್ಪ NEWS DESK ನ.10 : ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 17ನೇ ವರ್ಷದ ಓಣಂ ಆಚರಣೆಯ ಪ್ರಯುಕ್ತ ಸ್ಥಳೀಯ ಜಿಯಂಪಿ ಶಾಲಾ ಮೈದಾನದಲ್ಲಿ ಭಾನುವಾರ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಾಡಿಸಲಾಗಿತ್ತು. ಗ್ರಾಮೀಣಾ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಬೆಲೂನ್ ಹೊಡೆಯುವುದು, ಬೆಲೂನ್ ಕಾಲಿನಲ್ಲಿ ಕಟ್ಟಿ ಓಟದ ಸ್ಪರ್ಧೆ, ಕಾಳು ಹೆಕ್ಕುವುದು, ಓಟದ ಸ್ಪರ್ದೆಗಳು, ಪುರುಷರ ಮತ್ತು ಮಹಿಳೆಯರಿಗಾಗಿ ಹಗ್ಗಾಜಗ್ಗಾಟ ಸ್ಪರ್ದೆಗಳು ನಡೆದವು. ಮದ್ಯಾಹ್ನದ ನಂತರ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ದೆಗಳನ್ನು ಏರ್ಪಾಡಿಸಲಾಗಿತ್ತು. ಮಹಿಳೆಯರಿಗೆ ವಿವಿಧ ರೀತಿಯ ಮನೋರಂಜನ ಆಟೋಟ ಸ್ಪರ್ದೆಗಳು ನಡೆದವು. ವಿಜೇತರಿಗೆ ನ.18 ರಂದು ನಡೆಯುವ ಓಣಂ ಆಚರಣೆಯ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷ ಶಶಿಕುಮಾರ್ ತಿಳಿಸಿದರು. ಸಂಘದ ಅಧ್ಯಕ್ಷ ಶಶಿಕುಮಾರ್, ಪದಾಧಿಕಾರಿಗಳಾದ ವಾಸುದೇವ, ಕನೀಸ್, ಶಿವಮಣಿ, ಅನಿಲ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.
Breaking News
- *ಅಮ್ಮತ್ತಿ : ಮಿನಿ ಒಲಿಂಪಿಕ್ಸ್ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ : ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಸಲಹೆ*
- *10ಹೆಚ್ಪಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡದಿದ್ದಲ್ಲಿ ಹೋರಾಟ : ಮನು ಸೋಮಯ್ಯ*
- *ಸೋಮವಾರಪೇಟೆ : ಸಿ ಮತ್ತು ಡಿ ಭೂಮಿ ತೆರವಿಗೆ ವಿರೋಧ : ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲು ರೈತರ ನಿರ್ಧಾರ*
- *ಮಡಿಕೇರಿ ಸವಿತಾ ಸಮಾಜದ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಎಂ.ಟಿ.ಮಧು ಪುನರಾಯ್ಕೆ*
- *ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ : ಆ್ಯಂಬುಲೆನ್ಸ್ ಸೇವೆ ಲಭ್ಯ*
- *ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಸಕ ಎ.ಎಸ್.ಪೊನ್ನಣ್ಣ ಆಯ್ಕೆ*
- *ಕುಶಾಲನಗರ ಸಾಮಿಲ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಆಯ್ಕೆ*
- *ಆದಿವಾಸಿ ಸಮುದಾಯ ನೀಡಿದ ಜೇನುತುಪ್ಪದಲ್ಲಿ ಕಾಡುಗೆಣಸು ಅದ್ದಿ ಸವಿದ ಸಿಎಂ*
- *ರಾಷ್ಟ್ರೀಯ ಮಟ್ಟಕ್ಕೆ ಭವಿಷ್ಯ ಆಯ್ಕೆ*
- *ನ.13 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*