ಗೋಣಿಕೊಪ್ಪಲು ನ.11 NEWS DESK : ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಚತಾ ಹೈ ಸೇವಾ ಕಾರ್ಯಕ್ರಮ ಅಡಿಯಲ್ಲಿ ಸ್ವಚ್ಚತಾ ಶ್ರಮದಾನ ನಡೆಯಿತು. ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 150 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾಲೇಜಿನ ಕ್ಯಾಂಟೀನ್ ಹಾಗೂ ಮಹಿಳಾ ವಸತಿ ಗೃಹದ ಸುತ್ತ ಮುತ್ತ ಬೆಳೆದಿದ್ದ ಕಾಡು ಗಿಡಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಕಾವೇರಿ ಕಾಲೇಜು ಎನ್.ಎಸ್.ಎಸ್ ಯೋಜನಾಧಿಕಾರಿ ಎಂ.ಎನ್. ವನಿತ್ ಕುಮಾರ್ ಮಾತನಾಡಿ, ನಮ್ಮ ಮನೆ ಸುತ್ತಮುತ್ತಲೂ ನಾವು ಸ್ವಚ್ಛ ಮಾಡಿಕೊಳ್ಳಬೇಕು ಆಗ ಮಾತ್ರ ನಮ್ಮ ಪರಿಸರ ಸ್ವಚ್ಛವಾಗಿರುತ್ತದೆ. ಸ್ವಚ್ಚತೆ ಇದ್ದರೆ ಮನಸ್ಸು ಹಗುರವಾಗುತ್ತದೆ ಇದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಎನ್.ಪಿ.ರೀತಾ ಮಾತನಾಡಿ, ಶ್ರಮದಾನ ಮಾಡುವ ಮೂಲಕ ನಮ್ಮ ದೇಹವನ್ನು ಸದೃಢವಾಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿಯೇ ದೇಹವನ್ನು ಮಣಿಸಬೇಕು ಎಂದು ತಿಳಿಸಿದರು. ಎನ್.ಎಸ್.ಎಸ್ ಹಿರಿಯ ನಾಯಕರಾದ ಸೃಜನ್, ರೀಶು ಕಾವೇರಪ್ಪ, ಸಿಂಚನ್ ಸೋಮಣ್ಣ ಹಾಗೂ ಎನ್.ಎಸ್.ಎಸ್ ನಾಯಕರಾದ ರಾನ್ಸಿ, ಧ್ಯನ್ಯ, ಹಷೀತಾ, ಸಚಿನ್, ವಿಷ್ಮ ಮತ್ತಿತರರು ಇದ್ದರು.