ಸೋಮವಾರಪೇಟೆ NEWS DESK ನ.19 : ಕ್ಲಾಸ್ ಆಫ್ 99 ಗ್ರೂಪ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ ನಡೆಯಿತು. ದಂತ ವೈದ್ಯ ರಾಕೇಶ್ ಪಟೇಲ್ ಶಿಬಿರಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಹೃದಯ ಆರೋಗ್ಯ ತಪಾಸಣೆ ಮಾಡಿದರು. ರೋಗಿಗಳಿಗೆ ಇಸಿಜಿ, ಇಕೊ ತಪಾಸಣೆ ನಡೆಸಲಾಯಿತು. ಸಾಮಾನ್ಯ ವೈದ್ಯಕೀಯ ತಪಾಸಣೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಡಾ. ಧನುಂಜಯ ಮೇದಪ್ಪ ಮತ್ತು ಡಾ. ಎನ್.ಅಮೂಲ್ಯ ನಡೆಸಿದರು. ನೇತ್ರ ತಜ್ಞ ಕಿರಣ್ ಭಟ್, ಮೂಳೆತಜ್ಞ ಜೀವನ್ ರವಿ ತಪಾಸಣೆ ನಡೆಸಿ, ಔಷಧಿ ಮಾತ್ರೆಗಳನ್ನು ವಿತರಿಸಿದರು. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ರಕ್ತದಾನದ ಪ್ರಾಮುಖ್ಯತೆಯನ್ನು ತಿಳಿಸಿದರು. ಮಡಿಕೇರಿಯ ಪಶು ವೈದ್ಯರಾದ ವಿಭಾ ರಘುರಾಮ್ ಅವರು ಸಾಕುಪ್ರಾಣಿಗಳಿಗೆ ಚಿಕಿತ್ಸೆ ಮತ್ತು ನಾಯಿ ಬೆಕ್ಕುಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ನೀಡಲಾಯಿತು. 346 ಮಂದಿ ಚಿಕಿತ್ಸೆ ಪಡೆದರೆ, 73 ಜನರು ರಕ್ತ ದಾನ ಮಾಡಿದರು. ಈ ಸಂದರ್ಭ ಇನ್ನರ್‌ವ್ಹೀಲ್ ಅಧ್ಯಕ್ಷೆ ಸಂಗೀತ ದಿನೇಶ್, 99 ಗ್ರೂಪ್‌ನ ಸಂಚಾಲಕಿ ಕುಮುದಾ, ಪ್ರಮುಖರಾದ ಸೌಮ್ಯ, ಧನುಂಜಯ, ಶಿಲ್ಪ, ನಿದಿನ್, ರೂಪ ಮಹೇಶ್, ಸಂದೀಪ್, ಕ್ಲಬ್‌ನ ಸರಿತಾ ರಾಜೀವ್, ಕವಿತಾ ವಿರುಪಾಕ್ಷ, ಆಶಾ ಯೋಗೇಂದ್ರ ಇದ್ದರು.
Breaking News
- *ಸೋಮವಾರಪೇಟೆ : ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ*
- *ಸೋಮವಾರಪೇಟೆ : ಇಂದಿರಾ ಕ್ಯಾಂಟೀನ್ ಕಾಮಗಾರಿ ಅಪೂರ್ಣ : ಅಸಮಾಧಾನ*
- *ಡಿಜಿಟಲ್ ಸಾಕ್ಷರತೆ ಮಹಿಳೆಯರ ಬದುಕಿಗೆ ಸಹಕಾರಿಯಾಗಲಿದೆ : ಆನಂದ್ ಪ್ರಕಾಶ್ ಮೀನಾ*
- *ಸೋಮವಾರಪೇಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ*
- *ಸುಂಟಿಕೊಪ್ಪ : ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರಿಗೆ ಶಿಕ್ಷೆ*
- *ಮಡಿಕೇರಿ : ನ.22 ರಂದು ಉದ್ಯೋಗ ಮೇಳ*
- *ನ.20 ರಂದು ಶಾಂತಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿ : ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ : ಸಮವಸ್ತ್ರ ವಿತರಣೆ*
- *ರಾಷ್ಟ್ರೀಯ ಐಕ್ಯತಾ ದಿನ : ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ*
- *ಮಡಿಕೇರಿಯಲ್ಲಿ ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ*