ಮಡಿಕೇರಿ ನ.28 NEWS DESK : ಕೇರಳದ ಕಾಸರಗೋಡಿನಲ್ಲಿ ನಡೆದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಭಾಗಮಂಡಲದ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಹೆಚ್.ಎಂ.ಜಿತಿಕಾ ಬೆಳ್ಳಿಯ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಚೆಟ್ಟಿಮಾನಿಯ ಮಂಜು ಹಾಗೂ ನಮಿತಾ ದಂಪತಿಯ ಪುತ್ರಿಯಾಗಿರುವ ಜಿತಿಕಾ ಕರಾಟೆ ತರಬೇತುದಾರರಾದ ಕೆ.ಜೆ.ಇಮ್ಯಾನುಯಲ್, ರಾಯ್ ಜೋಸೆಫ್ ಹಾಗೂ ತರಬೇತಿ ಕೇಂದ್ರದ ನಿರ್ದೇಶಕ ನಾಗರಾಜ್ ಅವರುಗಳ ಬಳಿ ತರಬೇತಿ ಪಡೆಯುತ್ತಿದ್ದಾಳೆ.