ಗೋಣಿಕೊಪ್ಪ ನ.29 NEWS DESK : ಅತ್ತೂರು ಪಾಲ್ಮ್ ವ್ಯಾಲಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕ್ರಿಕೆಟ್ ಕಲರವಕ್ಕೆ 4 ತಂಡಗಳಿಗೆ 60 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮಚ್ಚಮಾಡ ಅನೀಶ್ ಮಾದಪ್ಪ ಮಾಲೀಕತ್ವದ, ಸಂಚಾಲಕ ಸಣ್ಣುವಂಡ ಕಿಶೋರ್ ನಾಚಪ್ಪ, ಮುಸ್ತಪಾ ನಾಯಕತ್ವದ ತಾಳೇರಿ ಮೂಂದ್‍ನಾಡ್ ಮೀಡಿಯಾ, ಚಿಮ್ಮಣಮಾಡ ದರ್ಶನ್ ದೇವಯ್ಯ, ಸಂಚಾಲಕ ಎನ್. ಎನ್. ದಿನೇಶ್, ಹಾಗೂ ಆದರ್ಶ್ ನಾಯಕತ್ವದ ಕುತ್ತ್‍ನಾಡ್ ಮೀಡಿಯಾ ವಾರಿಯರ್ಸ್, ಪುತ್ತಂ ಪ್ರದೀಪ್ ನಾಯಕತ್ವದ, ಸಂಚಾಲಕ ಸಿಂಗಿ ಸತೀಶ್, ಮಂಡೇಡ ಅಶೋಕ್ ನಾಯಕತ್ವದ ಮರೆನಾಡ್ ಪ್ರೆಸ್ ಟೀಂ, ಆನಂದ್‍ಕುಮಾರ್ ಮಾಲೀಕತ್ವದ, ವಿ.ವಿ.ಅರುಣ್ ಕುಮಾರ್, ಜಯಪ್ರಕಾಶ್ ನಾಯಕತ್ವದ ಅಂಜಿಗೇರಿನಾಡ್ ಮೀಡಿಯಾ ಕಿಂಗ್ಸ್ ತಂಡಗಳಿಗೆ ಆಯ್ಕೆ ನಡೆಯಿತು. 60 ಆಟಗಾರರು ಬಿಡ್ಡೀಂಗ್‍ನಲ್ಲಿ ಭಾಗವಹಿಸಿದ್ದರು. ಜನವರಿ 5 ರಂದು ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೂರ್ನಿ ನಡೆಯುವ ಬಗ್ಗೆ ಘೋಷಿಸಲಾಯಿತು. ಪಾಲ್ಮ್ ವ್ಯಾಲಿ ರೆಸಾರ್ಟ್ ಉದ್ಯಮಿ ವಿಖ್ಯಾತ್ ಮಾಚಯ್ಯ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಪತ್ರಕರ್ತರ ಕ್ರೀಡಾಕೂಟ ಯಶಸ್ವಿಯಾಗಲಿ, ಮಾಧ್ಯಮಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕ್ರಿಕೆಟ್ ಟೂರ್ನಿಯಲ್ಲಿ ಪತ್ರಕರ್ತರ ಸಹಭಾಗಿತ್ವ ಹೆಚ್ಚಾಗುವುದರಿಂದ ಒಗ್ಗಟ್ಟು ಸಾಧ್ಯವಿದೆ. ಎಲ್ಲರೂ ಒಂದಾಗಿ ಕ್ರಿಕೆಟ್ ಯಶಸ್ವಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾರೈ ಮಾತನಾಡಿ, ವಿಭಿನ್ನ ರೀತಿಯಲ್ಲಿ ಪೊನ್ನಂಪೇಟೆ ತಾಲೂಕು ಸಂಘ ಕಾರ್ಯಕ್ರಮ ಆಯೋಜನೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದು, ಕ್ರಿಕೆಟ್ ಜಿಲ್ಲಾ ಪತ್ರಕರ್ತರ ಪಾಲ್ಗೊಳ್ಳುವಿಕೆಗೆ ವೇದಿಕೆಯಾಗಿದೆ ಎಂದರು. ತಾಲೂಕು ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಜಿಲ್ಲೆಯ ನಾಲ್ಕು ತಂಡಗಳು ಪಾಲ್ಗೊಳ್ಳುತ್ತಿದ್ದು, ತಂಡಗಳಿಗೆ ಪೊನ್ನಂಪೇಟೆ ತಾಲೂಕಿಗೆ ಒಳಪಡುವ 4 ನಾಡ್‍ಗಳ ಹೆಸರುಗಳು ಸೇರಿಸಲಾಗಿದೆ. ಸ್ಥಳೀಯವಾಗಿ ಪತ್ರಕರ್ತರು ಮತ್ತು ಸಾರ್ವಜನಿಕರ ಒಡನಾಟಕ್ಕೆ ನಾಂದಿಯಾಗಿದ್ದು, ಮರೆನಾಡ್, ತಾಳೇರಿ ಮೂಂದ್ ನಾಡ್, ಅಂಜಿಗೇರಿ ನಾಡ್, ಕುತ್ತ್‍ನಾಡ್ ತಂಡಗಳನ್ನು ಪತ್ರಕರ್ತರು ಪ್ರತಿನಿಧಿಸಲು ಅವಕಾಶವಾಗಿದೆ ಎಂದರು. ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ನಿರ್ವಹಣೆ ಮಾಡಿದರು. ಚಿಮ್ಮಣಮಾಡ ದರ್ಶನ್ ದೇವಯ್ಯ ಸ್ವಾಗತಿಸಿದರು. ಸಿಂಗಿ ಸತೀಶ್ ವಂದಿಸಿದರು. ಟೂರ್ನಿ ಸಂಚಾಲಕ ವಿ.ವಿ.ಅರುಣ್‍ಕುಮಾರ್, ಪ್ರ. ಕಾರ್ಯದರ್ಶಿ ಎನ್.ಎನ್.ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಸದಸ್ಯರಾದ ಮನೋಜ್‍ಕುಮಾರ್, ಅಣ್ಣೀರ ಹರೀಶ್ ಮಾದಪ್ಪ ಇದ್ದರು.